ನವದೆಹಲಿ:ಸಂಸತ್ತಿನ ಬಜೆಟ್​ ಅಧಿವೇಶನ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ಹಾಗೂ ಎರಡನೇ ಹಂತ ಮಾರ್ಚ್​ 2ರಿಂದ ಏಪ್ರಿಲ್​ 3ರವರೆಗೆ ನಡೆಯಲಿದೆ. ಫೆ.1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2020-21ರ ಬಜೆಟ್​ ಮಂಡನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶದ ಆರ್ಥಿಕ ಸ್ಥಿತಿ ಕುಸಿತ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿವಾದದ ಮಧ್ಯೆ ಈ ಬಜೆಟ್ ಅಧಿವೇಶನ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವೆರಡೂ ವಿಚಾರಗಳನ್ನಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರಕ್ಕೆ ಹೆಚ್ಚಿನ ಪ್ರಶ್ನೆ ಕೇಳಲು ಯೋಜನೆ ರೂಪಿಸಿಕೊಂಡಿವೆ. ಆರ್ಥಿಕತೆ ಹಾಗೂ ಪೌರತ್ವ ಕಾಯ್ದೆ ವಿಚಾರಗಳೇ ಅಧಿವೇಶನದಲ್ಲಿ ಅಧಿಕ ಚರ್ಚೆಗೆ ಒಳಪಡಲಿವೆ ಎನ್ನಲಾಗಿದೆ.
ಅಧಿಕೃತ ಜಿಡಿಪಿ ಅಭಿವೃದ್ಧಿ ಅಂದಾಜು ಡಾಟಾ ಮಂಗಳವಾರ ಬಿಡುಗಡೆಯಾಗಿದ್ದು ಅದರ ಪ್ರಕಾರ ಭಾರತದ ಆರ್ಥಿಕತೆ 2020-21ರಲ್ಲಿ ಶೇ.5ರಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದೆ. ದಶಕದಲ್ಲೇ ಇದು ಅತ್ಯಂತ ನಿಧಾನಗತಿ ಬೆಳವಣಿಗೆ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡುವ ಮೂಲಕ ಈ ಬಾರಿಯ ಕೇಂದ್ರ ಬಜೆಟ್​ಗೆ ಜನಸಾಮಾನ್ಯರು ಮೈ ಗೌ ವೆಬ್​ ಪೋರ್ಟಲ್​ ನಲ್ಲಿ ಸಲಹೆ, ಸೂಚನೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
