ಗುಜರಾತ್​:ಗುಜರಾತ್‌ನ ಕಕ್ರಾಪರ್‌ನಲ್ಲಿ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 700 MW ಪರಮಾಣು ವಿದ್ಯುತ್ ಸ್ಥಾವರವು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ:ವಿದೇಶಗಳಲ್ಲಿ ದೌರ್ಜ್ಯನ್ಯಕ್ಕೊಳಗಾಗುವ ಹಿಂದುಗಳ ಪರ ಧ್ವನಿ ಹೆಚ್ಚಾಗಬೇಕು: ರಶ್ಮಿ ಸಾಮಂತ್
ಕಕ್ರಾಪರ್ ಪರಮಾಣು ವಿದ್ಯುತ್ ಯೋಜನೆಯಲ್ಲಿ (KAPP) ರಿಯಾಕ್ಟರ್ ಜೂನ್ 30 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಆದ್ರೆ, ಇದುವರೆಗೆ ಅದರ ಸಾಮರ್ಥ್ಯದ 90 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ, “ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಗುಜರಾತ್‌ನಲ್ಲಿ ಮೊದಲ ಅತಿದೊಡ್ಡ ಸ್ಥಳೀಯ 700 MWe ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರ ಘಟಕ 3 ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನಮ್ಮ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಅಭಿನಂದನೆಗಳು” ಎಂದು ಎಕ್ಸ್​ (ಈ ಹಿಂದೆ ಟ್ವಿಟರ್​) ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೈಟ್‌ಗೆ ರಾಜ್ಯ ಮಟ್ಟದ 3 ಬೆಸ್ಟ್ ಪ್ರಾಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿ
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಎರಡು 700 MW ಒತ್ತಡದ ಭಾರೀ ನೀರಿನ ರಿಯಾಕ್ಟರ್‌ಗಳನ್ನು (PHWRs) ಕಕ್ರಾಪರ್‌ನಲ್ಲಿ ನಿರ್ಮಿಸುತ್ತಿದೆ. ಇದು ಎರಡು 220 MW ವಿದ್ಯುತ್ ಸ್ಥಾವರಗಳಿಗೆ ನೆಲೆಯಾಗಿದೆ. ಕೆಎಪಿಪಿ 4ರಲ್ಲಿ ವಿವಿಧ ಕಮಿಷನಿಂಗ್ ಚಟುವಟಿಕೆಗಳು ನಡೆಯುತ್ತಿದ್ದು, ಜುಲೈ ವೇಳೆಗೆ ಶೇ. 97.56 ಪ್ರಗತಿ ಸಾಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
NPCIL ದೇಶಾದ್ಯಂತ 16 700 MW PHWRಗಳನ್ನು ನಿರ್ಮಿಸಲು ಯೋಜಿಸಿದೆ ಮತ್ತು ಅದಕ್ಕಾಗಿ ಆರ್ಥಿಕ ಮತ್ತು ಆಡಳಿತಾತ್ಮಕ ಮಂಜೂರಾತಿಗಳನ್ನು ನೀಡಿದೆ. ರಾಜಸ್ಥಾನದ ರಾವತ್‌ಭಟದಲ್ಲಿ (RAPS 7 ಮತ್ತು 8) ಮತ್ತು ಹರಿಯಾಣದ ಗೋರಖ್‌ಪುರದಲ್ಲಿ (GHAVP 1 ಮತ್ತು 2) 700 MW ಪರಮಾಣು ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:24 ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ ಪಡೆದ ‘ಜವಾನ್’ ಟ್ರೇಲರ್; ಯಾವ ಭಾಷೆಗಳಲ್ಲಿ ಎಷ್ಟೆಷ್ಟು?
ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 10 PHWRಗಳ ಕಟ್ಟಡವನ್ನು ಕರ್ನಾಟಕದ ಕೈಗಾ, ಹರಿಯಾಣದ ಗೋರಖ್‌ಪುರ, ಮಧ್ಯಪ್ರದೇಶದ ಚುಟ್ಕಾ, ರಾಜಸ್ಥಾನದ ಮಾಹಿ ಬನ್ಸ್ವಾರಾ ಸೇರಿದಂತೆ ನಾಲ್ಕು ಪ್ರದೇಶಗಳಿಗೆ ಮಂಜೂರು ಮಾಡಿದೆ,(ಏಜೆನ್ಸೀಸ್).
ಭಾರತ ಚಂದ್ರನನ್ನು ಯಶಸ್ವಿಯಾಗಿ ತಲುಪಿದೆ, ಈಗ ಸೂರ್ಯನತ್ತ ಸಾಗಲಿದೆ: ಗೃಹ ಸಚಿವ ಅಮಿತ್ ಶಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
