ಪಂಜಾಬ್​:ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಹಳೇ ಮಾತೊಂದಿದೆ. ಆದರೆ ಪುರುಷರ ಕಾಲೆಳೆಯಲು ಹೋಗಿ ಗಡ್ಡದ ವಿಷಯವನ್ನು ಎಳೆದು ತಂದು ತಮಾಷೆ ಮಾಡಿದ ಕಾಮಿಡಿಯನ್ ಮಹಿಳೆಯೊಬ್ಬಳು ಇಕ್ಕಟ್ಟಿಗೆ ಸಿಲುಕಿದ್ದು, ಕೊನೆಗೆ ಕ್ಷಮೆ ಯಾಚಿಸುವಂತಾಗಿದೆ. ಮಾತ್ರವಲ್ಲ, ಆಕೆಯ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.
ಪಂಜಾಬ್​ನ ಕಾಮಿಡಿಯನ್ ಭಾರತಿ ಸಿಂಗ್ ಎಂಬಾಕೆ, ವಿಡಿಯೋ ಒಂದರಲ್ಲಿ ಆಡಿದ್ದ ಮಾತುಗಳೇ ಆಕೆಗೆ ಮುಳುವಾಗಿದ್ದು, ಅದು ವೈರಲ್ ಕೂಡ ಆಗಿದೆ. ಪುರುಷರ ಕುರಿತು ಮಾತನಾಡಿದ್ದ ಈಕೆ, ಗಡ್ಡ ಹಾಗೂ ಮೀಸೆಯಿಂದ ಹಲವು ಪ್ರಯೋಜನ ಇದೆ. ಹಾಲು ಕುಡಿದು ಬಾಯೊಳಗೆ ಗಡ್ಡದ ಒಂದೆರಡು ಕೂದಲು ಹಾಕಿಕೊಳ್ಳಿ, ಅದು ಶಾವಿಗೆ ಥರ ರುಚಿ ಕೊಡುತ್ತೆ ಎಂದಿದ್ದ ಈಕೆ, ಪುರುಷರ ಗಡ್ಡದಲ್ಲಿ ಹೇನೂ ಇರುತ್ತೆ ಎಂದು ಹೇಳಿದ್ದ ವಿಡಿಯೋ ಕಳೆದೆರಡು ದಿನಗಳಿಂದ ಹರಿದಾಡಿತ್ತು.
ಈ ಕುರಿತು ಸೋಮವಾರ ರಾತ್ರಿ ಪಂಜಾಬ್​ನ ಅಮೃತಸರ ಪೊಲೀಸರಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿಯವರು ದೂರು ನೀಡಿದ್ದು, ಭಾರತಿ ಸಿಂಗ್ ಹೇಳಿಕೆಯಿಂದ ಸಿಖ್ಖರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ದೂರಿನ ಮೇರೆಗೆ ಭಾರತಿ ಸಿಂಗ್ ವಿರುದ್ಧ ಕೇಸು ದಾಖಲಾಗಿದೆ.
ಅಷ್ಟೇ ಅಲ್ಲದೆ ಭಾರತಿ ಸಿಂಗ್ ವಿರುದ್ಧ ಸಿಖ್ ಸಮುದಾಯದವರು ಭಾರಿ ಪ್ರತಿಭಟನೆಯನ್ನೂ ಮಾಡಿದ್ದು, ಇದರಿಂದ ಮೆತ್ತಗಾದ ಭಾರತಿ ಸಿಂಗ್ ಕ್ಷಮೆ ಯಾಚಿಸಿದ್ದು, ತಾವು ಯಾರನ್ನೂ ನೋಯಿಸುವ ದೃಷ್ಟಿಯಲ್ಲಿ ಹಾಗೆ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ನಾನು ಕೂಡ ಪಂಜಾಬಿನವಳೇ, ಅಮೃತಸರದಲ್ಲಿ ಹುಟ್ಟಿದ್ದು, ನನಗೆ ಪಂಜಾಬಿಗರ ಬಗ್ಗೆ ಗೌರವವಿದೆ ಎಂದೂ ಹೇಳಿದ್ದಾರೆ.
ಗೂಗಲ್​-ಪೇ ವಹಿವಾಟಿನಿಂದಾಗಿ ಸಿಕ್ಕಿಬಿದ್ದ ಕೊಲೆಗಾರ!; ಸ್ನೇಹಿತನ ಪತ್ನಿಯನ್ನು ಗೆಸ್ಟ್​ಹೌಸ್​ಗೆ ಕರೆತಂದು ಸಾಯಿಸಿದ್ದ..

ಮಂಡ್ಯ ಹುಡುಗ್ರ ಅಭಿಮಾನ ನೋಡಿ ‘ಓ ಮೈ ಗಾಡ್’ ಎಂದ ಸನ್ನಿ ಲಿಯೋನ್​!; ನಿಮಗಾಗಿ ರಕ್ತದಾನ ಮಾಡುವೆ ಅಂದ್ರು ನಟಿ!

ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 14 =
Remember me
