ನವದೆಹಲಿ:ದೇಶದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ನೌಕಾಪಡೆಯ ಹೆಲಿಕಾಪ್ಟರ್ ಚಲಾಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ನೌಕಾಪಡೆಯಲ್ಲೂ ಮಹಿಳೆಯರಿಗೆ ಮುಂಚೂಣಿಯ ಅವಕಾಶ ಸಿಕ್ಕಂತಾಗಿದೆ.
ಸಬ್​ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸ.ಲೆ. ರಿತಿ ಸಿಂಗ್ ದೇಶದ ಪ್ರಪ್ರಥಮ ಏರ್​ಬೋರ್ನ್​ ಟ್ಯಾಕ್ಟಿಷಿಯನ್ಸ್​ ಆಗಿ ಆಯ್ಕೆ ಆಗಿದ್ದು, ಇವರು ಯುದ್ಧನೌಕೆಯ ಡೆಕ್​​ನಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಇಂದು ಐಎನ್​ಎಸ್​ ಗರುಡದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ನೌಕಾಪಡೆಯ 17 ಅಧಿಕಾರಿಗಳ ತಂಡಕ್ಕೆ ಇವರು ಈ ಮೂಲಕ ಸೇರಿಕೊಂಡಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಮೊದಲಿಗೆ ಇವರನ್ನು ಏರ್​ಬೋರ್ನ್​ ಟ್ಯಾಕ್ಟಿಷಿಯನ್ಸ್​(ಅಬ್ಸರ್ವರ್ಸ್​) ಆಗಿ ಸೇರಿಸಿಕೊಳ್ಳಲಿದ್ದು, ಬಳಿಕ ಇವರಿಗೆ ಯುದ್ಧನೌಕೆಯ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಲು ಹಾದಿ ಸುಗಮವಾಗಲಿದೆ. ಈ ಹಿಂದೆ ನಿಗದಿತ ಏರ್​ಕ್ರಾಫ್ಟ್​ಗೆ ಮಹಿಳೆಯರಿಗೆ ನಿರ್ಬಂಧವಿತ್ತು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
