ರಾಜ್​ಪಿಪ್ಲಾ:ಗುಜರಾತ್​ನ ನರ್ಮದಾ ನದಿ ತೀರದಲ್ಲಿರುವ 182 ಮೀಟರ್​ ಎತ್ತರದ ಸರ್ದಾರ್​ ವಲ್ಲಭಭಾಯಿ ಅವರ ಏಕತಾ ಮೂರ್ತಿಯನ್ನು ಆನ್​ಲೈನ್​​ನಲ್ಲಿ ಮಾರಾಟಕ್ಕೆ ಇಟ್ಟ ಅಪರಿಚಿತ ವ್ಯಕ್ತಿ ವಿರುದ್ಧ ಪೊಲೀಸರು ಎಫ್​​ಐಆರ್​ ದಾಖಲಿಸಿದ್ದಾರೆ.
ಈಗ ಎಲ್ಲೆಲ್ಲೂ ಕರೊನಾ ವೈರಸ್​ ಅತ್ಯಂತ ಹೆಚ್ಚಾಗಿ ಪ್ರಸರಣವಾಗುತ್ತಿದೆ. ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದಂತೆ, ಅವರಿಗೆ ಚಿಕಿತ್ಸೆ ನೀಡಲು ಹೆಚ್ಚೆಚ್ಚು ಆಸ್ಪತ್ರೆಗಳು, ವೈದ್ಯಕೀಯ ಉಪಕರಣಗಳು, ರಕ್ಷಣಾ ಸಾಧನಗಳು ಬೇಕಾಗುತ್ತವೆ. ಸರ್ಕಾರದ ಖರ್ಚು ಕೂಡ ಹೆಚ್ಚುತ್ತದೆ. ಅದೆಲ್ಲ ಸಹಜ. ಆದರೆ ಈ ವ್ಯಕ್ತಿ ಸರ್ಕಾರದ ಹೊರೆ ಕಡಿಮೆ ಮಾಡುತ್ತೇನೆ ಎಂದು ಎಡವಟ್ಟು ಕೆಲಸ ಮಾಡಿದ್ದಾನೆ.
ಅಪರಿಚಿತ ವ್ಯಕ್ತಿಯೋರ್ವ ಏಕತಾ ಮೂರ್ತಿಯ ಫೋಟೋವನ್ನು ಒಎಲ್​ಎಕ್ಸ್ (OLX) ಹಾಕಿ, 30,000 ಕೋಟಿ ರೂಪಾಯಿಗೆ ಮಾರಾಟಕ್ಕಿದೆ. ಕರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗಳು, ಕೆಲವು ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ನನಗೆ ಈ ಹಣದ ಅಗತ್ಯವಿದೆ ಎಂದು ಬರೆದಿದ್ದ ಎಂದು ಎಫ್​​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳೀಯ ಮಾಧ್ಯಮದಲ್ಲಿ ಈ ಬಗ್ಗೆ ವರದಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಮಾರಕ ಪ್ರಾಧಿಕಾರ ಪೊಲೀಸರಿಗೆ ದೂರು ನೀಡಿದೆ.ಅಪರಿಚಿತ ವ್ಯಕ್ತಿಯ ವಿರುದ್ಧ ಫೋರ್ಜರಿ ಮತ್ತು ವಂಚನೆಯ ಪ್ರಕರಣ ದಾಖಲಾಗಿದೆ.
ಇದು ಸರ್ಕಾರದ ಆಸ್ತಿ. ಅದನ್ನು ಮಾರಾಟ ಮಾಡುವ ಹಕ್ಕು ಜನಸಾಮಾನ್ಯರಿಗೆ ಯಾರಿಗೂ ಇರುವುದಿಲ್ಲ. ಈ ಅಪರಿಚಿತ ವ್ಯಕ್ತಿ ಏಕತಾ ಮೂರ್ತಿಯನ್ನು ಒಎಲ್​ಎಕ್ಸ್​ನಲ್ಲಿ ಹಾಕುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿದ್ದಾನೆ ಎಂದು ಏಕತಾ ಮೂರ್ತಿ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಇಂತಹ ಜಾಹೀರಾತುಗಳು ಅದೆಷ್ಟೋ ಕೋಟಿ ಜನರ ಭಾವನೆಗೆ ಧಕ್ಕೆ ಮಾಡುತ್ತವೆ. ಸರ್ದಾರ್ ವಲ್ಲಭಭಾಯಿ ಅವರನ್ನು ಕೋಟ್ಯಂತರ ಜನರು ತಮ್ಮ ಪೂಜ್ಯ ವ್ಯಕ್ತಿಯನ್ನಾಗಿ ನೋಡುತ್ತಾರೆ ಎಂದು ಹೇಳಿದೆ.
ಜಗತ್ತಿನಲ್ಲೇ ಅತ್ಯಂತ ಎತ್ತರದ ಸ್ಟಾಚ್ಯು ಎಂದೆನಿಸಿಕೊಂಡಿರುವ ಸರ್ದಾರ್​ ವಲ್ಲಭಭಾಯಿ ಅವರ 182 ಮೀಟರ್​ ಎತ್ತರದ ಏಕತಾ ಮೂರ್ತಿಯನ್ನು 2018ರಲ್ಲಿ ಪ್ರಧಾನಮಂತ್ರಿ ಮೋದಿ ಲೋಕಾರ್ಪಣೆಗೊಳಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 1 =
Remember me
