ನವದೆಹಲಿ:ಪ್ರಪ್ರಥಮ ಸ್ವದೇಶಿ ನಿರ್ಮಿತ ಡಾರ್ನಿಯರ್ ವಿಮಾನ ಇಂದಿನಿಂದ ವಾಣಿಜ್ಯ ಹಾರಾಟವನ್ನು ಆರಂಭಿಸಿದ್ದು, ಈಶಾನ್ಯ ರಾಜ್ಯಗಳಿಗೆ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ವೃದ್ಧಿಸುವ ವಾಯುಯಾನ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ಅರುಣಾಚಲ ಪ್ರದೇಶದ ದೂರದ ಪ್ರದೇಶದ ಐದು ಪಟ್ಟಣಗಳೊಂದಿಗೆ ಅಸ್ಸಾಮ್​ನ ದಿಬ್ರುಘರ್​ಗೆ ಸಂಪರ್ಕ ಕಲ್ಪಿಸುವ ಈ ಮೇಡ್ ಇನ್ ಇಂಡಿಯಾ ಡಾರ್ನಿಯರ್ ವಿಮಾನ 17 ಸೀಟುಗಳನ್ನು ಹೊಂದಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಈಶಾನ್ಯ ರಾಜ್ಯಗಳಿಗೆ ವಾಯಯಾನ ಸಂಪರ್ಕ ಮತ್ತು ವಿಮಾನಯಾನ ಮೂಲಸೌಕರ್ಯ ಕಲ್ಪಿಸುವ ಯೋಜನೆಗೆ ಮಾನ್ಯತೆ ನೀಡಿದ್ದು, ಅದರನ್ವಯ ಈ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ ನಿರ್ಮಿಸಿರುವ ಡಾರ್ನಿಯರ್ ಡು-228 ವಿಮಾನವು ಅಲಯನ್ಸ್ ಏರ್ ಮೂಲಕ ಅಸ್ಸಾಮ್​ನ ದಿಬ್ರುಘರ್​ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ಮಧ್ಯೆ ಸಂಚರಿಸಲಿದೆ. ಅದಕ್ಕಾಗಿ ಅಲಯನ್ಸ್ ಏರ್​ಗೆ ಎರಡು ವಿಮಾನಗಳನ್ನು ಒಪ್ಪಂದದ ಮೇರೆಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಾರ್ನಿಯರ್ ಮೂಲತಃ ಜರ್ಮನಿ ನಿರ್ಮಿತ ವಿಮಾನವಾಗಿದ್ದು, 1981ರಲ್ಲಿ ಎಚ್​ಎಎಲ್​ ಇದರ ಉತ್ಪಾದನೆ ಪರವಾನಗಿ ಪಡೆದು ಅಸೆಂಬ್ಲ್ ಮಾಡುತ್ತಿತ್ತು. ಕಾನ್ಪುರದಲ್ಲಿ ಅಂಥ 125 ವಿಮಾನಗಳನ್ನು ನಾಗರಿಕ ಹಾಗೂ ಸೇನಾ ಹಾರಾಟಕ್ಕಾಗಿ ಮಾಡಿಕೊಡಲಾಗಿತ್ತು. 2009ರಿಂದ ಸ್ವಿಸ್​ ಏರೋಸ್ಪೇಸ್ ಇಂಜಿನಿಯರಿಂಗ್ ಆ್ಯಂಡ್ ಡಿಫೆನ್ಸ್ ಕಂಪನಿ ಆರ್​​ಯುಎಜಿ ಸುಧಾರಿತ ಡಾರ್ನಿಯರ್ ಡು-228 ನ್ಯೂ ಜನರೇಷನ್​ (ಎನ್​ಜಿ) ಫ್ಯೂಸಲೇಜ್​, ವಿಂಗ್ಸ್ ಮತ್ತು ಟೇಲ್ಸ್​ ಎಚ್​ಎಎಲ್​ನಿಂದ ಪಡೆದು ನಿರ್ಮಿಸುತ್ತಿತ್ತು. ಆದರೆ ಇದೀಗ ವಾಣಿಜ್ಯ ಹಾರಾಟಕ್ಕೆ ಬಿಡಲಾಗಿರುವ ಡಾರ್ನಿಯರ್​ 228 ಎನ್​ಜಿ ಸಂಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಿಸಲ್ಪಟ್ಟಿರುವ ಪ್ರಪ್ರಥಮ ವಿಮಾನವಾಗಿದೆ.
ಗುತ್ತಿಗೆದಾರ ಸಂತೋಷ್ ಉಡುಪಿಗೆ ಬಂದಿದ್ದೇಕೆ?; ಉದ್ದೇಶ ಏನಿತ್ತು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + thirteen =
Remember me
