ನವದೆಹಲಿ:ಕೋವಿಡ್​-19 ಪಿಡುಗಿಗೆ ಲಸಿಕೆ ಕಂಡುಹಿಡಿಯಲು ವಿವಿಧ ರಾಷ್ಟ್ರಗಳ ಕಂಪನಿಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಈಗಾಗಲೆ ಕೆಲವು ಲಸಿಕೆಗಳು ಮಾನವರ ಮೇಲಿನ ಮೂರು ಹಂತಗಳ ಪರೀಕ್ಷೆಗಳಿಗೆ ಒಳಪಟ್ಟಿವೆ. ಈ ಪರೀಕ್ಷೆಗಳು ಮುಗಿಯುತ್ತಲೇ ಯಾವ್ಯಾವ ರಾಷ್ಟ್ರಗಳಿಗೆ ಎಷ್ಟೆಷ್ಟು ಲಸಿಕೆಗಳು ಸಿಗಲಿವೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಇಂದೊಂದು ರೀತಿಯಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆದಂತೆ ಎಂದು ಭಾಸವಾಗುತ್ತಿದ್ದರೂ, ಸೋಂಕಿನ ತೀವ್ರತೆ ಹೆಚ್ಚಾಗಿರುವ ರಾಷ್ಟ್ರಗಳಿಗೆ ಹೆಚ್ಚಿನ ಲಸಿಕೆಗಳು ಸಿಗಲಿವೆ ಎಂಬುದು ಖಚಿತವಾಗಿದೆ.
ಉದಾಹರಣೆಗೆ ಭಾರತದಲ್ಲಿ ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಭಾರತಕ್ಕಾಗಿ 1 ಸಾವಿರ ದಶಲಕ್ಷ ಕೋವಿಡ್​-19 ಲಸಿಕೆಗಳನ್ನು ಕೊಡಲಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕ ಕೂಡ 1 ಸಾವಿರ ದಶಲಕ್ಷ ಲಸಿಕೆಗಳನ್ನು ಪಡೆದುಕೊಳ್ಳಲಿದೆ. ಆದರೆ, ಇಲ್ಲಿ ಮೂರು ಕಂಪನಿಗಳು ಈ ಲಸಿಕೆಗಳನ್ನು ಪೂರೈಸಲಿವೆ. 600 ದಶಲಕ್ಷ ವಾಯಲ್​ ಚುಚ್ಚುಮದ್ದು ಪೈಜರ್​ ಆ್ಯಂಡ್​ ಬಯೋಎನ್​ಟೆಕ್​ನಿಂದ, ಅಸ್ಟ್ರಾಜೆನೆಕಾ 300 ದಶಲಕ್ಷ ಹಾಗೂ ನೊವಾವ್ಯಾಕ್ಸ್​ 100 ದಶಲಕ್ಷ ವಾಯಲ್​ ಚುಚ್ಚುಮದ್ದುಗಳನ್ನು ಪೂರೈಸಲಿವೆ.
ಯುರೋಪ್​ ಒಕ್ಕೂಟಕ್ಕೆ ಸನೋಫಿ ಆ್ಯಂಡ್​ ಜಿಎಸ್​ಕೆ 300 ದಶಲಕ್ಷ ಮತ್ತು ಜಾನ್ಸ್​ ಆ್ಯಂಡ್​ ಜಾನ್ಸನ್​ 200 ದಶಲಕ್ಷ ಸೇರಿ ಒಟ್ಟು 500 ದಶಲಕ್ಷ ವಾಯಲ್​ ಕೋವಿಡ್​-19 ಲಸಿಕೆಯನ್ನು ಪೂರೈಕೆ ಮಾಡಲಿವೆ. ಜರ್ಮನಿ, ಫ್ರಾನ್ಸ್​, ಇಟಲಿ ಮತ್ತು ನೆದರ್​ಲೆಂಡ್​ಗಳಿಗೆ ಅಸ್ಟ್ರಾಜೆನೆಕಾದಿಂದ 400 ದಶಲಕ್ಷ ವಾಯಲ್​ ಪೂರೈಕೆಯಾಗಲಿದೆ. ಜಿಎವಿಐ ಮತ್ತು ಸಿಇಪಿಐ ಕಂಪನಿಗಳು ಕೂಡ ಅಸ್ಟ್ರಾಜೆನೆಕಾ ಜತೆಗೂಡಿ 300 ದಶಲಕ್ಷ ವಾಯಲ್​ ಚುಚ್ಚುಮದ್ದುಗಳು ಪೂರೈಸಲು ಸಿದ್ಧತೆ ಮಾಡಿಕೊಂಡಿವೆ.
ಇದನ್ನೂ ಓದಿ:ಮುಂಬೈನಲ್ಲಿ ಮಾಯವಾಗುತ್ತಿದೆ ಕರೊನಾ…! ಮೂರು ತಿಂಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಕುಸಿತ
ಬ್ರಿಟನ್​ಗೆ ಪೈಜರ್​ ಆ್ಯಂಡ್​ ಬಯೋಎನ್​ಟೆಕ್​, ಅಸ್ಟ್ರಾಜೆನೆಕಾ, ಸನೋಫಿ ಆ್ಯಂಡ್​ ಜಿಎಸ್​ಕೆ, ಸೈನೋವ್ಯಾಕ್​ನಿಂದ ಚುಚ್ಚುಮದ್ದುಗಳು ಪೂರೈಕೆಯಾಗಲಿದ್ದರೆ, ಬ್ರೆಜಿಲ್​ಗೆ ಅಸ್ಟ್ರಾಜೆನೆಕಾ ಮತ್ತು ಸೈನೋವ್ಯಾಕ್​ನಿಂದ ಒಟ್ಟು 220 ದಶಲಕ್ಷ ವಾಯಲ್​ ಚುಚ್ಚುಮದ್ದುಗಳು ಪೂರೈಕೆಯಾಗಲಿವೆ.
ಯುರೋಪ್​ ಒಕ್ಕೂಟದ ಎರಡು ರಾಷ್ಟ್ರಗಳು ಸೇರಿ ಕೆಲವೊಂದು ರಾಷ್ಟ್ರಗಳು ಮತ್ತು ಬ್ರಿಟನ್​ ಕೋವಿಡ್​-19 ಲಸಿಕೆ ಪೂರೈಕೆಗೆ ಸನೋಫಿ ಮತ್ತು ಜಿಎಸ್​ಕೆಯೊಂದಿಗೆ ಇನ್ನೂ ಮಾತುಕತೆ ನಡೆಸುತ್ತಿವೆ. ಹಲವು ರಾಷ್ಟ್ರಗಳು ಎಷ್ಟು ವಾಯಲ್​ ಲಸಿಕೆಗೆ ಬೇಡಿಕೆ ಇಟ್ಟಿವೆ ಎಂಬ ಸಂಗತಿಯನ್ನು ಬಹಿರಂಗಪಡಿಸಲು ನಿರಾಕರಿಸಿವೆ. ಮಾಡೆರ್ನಾ ಮತ್ತು ಅಸ್ಟ್ರಾಜೆನೆಕಾ ಕಂಪನಿಗಳಿಂದ ಲಸಿಕೆ ಖರೀದಿಸಲು ಇಸ್ರೇಲ್​ ಚಿಂತನೆ ನಡೆಸಿದೆ.
ನಾನು ಡ್ರಾಮಾ ಮಾಡ್ತಿಲ್ಲ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಪೋಸ್ಟ್ ಮಾಡಿದ ನಟಿ ವಿಜಯಲಕ್ಷ್ಮೀ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 2 =
Remember me
