ಚಿಲಿ:ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ.  ಚಿಲಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಚಿಲಿಯ ಪಂಗುಲೆಮೊ ವಿಮಾನ ನಿಲ್ದಾಣ (ಟಿಎಲ್‌ಎಕ್ಸ್) ಬಳಿ ವಿಮಾನ ಪತನಗೊಂಡಿದೆ.. ಮೃತ ಪೈಲಟ್ ಅನ್ನು ಸ್ಪೇನ್ ವಾರ್ಡ್ ಫರ್ನಾಂಡೋ ಸೋಲನ್ಸ್ ರೋಬಲ್ಸ್ (58) ಎಂದು ಗುರುತಿಸಲಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಜನವರಿ 15 ರಂದು ಸಂಜೆ 4:30 ರ ಸುಮಾರಿಗೆ ಐರೆಸ್ ಟರ್ಬೊ ಟ್ರಶ್ ವಿಮಾನವು ಬೆಂಕಿ ನಿಯಂತ್ರಣ ಕಾರ್ಯಾಚರಣೆಗಳನ್ನು ನಡೆಸುತ್ತಿರುವಾಗ ನಿಯಂತ್ರಣವನ್ನು ಕಳೆದುಕೊಂಡಿತು. ಆದರೆ ಹೆದ್ದಾರಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ವಿಮಾನ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ನಂತರ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮೇಲೆ ವಿಮಾನದ ಅವಶೇಷಗಳು ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಚಿಲಿಯ ಕೃಷಿ ಸಚಿವಾಲಯ ಪೈಲಟ್‌ನ ಸಾವನ್ನು ದೃಢಪಡಿಸಿದೆ. ಮೃತರು ರಾಷ್ಟ್ರೀಯ ಅರಣ್ಯ ನಿಗಮದಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
🔴TALCAImpactante registro del accidente de la avioneta de@conaf_minagrique combatia#IncendioForestalen sector Panguilemo en Talca, se lamenta el fallecimiento del piloto de la aeronave y 3 personas heridas.Se mantiene corte de#Ruta5Suren el km 247
Video de@francogp1pic.twitter.com/eFL2AWxBea
— RNE_CH XIII_Reinaldo (@Rne1351Reinaldo)January 15, 2024

ಎರಡು ಯುಟಿಲಿಟಿ ಕಂಬಗಳ ನಡುವೆ ವಿಮಾನದ ರೆಕ್ಕೆಗಳು ನೇತಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳೀಯರು ಬೆಂಕಿಯನ್ನು ನಿಯಂತ್ರಿಸಲು ಯತ್ನಿಸಿದರು. CONAF ಅಪಘಾತದ ತನಿಖೆ ನಡೆಸುತ್ತಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಅದು ಖಚಿತಪಡಿಸಿದೆ.
Fíjate en este video. Se da con un cable eléctrico.
Se ve el chispazo justo antes de perder el control (es justo lo que no se ve en el video de este tuit).pic.twitter.com/imfyDtYlrg
— Q*bert (@Cotidianeous)January 16, 2024

ಮೃತ ಪೈಲಟ್‌ಗೆ ಸಾಕಷ್ಟು ಅನುಭವವಿದ್ದು, ಅಪಘಾತ ಹೇಗೆ ಸಂಭವಿಸಿತು ಎಂಬುದು ಅರ್ಥವಾಗುತ್ತಿಲ್ಲ ಎಂದು CONAF ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಶ್ಚಿಯನ್ ಲಿಟಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಏರ್ಲೈನ್ಸ್ ಏರ್ ಆಂಡಿಸ್ ಸ್ಪಾ ಕಂಪನಿಯು ಈ ವಿಮಾನವನ್ನು ನಿರ್ವಹಿಸುತ್ತದೆ.
ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ ಯಶ್​​


ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × two =
Remember me
