ರಂಗಾರೆಡ್ಡಿ, ತೆಲಂಗಾಣ:ಸೋಮವಾರ (ಅ.16) ಅಂಗಡಿಯೊಂದರಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಧಗಧಗನೆ ಹೊತ್ತಿ ಉರಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:‘ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ’…ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ವಿಶೇಷ ಮನವಿ ಮಾಡಿದ ಯುಎನ್ ಮತ್ತು ಡಬ್ಲ್ಯುಎಚ್​​​​ಒ ಮುಖ್ಯಸ್ಥರು
“ಸೋಮವಾರ ಬೆಳಗ್ಗೆ 6:00 ಗಂಟೆಗೆ ವನಸ್ಥಲಿಪುರಂನಲ್ಲಿರುವ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಮಗೆ ಕರೆ ಬಂದಿತ್ತು. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಆದ್ರೆ, ಇದು ಇನ್ನೂ ಖಚಿತವಾಗಿಲ್ಲ. ಶಾಲಾ, ಲಗೇಜ್ ಬ್ಯಾಗ್‌ಗಳು ಮತ್ತು ಇತರ ವಸ್ತುಗಳನ್ನು  ಮಾರಾಟ ಮಾಡುವ ಎರಡು ಶಟರ್ ಅಂಗಡಿಗೆ ಅಗ್ನಿ ತಗುಲಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ” ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#WATCH| Fire broke out at a shop in Telangana's Rangareddypic.twitter.com/5i4olnjfxw
— ANI (@ANI)October 16, 2023

ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಆಗಸ್ಟ್ 12 ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚಂದಾನಗರ ಪ್ರದೇಶದ ಮಾಲ್‌ನಲ್ಲಿ ಇದೇ ರೀತಿ ಬೆಂಕಿ ಕಾಣಿಸಿಕೊಂಡಿತ್ತು,(ಏಜೆನ್ಸೀಸ್).
ICCWC2023 INDvsPAK: ‘ನೀಲಿ ಜೆರ್ಸಿ​ ನೋಡಿದಾಗಲೆಲ್ಲಾ ಪಾಕಿಸ್ತಾನದ ಆಟಗಾರರು ನರ್ವಸ್ ಆಗುತ್ತಾರೆ’; ಕ್ರಿಕೆಟ್​ ಅಭಿಮಾನಿ ಬಶೀರ್ ಚಾಚಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
