ದಿಮಾಪುರ್​:ಕೋಲ್ಕತ್ತದಿಂದ ನಾಗಾಲ್ಯಾಂಡ್​ನ ದಿಮಾಪುರ್​ಗೆ ಮಾ.24ರಂದು ಆಗಮಿಸಿದ್ದ ವ್ಯಕ್ತಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದು ನಾಗಾಲ್ಯಾಂಡ್​ನಲ್ಲಿ ಮೊದಲ ಕರೊನಾ ಪ್ರಕರಣವಾಗಿದೆ.
ಕರೊನಾ ಸೋಂಕಿತನನ್ನು ಸದ್ಯ ಆಸ್ಸಾಂನ ಗುವಾಹಟಿ ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಗಾಲ್ಯಾಂಡ್​ನ ಬಹುದೊಡ್ಡ ಪಟ್ಟಣವಾದ ದಿಮಾಪುರ್​ದಲ್ಲಿ ಮೊಲದ ಕರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರ್ವಾರಿಪಟ್ಟಿ ಮತ್ತು ಘೋರಪಟ್ಟಿ ಪ್ರದೇಶಗಳು ಸಂಪೂರ್ಣ ಸೀಲ್​ಡೌನ್​ ಆಗಿವೆ. ಹಾಗೇ ಸೋಂಕಿತ ಆಸ್ಸಾಂ ಆಸ್ಪತ್ರೆಗೆ ತೆರಳುವುದಕ್ಕಿಂತ ಮೊದಲು ಅಡ್ಮಿಟ್​ ಆಗಿದ್ದ ದಿಮಾಪುರ್​ದ ಝಿಯೋನ್​ ಆಸ್ಪತ್ರೆಯನ್ನೂ ಬಂದ್ ಮಾಡಲಾಗಿದೆ. ಇದರ ವೈದ್ಯರು, ನರ್ಸ್​​ಗಳನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.
ಕರೊನಾ ಸೋಂಕಿತನ ಕುಟುಂಬದ ಸದಸ್ಯರನ್ನು ಈಗಾಗಲೇ ಸರ್ಕಾರಿ ಕ್ವಾರಂಟೈನ್​ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ನಾಗಾಲ್ಯಾಂಡ್​ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
ಹಾಗೇ ಈ ವ್ಯಕ್ತಿ ಮಾರ್ಚ್​ 24ರಂದು ವಿಮಾನದ ಮೂಲಕ ಕಲ್ಕತ್ತಾದಿಂದ ದಿಮಾಪುರ್​ಗೆ ಬಂದು ಹೋಂ ಕ್ವಾರಂಟೈನ್​ನಲ್ಲಿ ಇದ್ದ. ಇದೀಗ ಆತ ಬಂದಿದ್ದ ವಿಮಾನದಲ್ಲಿದ್ದವರನ್ನು, ಬಂದ ಬಳಿಕ ಈತನ ಸಂಪರ್ಕಕ್ಕೆ ಹೋದವರನ್ನು ಟ್ರೇಸ್​ ಮಾಡುವ ಕಾರ್ಯ ಪ್ರಾರಂಭವಾಗಿದೆ (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + nineteen =
Remember me
