ಬೆಂಗಳೂರು/ನವದೆಹಲಿ:ಕರೊನಾ ಮಹಾಮಾರಿಯನ್ನು ಕಟ್ಟಿಹಾಕುವ ಉದ್ದೇಶದಿಂದ ಕಳೆದ ಎರಡೂವರೆ ತಿಂಗಳಿಂದ ಜಾರಿಯಲ್ಲಿದ್ದ ಲಾಕ್​ಡೌನ್​ಗೆ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಘೋಷಿಸಿದ್ದ ಅನ್​ಲಾಕ್ -1 ಅನ್ವಯ ಸೋಮವಾರ ಇಡೀ ಭಾರತ ಜನಸಾಮಾನ್ಯರಿಗೆ ಭಾಗಶಃ ತೆರೆದುಕೊಂಡಿತು. ನಿತ್ಯ ಬದುಕಿಗೆ ಅತ್ಯಗತ್ಯವಾದ ಹಾಗೂ ದೇಶದ ಆರ್ಥಿಕತೆಯ ಪ್ರಮುಖ ಮೆಟ್ಟಿಲುಗಳಾಗಿ ಗುರುತಿಸಿಕೊಂಡಿರುವ ಧಾರ್ವಿುಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್​ಗಳು ಹಾಗೂ ಮಾಲ್​ಗಳಲ್ಲಿ ವಹಿವಾಟು ಪುನರಾರಂಭವಾಯಿತು. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮ, ನಿಬಂಧನೆಗೆ ಹೆದರಿಯೋ ಅಥವಾ ಜಾಗೃತರಾಗಿಯೋ ಮೊದಲ ದಿನ ಯಾವುದೇ ನೂಕುನುಗ್ಗಲಿಲ್ಲದೆ ಬೆರಳೆಣಿಕೆ ಜನರಷ್ಟೇ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಇದನ್ನೂ ಓದಿ:ನಾಮಪತ್ರದ ಜತೆ ಸಲ್ಲಿಸಲು 10 ಸಾವಿರ ರೂ. ಯಾರು ಕೊಡ್ತೀರಿ ಎಂದು ಕೇಳಿದ ಖರ್ಗೆ!
ಕರ್ನಾಟಕದ ಬಹುತೇಕ ಕಡೆ ದೇವಾಲಯಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಹಾಗೂ ಮಾಲ್​ಗಳು ಪುನರಾರಂಭಗೊಂಡಿದ್ದರೂ ಕರೊನಾ ಭೀತಿಯಿಂದಾಗಿ ಹೆಚ್ಚಿನ ಜನರು ಭೇಟಿ ನೀಡಲಿಲ್ಲ. ಅಲ್ಲದೆ ಸೋಮವಾರ ವಿಶೇಷ ದಿನ ಆಗಿಲ್ಲದ ಕಾರಣ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಹೋಗಲಿಲ್ಲ. ಹೋಟೆಲ್​ಗಳಲ್ಲಿ ಪಾರ್ಸಲ್ ಪಡೆದವರೇ ಹೆಚ್ಚಿನವರಿದ್ದರು. ಎಲ್ಲೆಡೆ ಸಾಮಾಜಿಕ ಅಂತರದೊಂದಿಗೆ, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಕೃಷ್ಣನ ದರ್ಶನವಿಲ್ಲ:ಕರೊನಾದಿಂದ ತತ್ತರಿಸಿರುವ ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ಮಠ ಬಾಗಿಲು ತೆರೆಯುವ ವಿಚಾರ ಜೂ. 15ರ ನಂತರ ನಿರ್ಧಾರ ವಾಗಲಿದೆ. ಸವದತ್ತಿ ತಾಲೂಕಿನ ರೇಣುಕಾದೇವಿ, ಶಿರಸಂಗಿಯ ಕಾಳಿಕಾದೇವಿ, ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ, ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಜೂ.30ರವರೆಗೆ ಪ್ರವೇಶವಿಲ್ಲ.
ಬೆಂಗಳೂರಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಹೋಟೆಲ್​ಗಳನ್ನು ತೆರೆಯಲಾಗಿತ್ತಾದರೂ, ಎಲ್ಲೆಡೆ ಲಾಕ್​ಡೌನ್ ವಾತಾವರಣವೇ ಇತ್ತು. ಹೋಟೆಲ್​ಗಳಿಗೆ ಗ್ರಾಹಕರು ಆಗಮಿಸಿದರಾದರೂ ಶೇ. 20 ಮಂದಿ ಪಾರ್ಸಲ್ ಪಡೆದರೆ ಕೇವಲ ಶೇ. 10 ಮಂದಿ ಅಲ್ಲೇ ಊಟ ಮಾಡಿದರು. ಬಹುತೇಕ ಹೋಟೆಲ್​ಗಳಲ್ಲಿ ತಟ್ಟೆಗೆ ಬದಲಾಗಿ ಅಡಕೆ ತಟ್ಟೆಗಳನ್ನು ನೀಡಲಾಗಿತ್ತು. ತಿಂಡಿ ಮತ್ತು ಊಟವನ್ನು ಮಾತ್ರ ನೀಡಲಾಗಿದ್ದು, ಚಾಟ್ಸ್​ಗಳನ್ನು ಆರಂಭಿಸಿಲ್ಲ. ಟೇಬಲ್​ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಫೈಬರ್ ಗ್ಲಾಸ್ ಅಳವಡಿಸುವ ಮೂಲಕ ಕೇವಲ ಇಬ್ಬರಿಗೆ ಕೂತು ಊಟ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಸ್ಯಾನಿಟೈಸರ್ ನೀಡುವುದರೊಂದಿಗೆ ಥರ್ಮಲ್ ಸ್ಕ್ರೀನಿಂಗ್ ಸಹ ಮಾಡಲಾಗಿತ್ತು.
ವಾರದ ದಿನವಾಗಿದ್ದರಿಂದ ಬೆಂಗಳೂರಿನ ಮಾಲ್​ಗಳತ್ತ ಹೆಚ್ಚು ಜನರು ಸುಳಿಯಲಿಲ್ಲ. ಮನೆಯಲ್ಲೇ ಎರಡೂವರೆ ತಿಂಗಳಿಂದ ಲಾಕ್ ಆಗಿ ಬೇಜಾರಾಗಿದ್ದ ಕೆಲ ಮಂದಿ ಮಾತ್ರ ಮಾಲ್​ಗಳಿಗೆ ಭೇಟಿ ನೀಡಿದರಾದರೂ, ಖರೀದಿಗಾಗಿಯೇ ಹೋದವರ ಸಂಖ್ಯೆ ತೀರಾ ವಿರಳವಾಗಿತ್ತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಇಡಗುಂಜಿ ಶ್ರೀವಿನಾಯಕ ದೇವಸ್ಥಾನ, ಬಾದಾಮಿ ಬನಶಂಕರಿ, ದಕ್ಷಿಣ ಕಾಶಿ ಮಹಾಕೂಟೇಶ್ಚರ ದೇವಸ್ಥಾನ, ಹಂಪಿ ವಿರೂಪಾಕ್ಷ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ, ಚಾಮರಾಜನಗರದ ಮಲೈಮಹದೇಶ್ವರ ದೇವಾಲಯ, ಬೆಂಗಳೂರಿನ ಬನಶಂಕರಿ, ಕಾಡುಮಲ್ಲೇಶ್ವರ, ಗವಿಗಂಗಾಧರೇಶ್ವರ ಸೇರಿದಂತೆ ನಾಡಿನ ಪ್ರಮುಖ ದೇವಾಲಯಗಳು ಭಕ್ತರಿಗೆ ತೆರೆದಿವೆ.
ಇದನ್ನೂ ಓದಿ:ಮುಸ್ಲಿಂ ವ್ಯಕ್ತಿ ಕೆರೆಗೆ ಕಲ್ಲೆಸೆದಿದ್ದಕ್ಕೆ ಪೂರ್ತಿ ಕೆರೆ ನೀರನ್ನೇ ಖಾಲಿ ಮಾಡಿಸಿದ ಗ್ರಾಮಸ್ಥರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
