ಕಠ್ಮಂಡು:ಚೀನಾದಲ್ಲಿ ವಿದ್ಯಾಭ್ಯಾಸ ಮಾಡಿ ವಾಪಸಾಗಿರುವ ಭಾರತದ ಉಪಖಂಡ ನೇಪಾಳ ಮೂಲದ ವಿದ್ಯಾರ್ಥಿಯೊಬ್ಬನಲ್ಲಿ ಮಾರಕ ಕೊರೊನಾ ವೈರಸ್​ ಪತ್ತೆಯಾಗಿದೆ.
ನೇಪಾಳದ ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯದ ಇದನ್ನು ಖಚಿತಪಡಿಸಿದ್ದು, ಇದು ಭಾರತದ ಉಪಖಂಡದಲ್ಲಿ ಪತ್ತೆಯಾದ ಮಾರಕ ವೈರಸ್​ನ ಮೊದಲ ಪ್ರಕರಣ ಎಂದು ತಿಳಿಸಿದೆ.
ಝೋನೋಟಿಕ್ ಮತ್ತು ಇತರ ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ. ಹೇಮಂತ್​ ಚಂದ್ರ ಓಜಾ, ಚೀನಾದ ವೂಹಾದಲ್ಲಿರುವ ನೇಪಾಳ ಮೂಲದ ವಿದ್ಯಾರ್ಥಿಯನ್ನು ತಪಾಸಣೆಗೆ ಒಳಪಡಿಸಿದ್ದು ವೈರಸ್​ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಹಾಂಗ್​ಕಾಂಗ್​ನ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಪಾಸಣೆಗೆ ಒಳಡಿಸಲಾಗಿತ್ತು. ಇದರ ವರದಿ ಗರುವಾರ ಸಂಜೆ ಬಂದಿದ್ದು, ಕೊರೊನಾ ವೈರಸ್​ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾರಕ ವೈರಸ್​ ಪೀಡಿತ ವ್ಯಕ್ತಿ ಚೀನಾದಿಂದ ಜನವರಿ 3ರಂದು ನೇಪಾಳಕ್ಕೆ ಬಂದಿದ್ದು, ಉಸಿರಾಟದ ತೊಂದರೆ ಎಂದು ಜನವರಿ 13ಕ್ಕೆ ಸ್ಥಳಿಯ ಆಸ್ಪತ್ರೆಗೆ ತೆರಳಿದ್ದ. ಆದರೆ ಉಸಿರಾಟದ ಸಮಸ್ಯೆ ಬಗೆಹರಿದೊಡನೆ ಸ್ಥಳಿಯ ಆಸ್ಪತ್ರೆಯಿಂದ ಮನೆಗೆ ತೆರಳಿದ್ದ. ನಂತರ ಆತನನ್ನು ಹಾಂಗ್​ಕಾಂಗ್​ನಲ್ಲಿ ಪರಿಕ್ಷೆಗೆ ಒಳಪಡಿಸಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nineteen =
Remember me
