ಭೋಪಾಲ್​:ಕೆಲಸದಿಂದ ತೆಗೆದು ಹಾಕಿದ ಮಾಲೀಕನ ವಿರುದ್ಧ ಬಸ್​ ಕಂಡಕ್ಟರ್​ ಓರ್ವ ತನ್ನದೇ ಶೈಲಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವುದರ ಜೊತೆ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
ಸುಖೇಜಾ ಬಸ್​ ಸರ್ವೀಸ್​ ಹೆಸರಿನ ಬಸ್​ ಮಧ್ಯಪ್ರದೇಶದ ಸಾತ್ನಾದಿಂದ ಇಂದೋರ್​ಗೆ ಹೋಗುವಾಗ ಬಸ್​ ಮಾಲೀಕ, ಕಂಡಕ್ಟರ್​ನನ್ನು ಬೈದು, ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಆಕ್ರೋಶಗೊಂಡ ಕಂಡಕ್ಟರ್, ಬಸ್​ನ ಡಿಸ್​​ಪ್ಲೇ ಬೋರ್ಡ್​ನಲ್ಲಿದ್ದ “ಸುಖೇಜಾ ಬಸ್​ ಸರ್ವೀಸ್” ಹೆಸರನ್ನು ಬದಲಾಯಿಸಿ, ಮಾಲೀಕನ ಹೆಸರಿನಿಂದ ಮುಂದೆ ಕೆಟ್ಟ ಪದವನ್ನು ಸೇರಿಸಿ, ಸೇಡು ತೀರಿಸಿಕೊಂಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಕಂಡಕ್ಟರ್​, ತನ್ನ ಕೆಲಸವನ್ನು ಬಿಡುವ ಮುನ್ನ ಬಸ್​ನಲ್ಲಿದ್ದ ಸಿಪಿಯು ಡಿಸ್​ಪ್ಲೇ ಪಾಸ್​ವರ್ಡ್​ ಸಹ ಬದಲಾಯಿಸಿ, ಹೋಗಿದ್ದಾನೆ. ಇದೀಗ ಬಸ್​ ಮಾಲೀಕ 55 ಸಾವಿರ ರೂಪಾಯಿ ಖರ್ಚು ಮಾಡಿ ಹೊಸ ಸಿಪಿಯು ಅನ್ನು ಅಳವಡಿಸಿದ್ದಾರೆ. ಅಲ್ಲದೆ, ಕಂಡಕ್ಟರ್​ ವಿರುದ್ಧ ದೂರು ಸಹ ದಾಖಲಿಸಿದ್ದಾರೆ.
ಬಸ್​ನ ಡಿಸ್​​ಪ್ಲೇ ಬೋರ್ಡ್​ನಲ್ಲಿ ಕೆಟ್ಟ ಬೈಗುಳ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆಯಾಗುತ್ತಿದೆ.(ಏಜೆನ್ಸೀಸ್​)
सतना से इंदौर जाने वाली सुखेजा बस सर्विस के मालिक ने अपने एक कंडक्टर को गाली देकर नौकरी से निकाल दिया उसने गाली का बदला किस प्रकार लिया, आप बस डिस्प्ले देखकर समझ जाएंगे उसने जाते जाते display CPU का पासवर्ड बदल दिया है । अब नया CPU इंस्टाल होगा जिसकी कीमत 55000 है🤣 😂#घोरकलजुगpic.twitter.com/xaPFZzam8V
— अपूर्व اپوروا Apurva Bhardwaj (@grafidon)October 19, 2022

ಈ ಊರಲ್ಲಿ ಹಾಲು-ಮೊಸರು ಉಚಿತ! ಅಪ್ಪಿತಪ್ಪಿ ಮಾರಾಟ ಮಾಡಿದ್ರೆ ಎದುರಾಗುತ್ತೆ ಭಾರಿ ಗಂಡಾಂತರ

ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಈ ಇಬ್ಬರು ಆಟಗಾರರ ಮೇಲೆ ಹಚ್ಚಿದೆ ನಿರೀಕ್ಷೆ: ಸಂಜಯ್​ ಬಂಗಾರ್ ಅಭಿಪ್ರಾಯ​

ಶಾಸಕ ಎಂ.ಬಿ. ಪಾಟೀಲ ಅವರ ಪತ್ನಿಯ ಫೇಸ್​ಬುಕ್ ಹ್ಯಾಕ್: ಕಿಡಿಗೇಡಿಗಳಿಂದ ಬಾಕ್ಸಿಂಗ್​ ವಿಡಿಯೋ ಅಪ್​ಲೋಡ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − eight =
Remember me
