ನವದೆಹಲಿ: ಭಾರತೀಯ ಸೇನೆಯ ಯುದ್ಧವಿಮಾನಗಳ ಬಲ ಹೆಚ್ಚಿಸಲು ಏರೋನಾಟಿಕಲ್ ಡಿಸೈನ್ ಏಜೆನ್ಸಿ (ಎಡಿಎ) ತೇಜಸ್ ಹಗುರ ಯುದ್ಧ ವಿಮಾನದ ಮುಂದುವರಿದ ವಿನ್ಯಾಸಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಇದರಲ್ಲಿ ನೇವಿ ಟ್ವಿನ್ ಇಂಜಿನ್ ಡೆಕ್ ಜೆಟ್ ಹಾಗೂ ವಾಯುಪಡೆ ಓಮ್ನಿ ರೋಲ್ ಯುದ್ಧವಿಮಾನಗಳ ವಿನ್ಯಾಸವನ್ನು ತಯಾರಿಸಿದೆ. ಈ ಯುದ್ಧವಿಮಾನಗಳು ಫ್ರಾನ್ಸ್ ನಿರ್ವಿುತ ರಫೇಲ್ ಜೆಟ್​ಗೆ ಸರಿಸಮನಾಗಿರಲಿವೆ ಎನ್ನಲಾಗಿದೆ.
ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿದರೆ ಮುಂದಿನ 6 ವರ್ಷಗಳಲ್ಲಿ ಬೆಂಗಳೂರಿನ ಎಚ್​ಎಎಲ್ ಹೊಸ ಯುದ್ಧವಿಮಾನಗಳನ್ನು ತಯಾರಿಸಲಿದೆ. ನೌಕಾಪಡೆಯ ವಿಮಾನವಾಹಕ ನೌಕೆಗಳಾದ ಐಎನ್​ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್​ನಲ್ಲಿ ನಿಯೋಜಿಸಲಾಗಿರುವ ರಷ್ಯಾ ನಿರ್ವಿುತ ಮಿಗ್-29ಕೆ ಜೆಟ್​ಗಳನ್ನು ಬದಲು ಈ ವಿಮಾನಗಳನ್ನು ನಿಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಸೇನೆಯಲ್ಲಿ 2030 ರಿಂದ 2050ರ ನಡುವೆ ಸುಮಾರು 750ಕ್ಕೂ ಹೆಚ್ಚು ವಿಮಾನಗಳನ್ನು ಬದಲಿಸುವ ಅಗತ್ಯವಿದೆ. 2040ರ ವೇಳೆಗೆ ಸುಖೋಯ್ 30 ಎಂಕೆಐ ಸೇರಿ ಅನೇಕ ವಿಮಾನಗಳಿಗೆ ನಿವೃತ್ತಿ ನೀಡಲಾಗುತ್ತದೆ ಎಂದು ಕೆಲ ಮೂಲಗಳು ತಿಳಿಸಿವೆ.
ತೇಜಸ್​ನ ಮುಂದುವರಿದ ಭಾಗವಾದ ಟ್ವಿನ್ ಇಂಜಿನ್ ಡೆಕ್ ಬೇಸಡ್ ಯುದ್ಧವಿಮಾನಗಳ ವಿನ್ಯಾಸ ಮತ್ತು ತಯಾರಿಕಾ ವೆಚ್ಚ ರಫೇಲ್ ಯುದ್ಧ ವಿಮಾನಗಳಿಗಿಂತಲೂ ಕಡಿಮೆ ಇರಲಿದೆ. ಇವುಗಳ ತಯಾರಿಕೆಗೆ 538 ಕೋಟಿ ರೂ. ವೆಚ್ಚವಾಗಲಿದೆ. ಇವುಗಳನ್ನು ವಿದೇಶಿ ಸಹಯೋಗದೊಂದಿಗೆ ಭಾರತದಲ್ಲೇ ನಿರ್ವಿುಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯುದ್ಧವಿಮಾನಗಳು ಎರಡು ಶಕ್ತಿಶಾಲಿ ಎಫ್414 ಇಂಜಿನ್​ಗಳನ್ನು ಹೊಂದಿದ್ದು, ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿವೆ. ಎರಡು ಶಕ್ತಿಶಾಲಿ ಇಂಜಿನ್​ಗಳಿರುವುದರಿಂದ ಹವಾಮಾನ ವೈಪರೀತ್ಯಕ್ಕೆ ತಕ್ಕಂತೆ ವಿಮಾನ ವಾಹಕ ನೌಕೆಗಳ ಮೇಲೆ ಲ್ಯಾಂಡಿಂಗ್ ಮತ್ತು ಟೇಕಾಫ್​ನ್ನು ಸುರಕ್ಷಿತವಾಗಿ ನಡೆಸಬಹುದು.
ಯುದ್ಧವಿಮಾನಗಳ ಸಾಮರ್ಥ್ಯ
ಎರಡು ಇಂಜಿನ್​ಗಳ ಡೆಕ್ ಯುದ್ಧ ವಿಮಾನ ಸುಮಾರು 23 ಟನ್ ತೂಕ ಹೊಂದಿರಲಿದ್ದು, ವಾಯುಪಡೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ತೇಜಸ್ ಎಂಕೆ-1 ಯುದ್ಧವಿಮಾನಕ್ಕಿಂತ ಹೆಚ್ಚು ದೊಡ್ಡದಿರಲಿದೆ. ಈ ವಿಮಾನ 9 ಟನ್ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ಇದರಲ್ಲಿ ಸ್ವದೇಶಿ ನಿರ್ವಿುತ ಆಸ್ಟ್ರಾ ಎರ್ ಟು ಏರ್ ಕ್ಷಿಪಣಿ ಸೇರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಮಾನವಾಹಕ ನೌಕೆಗಳಲ್ಲಿ ಸ್ಥಳಾವಕಾಶವನ್ನು ಹೆಚ್ಚಿಸುವ ಸಲುವಾಗಿ ಈ ವಿಮಾನಕ್ಕೆ ಮಡಿಸುವ ರೆಕ್ಕೆಗಳನ್ನು ಅಳವಡಿಸಲಾಗುತ್ತಿದ್ದು, ಗಂಟೆಗೆ ಸುಮಾರು 2 ಸಾವಿರ ಕಿಮೀ ವೇಗದಲ್ಲಿ ಇವುಗಳು ಹಾರಾಟ ನಡೆಸಬಲ್ಲವು. ಹೊಸ ವಿನ್ಯಾಸದ ವಿಮಾನಗಳಲ್ಲಿ ಆಕ್ಟಿವ್ ಎಲೆಕ್ಟ್ರಾನಿಕ್ ಸ್ಕಾ್ಯನ್ ರೇಡಾರ್ (ಎಇಎಸ್​ಎ) ಇರಲಿದ್ದು, ಇದು ಏಕಕಾಲದಲ್ಲಿ ಗಾಳಿ, ಸಮುದ್ರ ಮತ್ತು ಭೂಮಿಯಲ್ಲಿನ ಗುರಿಗಳನ್ನು ಹೆಚ್ಚು ನಿಖರವಾಗಿ ಪತ್ತೆ ಮಾಡಬಲ್ಲದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eleven =
Remember me
