ಮುಂಬೈ:ತಮ್ಮ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಪ್ರದರ್ಶನ ಕಂಡಿರುವ ಧಾಕಡ್​​ ಚಿತ್ರದ ಬಗ್ಗೆ ಮೊದಲ ಬಾರಿಗೆ ನಟಿ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದಾರೆ.
ಈವರೆಗೂ ನಟಿಸಿದ ಯಾವೊಂದು ಚಿತ್ರವೂ ಇಷ್ಟು ಕಳಪೆ ಪ್ರದರ್ಶನ ಕಂಡಿರಲಿಲ್ಲ. ಬಾಕ್ಸಾಫಿಸ್​​ನಲ್ಲಿ ಹೇಳ ಹೆಸರಿಲ್ಲದಂತಾಗಿರುವ ಧಾಕಡ್​ ಬಗ್ಗೆ ಕಂಗನಾ ಈ ರೀತಿ ಹೇಳಿಕೊಂಡಿದ್ದಾರೆ.
ಬಿಡುಗಡೆಯಾದಾಗಿನಿಂದ ಈವರೆಗೆ ಈ ಚಿತ್ರ ಕೇವಲ 4 ಕೋಟಿ ರೂ.ಮಾತ್ರ ಗಳಿಸಿದೆ. ಆದರೆ ಚಿತ್ರಕ್ಕೆ ವ್ಯಯಿಸಿರುವ ಹಣ ಬರೋಬ್ಬರಿ 95 ಕೋಟಿ ರೂ. ಆಗಿದೆ. ಇನ್ನು ಇಡೀ ದೇಶಾದ್ಯಂತ ಕೇವಲ 20 ಟಿಕೆಟ್ ಮಾತ್ರ ಖರೀದಿಯಾಗುವ ಮೂಲಕ ಇತ್ತೀಚೆಗೆ ಧಾಕಡ್​ ಸಿನಿಮಾ ಸುದ್ದಿಯಲ್ಲಿತ್ತು.

ಆದರೆ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕಂಗನಾ ಈ ವರ್ಷ ಇನ್ನೂ ಮುಗಿದಿಲ್ಲ, ನಾನಿನ್ನು ಭರವಸೆ ಹೊಂದಿದ್ದೇನೆ ಎಂದು ಹೇಳುವ ಮೂಲಕ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
2019ರಲ್ಲಿ ಬಿಡುಗಡೆಯಾದ ಮಣಿಕರ್ಣಿಕಾ, ನಂತರ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಚಿತ್ರ ಭಾರೀ ಗಳಿಕೆಯನ್ನು ಕಂಡಿತ್ತು. ಈ ಮೂಲಕ ಬಾಕ್ಸಾಫೀಸ್​ ಕ್ವೀನ್​ ಎಂದೇ ಖ್ಯಾತಿಯಾಗಿದ್ದ ಕಂಗನಾ ಸಿನಿಮಾ ಈಗ ಹೀನಾಯ ಸೋಲು ಕಂಡಿದೆ.(ಏಜೆನ್ಸೀಸ್​)
ಕೇರಳಕ್ಕೆ ಲಗ್ಗೆ ಇಟ್ಟಿದೆ ಮತ್ತೊಂದು ಸಾಂಕ್ರಾಮಿಕ ರೋಗ: ಈ ಹೊಸ ವೈರಸ್​ ಇಬ್ಬರು ವಿದ್ಯಾರ್ಥಿಗಳಲ್ಲಿ ದೃಢ

ಲಡಾಖ್​​ನಲ್ಲೂ ಟ್ರಾಫಿಕ್​ ರೂಲ್ಸ್​​ ಪಾಲಿಸದಿದ್ದರೆ ಬೀಳುತ್ತೆ ದಂಡ : ಈವರೆಗೆ 1.50 ಕೋಟಿ ರೂ. ಸಂಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 13 =
Remember me
