ನವದೆಹಲಿ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ದೆಹಲಿಯ ಪಶುವೈದ್ಯರು ಅಪರೂಪದ ಆಪರೇಷನ್ ಮಾಡಿದ್ದಾರೆ. ಭಾರತದ ಖಾಸಗಿ ಆಸ್ಪತ್ರೆಯಲ್ಲಿ ನಾಯಿಯೊಂದಕ್ಕೆ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು ಆಗಿದೆ.
7 ವರ್ಷದ ಬೀಗಲ್ ಜೂಲಿಯೆಟ್ ಎನ್ನುವ ಶ್ವಾನ ಕಳೆದ ಎರಡು ವರ್ಷಗಳಿಂದ ಮಿಟ್ರಲ್ ವಾಲ್ವ್ ಕಾಯಿಲೆಯಿಂದ ಬಳಲುತ್ತಿತ್ತು. ಈ ರೋಗವು ಮಿಟ್ರಲ್ ಕವಾಟದಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ಇದು ಹೃದಯದ ಎಡ ಮೇಲ್ಭಾಗದ ಕೋಣೆಗೆ ರಕ್ತವನ್ನು ಹಿಂತಿರುಗಿಸಲು ಅನುವು ಮಾಡಿಕೊಡುತ್ತದೆ. ರೋಗವು ಮುಂದುವರಿದರೆ, ಹೃದಯವು ನಿಲ್ಲಬಹುದು. ಇಂತಹ ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ನಾಯಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮೇ 30 ರಂದು ಟ್ರಾನ್ಸ್‌ಕ್ಯಾಥೆಟರ್ ಎಡ್ಜ್-ಟು-ಎಡ್ಜ್ ರಿಪೇರಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದರು. ಇದು ಹೈಬ್ರಿಡ್ ಶಸ್ತ್ರಚಿಕಿತ್ಸೆಯಾಗಿದ್ದು, ಮೈಕ್ರೋಸರ್ಜರಿಯಾಗಿದೆ. ಎರಡು ದಿನಗಳ ನಂತರ ನಾಯಿಯನ್ನು ಬಿಡುಗಡೆ ಮಾಡಲಾಯಿತು. ನಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ರೀತಿಯ ಶಸ್ತ್ರಚಿಕಿತ್ಸೆ ಏಷ್ಯಾದಲ್ಲಿ ಮೊದಲ ಬಾರಿಗೆ. ಮಿಟ್ರಲ್ ವಾಲ್ವ್ ಕಾಯಿಲೆಯು ಭಾರತದಲ್ಲಿ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ನಾಯಿಗಳಲ್ಲಿ ಅತ್ಯಂತ ಸಾಮಾನ್ಯವಾದ ಹೃದಯ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ನಾಯಿಗಳು ಸಾಯುವ ಅಪಾಯ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ.
ಕಾಫಿ ಕಪ್​​ ಹಿಡಿದು ಬಿಕಿನಿಯಲ್ಲೇ ರಸ್ತೆಗಿಳಿದ ಮಾಡೆಲ್; ಪಡ್ಡೆ ಹುಡುಗರು ಫಿದಾ

ಈ ಉಪ್ಪನ್ನು ಖರೀದಿಸಲು ನಿಮ್ಮ ಆಸ್ತಿಯನ್ನೇ ಮಾರಾಟ ಮಾಡಬೇಕಾಗ್ಬಹುದು! ಇದು ವಿಶ್ವದ ಅತ್ಯಂತ ದುಬಾರಿ ಬೆಲೆ ಬಾಳುವ ಉಪ್ಪು..

ಹಾರ್ದಿಕ್​ ಜತೆಗಿನ ವಿಚ್ಛೇದನದ ವದಂತಿಗೆ ಟ್ವಿಸ್ಟ್ ಕೊಟ್ಟ ನತಾಶಾ! ಸಿಕ್ತು ಫುಲ್ ಕ್ಲಾರಿಟಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
