ಜಮ್ಮುಕಾಶ್ಮೀರ:ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಗಡಿ ಪ್ರದೇಶಗಳಲ್ಲಿ ಸಂವಹನ ಮೂಲಸೌಕರ್ಯವನ್ನು ಬಲಪಡಿಸುವ ಅಭಿಯಾನದಿಂದಾಗಿ, ಸಿಯಾಚಿನ್ ಗ್ಲೇಸಿಯರ್ ಜೊತೆಗೆ ಪೂರ್ವ ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಮೊಬೈಲ್ ಫೋನ್‌ಗಳು ರಿಂಗಣಿಸಲು ಪ್ರಾರಂಭಿಸಿವೆ. ಲಡಾಖ್‌ನ ಭದ್ರತೆಗಾಗಿ ನಿಯೋಜಿಸಲಾದ ಸೈನಿಕರ ಜೊತೆಗೆ ಗಡಿ ನಿವಾಸಿಗಳು ಸಹ ಸಂವಹನ ಕ್ರಾಂತಿಯ ಲಾಭವನ್ನು ಪಡೆಯಲಾರಂಭಿಸಿದ್ದಾರೆ.
ಮೊದಲ ಮೊಬೈಲ್ ಟವರ್ ಸ್ಥಾಪನೆಆರ್ಮಿ ಸಿಗ್ನಲ್ ರೆಜಿಮೆಂಟ್ ಸೈನಿಕರು ಪಶ್ಚಿಮ ಲಡಾಖ್‌ನಲ್ಲಿರುವ ಸಿಯಾಚಿನ್ ಗ್ಲೇಸಿಯರ್‌ನಲ್ಲಿ 15,500 ಅಡಿ ಎತ್ತರದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಸಿಬ್ಬಂದಿಯ ಸಹಾಯದಿಂದ ಮೊಬೈಲ್ ಟವರ್ ಸ್ಥಾಪಿಸಿದ್ದಾರೆ. ಈ ಟವರ್ ಅಳವಡಿಕೆಯಿಂದಾಗಿ ಆ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯ ಸೈನಿಕರ ಮೊಬೈಲ್ ಫೋನ್ ಗಳು ರಿಂಗಣಿಸಲಾರಂಭಿಸಿವೆ.

ಮಾತನಾಡುವುದು ಸುಲಭಈಗ ಸೈನಿಕರು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಸಂಬಂಧಿಕರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಇದರೊಂದಿಗೆ 4ಜಿ ಇಂಟರ್ನೆಟ್ ಸೌಲಭ್ಯವೂ ಸಿಗಲಿದೆ. ಸಂವಹನ ಮೂಲಸೌಕರ್ಯವನ್ನು ಬಲಪಡಿಸಲು ಸಿಯಾಚಿನ್ ಪ್ರದೇಶದಲ್ಲಿ ಹೆಚ್ಚಿನ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಯೋಜನೆ ಇದೆ.
ಯುರ್ಗೊ ಗ್ರಾಮದಲ್ಲಿ ಏರ್‌ಟೆಲ್ ಟವರ್ ಸ್ಥಾಪನೆಮತ್ತೊಂದೆಡೆ, ಏರ್‌ಟೆಲ್ ಈ ವಾರ ತನ್ನ ಟವರ್ ಅನ್ನು ಯುರ್ಗೊ ಗ್ರಾಮದಲ್ಲಿ ಸ್ಥಾಪಿಸಿದೆ, ಇದು ಚೀನಾದೊಂದಿಗಿನ ಎಲ್​​​​​ಎಸಿ ಸಮೀಪದಲ್ಲಿದೆ. ಈ ದೂರದ ಪ್ರದೇಶಕ್ಕೆ ಈಗ ಮೊಬೈಲ್ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಹಿಂದೆ, ಈ ಪ್ರದೇಶದಲ್ಲಿ ಮೊಬೈಲ್ ಟವರ್‌ಗಳ ಕೊರತೆಯಿಂದಾಗಿ, ಪೂರ್ವ ಲಡಾಖ್‌ನ ಈ ದೂರದ ಪ್ರದೇಶದ ನಿವಾಸಿಗಳು ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದ್ದರು.
ಮೊಬೈಲ್ ಸೇವೆ ಶೀಘ್ರದಲ್ಲೇ ಆರಂಭಈ ಪ್ರದೇಶದಲ್ಲಿ ನಿಯೋಜಿಸಲಾದ ಸೈನಿಕರು ಮತ್ತು ಐಟಿಬಿಪಿ ಸಿಬ್ಬಂದಿಯೂ ಸಮಸ್ಯೆಗಳನ್ನು ಎದುರಿಸಿದರು. ಇದೀಗ ದೂರದ ಯುರ್ಗೊ ಗ್ರಾಮದಲ್ಲಿ ಮೊಬೈಲ್ ಟವರ್ ಅಳವಡಿಕೆಯಾಗಿದ್ದು, ಆ ಭಾಗದ ಇತರೆ ಗ್ರಾಮಗಳಲ್ಲೂ ಶೀಘ್ರದಲ್ಲಿಯೇ ಮೊಬೈಲ್ ಸೌಲಭ್ಯ ಆರಂಭವಾಗುವ ಭರವಸೆ ಮೂಡಿದೆ.
ಈ ಪ್ರದೇಶಗಳಲ್ಲಿಯೂ ಮೊಬೈಲ್ ಟವರ್‌ ಅಳವಡಿಕೆಈ ಪ್ರದೇಶದ ಕೌನ್ಸಿಲರ್ ಕುಂಚೋಕ್ ಸ್ಟಾಂಜಿನ್ ಏರ್‌ಟೆಲ್ ಅನ್ನು ಶ್ಲಾಘಿಸಿದರು. ಮೊಬೈಲ್ ಸೇವೆಯು ಜನರ ಹಳೆಯ ಬೇಡಿಕೆಯಾಗಿದೆ. ಈ ವಿಚಾರವನ್ನು ಎಲ್ಲಾ ಮೊಬೈಲ್ ಕಂಪನಿಗಳ ಮುಂದೆ ಪ್ರಸ್ತಾಪಿಸಲಾಗುತ್ತಿದೆ. ಜನರ ಈ ಬೇಡಿಕೆಗೆ ಏರ್ ಟೆಲ್ ಕ್ರಮ ಕೈಗೊಂಡಿದೆ. ಪೂರ್ವ ಲಡಾಖ್‌ನ ಫೋಬ್ರಾಂಗ್, ಪೆಂಗಾಂಗ್, ಮಾನ್, ಮೆರಾಕ್, ಚಾರ್ಟ್‌ಸೆ, ನಕ್ಲುಂಗ್‌ಪಾ ಮತ್ತು ಕಾರ್ಗ್ಯಂ ಗ್ರಾಮಗಳಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಮೂಲಕ ಏರ್‌ಟೆಲ್ ಜನರ ಬಹುಕಾಲದ ಬೇಡಿಕೆಯನ್ನು ಇದೇ ರೀತಿ ಪೂರೈಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಂವಹನ ಮೂಲಸೌಕರ್ಯ ಬಲಪಡಿಸುವಿಕೆಪ್ರಸ್ತುತ, ಲಡಾಖ್‌ನ ಗಡಿ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವುದರೊಂದಿಗೆ, ಸಂವಹನ ಮೂಲಸೌಕರ್ಯವನ್ನು ಬಲಪಡಿಸುವ ಕೆಲಸವನ್ನು ತೀವ್ರವಾಗಿ ಮಾಡಲಾಗುತ್ತಿದೆ. ಮೊಬೈಲ್ ಕಂಪನಿಗಳು ತಮ್ಮ ಸೇವೆಗಳನ್ನು ದೂರದ ಪ್ರದೇಶಗಳಿಗೆ ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಆಡಳಿತವು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ.
ಇಸ್ರೇಲ್ ಹಮಾಸ್ ಕದನ: ಸೈರನ್ ಕೇಳಿ ನಡುಗಿದ ಜೀವ, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು…ಭಯಾನಕ ದೃಶ್ಯ ವಿವರಿಸಿದ ಭಾರತೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
