ಲಖನೌ:ಉತ್ತರ ಪ್ರದೇಶದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಗುರುವಾರ ಮೊದಲ ಹಂತದ ಚುನಾವಣೆ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಸಂಜೆ 6ರ ವೇಳೆಗೆ ಶೇ. 60.17ರಷ್ಟು ಮತದಾನ ದಾಖಲಾಗಿದೆ. 2017ರ ಮೊದಲ ಹಂತದ ಚುನಾವಣೆಯಲ್ಲಿ ಶೇ. 63.5 ಮತದಾನ ಆಗಿತ್ತು. ಕೆಲವು ಕಡೆಗೆ ಇವಿಎಂಗಳಲ್ಲಿ ದೋಷ ಕಂಡುಬಂದಿತ್ತು. ಅವುಗಳನ್ನು ಬದಲಾಯಿಸಲಾಗಿತ್ತು. ಆದಾಗ್ಯೂ, ಇವಿಎಂಗಳ ಬಗ್ಗೆ ಅನೇಕ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಜಿಯಾಬಾದ್​ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಸಣ್ಣ ಮಟ್ಟಿನ ಘರ್ಷಣೆ ಆಗಿದ್ದನ್ನು ಬಿಟ್ಟರೆ ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಆಯೋಗ ತಿಳಿಸಿದೆ.
ಮುಸ್ಲಿಮ್ ಮಹಿಳೆಯರು ಬಿಜೆಪಿ ಪರ:ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮುಂದುವರಿಸಿ ರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಮ್ ಮಹಿಳೆಯರು ಮೋದಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ರಾಜ್ಯಭಾರ ಮಾಡಿದ್ದ ವಂಶಾಡಳಿತದ ಪಕ್ಷಗಳಿಗೆ ಹೊಟ್ಟೆ ನೋವನ್ನು ತರಿಸಿದೆ. ಇದಕ್ಕೆ ಔಷಧ ಬಹುಶಃ ಉತ್ತರ ಪ್ರದೇಶದ ಬೀದಿಗಳಲ್ಲೇ ಅವುಗಳಿಗೆ ಸಿಗಬಹುದೇನೋ ಎಂದು ಲೇವಡಿ ಮಾಡಿದರು.
ಉತ್ತರ ಪ್ರದೇಶದ ಇದೇ ಮೊದಲ ಬಾರಿಗೆ ಭೌತಿಕ ಪ್ರಚಾರ ಸಭೆಯನ್ನು ಸಹರಣಪುರದಲ್ಲಿ ನಡೆಸಿದ ಅವರು, ಸಮಾಜವಾದಿ ಪಾರ್ಟಿ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ಟೀಕಾಪ್ರಹಾರ ಮಾಡಿದರು. ಉತ್ತರ ಪ್ರದೇಶದ ಅಭಿವೃದ್ಧಿ ಯಾರು ಮಾಡುತ್ತಾರೋ ಅವರಿಗೆ ಮತಚಲಾಯಿಸುವುದನ್ನು ನಿರ್ಧರಿಸುವ ಹಕ್ಕು ಜನರಿಗೆ ಇದೆ. ಉತ್ತರ ಪ್ರದೇಶವನ್ನು ಗಲಭೆ ಮುಕ್ತ ವನ್ನಾಗಿಸಿ, ನಮ್ಮ ತಾಯಂದಿರು, ಮಗಳು ಭಯವಿಲ್ಲದೆ ಓಡಾಡುವಂತೆ ಮಾಡಲು ಕ್ರಿಮಿನಲ್​ಗಳನ್ನು ಜೈಲಿನಲ್ಲಿರಿಸಬೇಕು. ಇದಕ್ಕಾಗಿ ಜನರು ಅಂಥವರಿಗೆ ಮತಚಲಾಯಿಸಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ತ್ರಿವಳಿ ತಲಾಖ್​ನ ಸಂಕಷ್ಟದಿಂದ ಪಾರು ಮಾಡಿದ್ದಕ್ಕೆ ಮುಸ್ಲಿಮ್ ಮಹಿಳೆಯರಿಗೆ ಸಂತೋಷವಿದೆ. ವಂಶಾಡಳಿತದ ಪಕ್ಷಗಳು ಮುಸ್ಲಿಮ್ ಹೆಣ್ಣುಮಕ್ಕಳ ಪ್ರಗತಿಯನ್ನು ತಡೆಯಲು ನೋಡುತ್ತಿವೆ ಎಂದು ಟೀಕಿಸಿದರು.
ಉತ್ತರಾಖಂಡದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ:ಉತ್ತರಾಖಂಡದ ಶ್ರೀನಗರದಲ್ಲಿ ಪ್ರಚಾರ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರನ್ನು ಬೀದಿಬದಿ ಗೂಂಡಾ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್, ಇಂದು ಮತಗಳಿಕೆಗಾಗಿ ಅವರ ಕಟೌಟ್​ಗಳನ್ನು ಇರಿಸಿಕೊಂಡಿದೆ. ತ್ಯಾಗದ ಬೆಲೆ ಅದಕ್ಕೆ ಗೊತ್ತಿಲ್ಲ. ಅಧಿಕಾರ ಹಿಡಿಯುವುದೊಂದೇ ಅದರ ಉದ್ದೇಶ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಸ್ಸಾಂನಲ್ಲಿ ಉಪಚುನಾವಣೆ:ಅಸ್ಸಾಂನ ಮಾಜುಲಿ (ಪರಿಶಿಷ್ಟ ಪಂಗಡ ಮೀಸಲು) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮಾ.7ಕ್ಕೆ ಘೋಷಿಸಲಾಗಿದೆ. ಇಲ್ಲಿಂದ ಗೆದ್ದಿದ್ದ ಮಾಜಿ ಸಿಎಂ ಸರ್ಬಾನಂದ ಸೋನೊವಾಲ್ ಕೇಂದ್ರ ಸಚಿವರಾಗಿದ್ದು, ರಾಜ್ಯಸಭಾ ಸದಸ್ಯರಾಗಿದ್ದಾರೆ. ಹೀಗಾಗಿ ಅವರ ರಾಜೀನಾಮೆಯಿಂದ ಕ್ಷೇತ್ರ ತೆರವಾಗಿತ್ತು.
ಮಣಿಪುರ ಎಲೆಕ್ಷನ್ ದಿನ ಪರಿಷ್ಕರಣೆ:ಮಣಿಪುರದ ಚುನಾವಣಾ ದಿನಾಂಕವನ್ನು ಪರಿಷ್ಕರಿಸಿರುವ ಚುನಾವಣಾ ಆಯೋಗ, ಮೊದಲ ಹಂತದ ಮತದಾನವು ಫೆ. 27ರ ಬದಲಿಗೆ ಫೆ. 28ಕ್ಕೆ ಮತ್ತು ಎರಡನೇ ಹಂತದ ಚುನಾವಣೆಯು ಮಾರ್ಚ್ 3ರ ಬದಲಿಗೆ 5ಕ್ಕೆ ಮರುನಿಗದಿ ಮಾಡಿದೆ. ಫೆ. 27 ಭಾನುವಾರ ಇರುವ ಕಾರಣ ಚರ್ಚ್​ಗೆ ಹೋಗುವವರಿಗೆ ತೊಂದರೆ ಆಗುತ್ತದೆ. ಹೀಗಾಗಿ ದಿನಾಂಕ ಬದಲಿಸಬೇಕು ಎಂದು ಅನೇಕ ಬುಡಕಟ್ಟು ಜನಾಂಗಗಳು ಮತ್ತು ರಾಜಕೀಯ ಪಕ್ಷಗಳು ಮನವಿ ಮಾಡಿದ್ದವು. ಮಣಿಪುರದಲ್ಲಿ ಶೇ. 41ರಷ್ಟು ಕ್ರೖೆಸ್ತರಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ ನೀಡದೇ ಹೋದರೆ ಈ ರಾಜ್ಯ ಕೇರಳವೋ, ಕಾಶ್ಮೀರವೋ ಅಥವಾ ಬಂಗಾಳವೋ ಆದೀತು. ನೀವು ಚಲಾಯಿಸುವ ಮತ ನಿಮ್ಮ ಬದುಕಿನ ಹಾದಿಯನ್ನು ನಿರ್ಧರಿಸುತ್ತದೆ. ಭಯವಿಲ್ಲದ ವಾತಾವರಣದಲ್ಲಿ ಬದುಕು ಸಾಗಿಸಬೇಕು, ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು ಎಂದಾದರೆ ಬಿಜೆಪಿಗೆ ಮತಚಲಾವಣೆ ಮಾಡಿ.
|ಯೋಗಿ ಆದಿತ್ಯನಾಥಉ.ಪ್ರದೇಶದ ಸಿಎಂ
ಇವಿಎಂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಬಹುಶಃ ಯುವಜನ ಮತ್ತು ರೈತರು ಇವಿಎಂ ಬಟನ್​ಗಳನ್ನು ಆಕ್ರೋಶದೊಂದಿಗೆ ಒತ್ತುತ್ತಿರಬೇಕು. ಸಮಾಜವಾದಿ ಪಾರ್ಟಿ ಮತ್ತು ಆರ್​ಎಲ್​ಡಿ ಮೈತ್ರಿ ಅಭ್ಯರ್ಥಿಗೆ ಪ್ರೀತಿಯಿಂದ ಮತ ಚಲಾಯಿಸಿ ಎಂದು ಮನವಿ ಮಾಡುತ್ತೇನೆ.
|ಜಯಂತ್ ಚೌಧರಿಆರ್​ಎಲ್​ಡಿ ನಾಯಕ
ಯೋಗಿ ಆದಿತ್ಯನಾಥರ ಕಳವಳದಂತೆ ಉತ್ತರಪ್ರದೇಶ ಒಂದೊಮ್ಮೆ ಕೇರಳವಾದರೆ, ಆ ರಾಜ್ಯದ ಜನತೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕ ಕಲ್ಯಾಣ, ಉತ್ತಮ ಗುಣಮಟ್ಟದ ಬದುಕು, ಜನರನ್ನು ಧರ್ಮ, ಜಾತಿ ಹೆಸರಲ್ಲಿ ಕೊಲ್ಲದೇ ಇರುವ ಸಾಮರಸ್ಯದ ಸಮಾಜವನ್ನು ಕಾಣಲಿದ್ದಾರೆ.
|ಪಿಣರಾಯಿ ವಿಜಯನ್ಕೇರಳ ಮುಖ್ಯಮಂತ್ರಿ
ಮೋದಿ ಹೇಳುವುದನ್ನು ನಾನೇಕೆ ಕೇಳಬೇಕು? ಇಡಿ, ಸಿಬಿಐ ಮುಂತಾದವನ್ನು ಮುಂದಿಟ್ಟು ಕೊಂಡು ಪ್ರತಿಯೊಬ್ಬರನ್ನೂ ಹೆದರಿಸಬಹುದು ಎಂದು ಅವರಂದುಕೊಂಡಂತೆ ಇದೆ. ನಾನೇನೂ ಹೆದರಿಕೊಂಡಿಲ್ಲ.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ಈ ಜಿಲ್ಲೆಯವರು ಸ್ಟೇಟಸ್​ ಹಾಕೋ ಮುಂಚೆ ಯೋಚಿಸಿ; ರೌಡಿಶೀಟರ್​ ಕೇಸ್ ಬಿದ್ದೀತು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 18 =
Remember me
