ಪುಣೆ: ಕರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚುವ ಮತ್ತು ಅವರನ್ನು ಪರೀಕ್ಷೆಗೆ ಒಳಪಡಿಸುವ ಪರೀಕ್ಷಾ ಕಿಟ್ ಈಗ ಭಾರತದಲ್ಲಿಯೇ ಅಭಿವೃದ್ಧಿ ಪಡಿಸಲಾಗಿದ್ದು, ಇದಕ್ಕೆ ವಾಣಿಜ್ಯ ಅನುಮೋದನೆಯೂ ದೊರೆತಿದೆ. ಕೇವಲ ಆರು ವಾರಗಳಲ್ಲಿ ಪುಣೆಯ ಮೈಲ್ಯಾಬ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಈ ಕಿಟ್ ಅಭಿವೃದ್ಧಿ ಪಡಿಸಿ ದಾಖಲೆ ಮೆರೆದಿದೆ.
ಇಲ್ಲಿಯವರೆಗೆ ಕೊರೊನಾವೈರಸ್ ಸೋಂಕಿತರನ್ನು ಪರೀಕ್ಷಿಸಲು ಜರ್ಮನಿಯಿಂದ ಲಕ್ಷಾಂತರ ಪರೀಕ್ಷಾ ಕಿಟ್‍ಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ವಿಮಾನ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ವಿದೇಶದ ಮೇಲಿನ ಅವಲಂಬನೆ ಕಷ್ಟಸಾಧ್ಯವಾಗಿತ್ತು. ಇಂಥ ಸಂದರ್ಭದಲ್ಲಿಯೇ ಕಿಟ್ ಅತ್ಯಂತ ಅಲ್ಪ ಅವಧಿಯಲ್ಲಿಯೇ ತಯಾರಾಗಿರುವುದು ಭಾರತೀಯರು ಹೆಮ್ಮೆ ಪಡುವ ವಿಷಯವಾಗಿದೆ.
ಮೈಲ್ಯಾಬ್ ಕಿಟ್ ಅನ್ನು ಒಂದು ವಾರದಲ್ಲಿ 1 ಲಕ್ಷ ತಯಾರಿಸುವ ಸಾಮಥ್ರ್ಯ ಸದ್ಯಕ್ಕಿದ್ದು, ಅಗತ್ಯ ಬಿದ್ದರೆ ಇದನ್ನು ಹೆಚ್ಚು ತಯಾರಿಸಲಾಗುವುದು ಎಂದು ಕಂಪನಿ ಹೇಳಿದೆ. ಒಂದು ಕಿಟ್‍ನಿಂದ 100 ರೋಗಿಗಳನ್ನು ಪರೀಕ್ಷಿಸುವ ಸಾಮಥ್ರ್ಯವನ್ನು ಇದು ಹೊಂದಿದೆ. ಎರಡೂವರೆ ಗಂಟೆಗಳ ಒಳಗೆ ಸೋಂಕನ್ನು ಇದು ಪತ್ತೆ ಮಾಡುತ್ತದೆ. ಇದರರ್ಥ, ಪ್ರಯೋಗಾಲಯಗಳು ಒಂದೇ ಯಂತ್ರದಲ್ಲಿ ಒಂದೇ ಸಮಯದಲ್ಲಿ ಎರಡು ಪಟ್ಟು ಪರೀಕ್ಷೆ ಮಾಡುವ ಸಾಮಥ್ರ್ಯ ಹೊಂದಿದೆ ಎನ್ನುತ್ತಾರೆ ಮೈಲ್ಯಾಬ್‍ನ ಕಾರ್ಯನಿರ್ವಾಹಕ ನಿರ್ದೇಶಕ ಶೈಲೇಂದ್ರ ಕವಾಡೆ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಮೌಲ್ಯಮಾಪನದಲ್ಲಿ ಶೇಕಡಾ 100ರಷ್ಟು ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯನ್ನು ಸಾಧಿಸಿದ ಏಕೈಕ ಭಾರತೀಯ ಕಂಪನಿ ಮೈಲ್ಯಾಬ್. ಇದು ಪ್ರಸ್ತುತ ರಕ್ತ ಬ್ಯಾಂಕ್, ಎಚ್‍ಐವಿ, ಎಚ್‍ಬಿವಿ ಮತ್ತು ಎಚ್‍ಸಿವಿ ಕಿಟ್‍ಗಳಿಗಾಗಿ ಐಡಿ-ನ್ಯಾಟ್ ಸ್ಕ್ರೀನಿಂಗ್ ಕಿಟ್‍ಗಳನ್ನು ತಯಾರಿಸುತ್ತಿದೆ.
`ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮಂಜಸವಾದ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಈ ಪರೀಕ್ಷೆಯು ಸೂಕ್ಷ್ಮ ಪಿಸಿಆರ್ ತಂತ್ರಜ್ಞಾನವನ್ನು ಆಧರಿಸಿರುವುದರಿಂದ, ಆರಂಭಿಕ ಹಂತದ ಸೋಂಕನ್ನು ಸಹ ಕಂಡುಹಿಡಿಯಬಹುದು’ ಎಂದಿದ್ದಾರೆ ಶೈಲೇಂದ್ರ.ಈ `ಮೇಕ್ ಇನ್ ಇಂಡಿಯಾ’ ಕಿಟ್‍ಗೆ, ಪ್ರಸ್ತುತ ಖರೀದಿ ವೆಚ್ಚದ ನಾಲ್ಕನೇ ಒಂದು ಭಾಗದಷ್ಟು ವೆಚ್ಚವಾಗಲಿದೆ.
ಕರೊನಾ ಕಂಟಕ: ಇಂದು ರಾತ್ರಿ 8ಕ್ಕೆ ದೇಶವಾಸಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
