ನವದೆಹಲಿ:ಈ ವರ್ಷ ಮಾನ್ಸೂನ್​ ಅವಧಿಗೂ ಮುನ್ನವೇ ಪ್ರವೇಶಿಸಲಿದ್ದು, ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್​ ತಿಂಗಳಲ್ಲಿ ದಾಖಲೆಯ ತಾಪಮಾನದ ನಡುವೆ ಇದೀಗ ಮಾನ್ಸೂನ್​ ಮಳೆಯಿಂದಾಗಿ ತಾಪಮಾನ ಇಳಿಕೆಯಾಗಲಿದ್ದು, ದೇಶದ ಎಲ್ಲಾ ಭಾಗಗಳಲ್ಲೂ ಈ ಬಾರಿ ಮಾನ್ಸೂನ್​ ಮಳೆ ಬೇಗವೇ ಬರಲಿದೆ.
ಕೆಲವೆಡೆ ಅಕಾಲಿಕ ಮಳೆ ಸುರಿಯತ್ತಿದ್ದು, ಇದರಿಂದ ವಾತಾವರಣವನ್ನು ತಂಪು ಮಾಡಿದೆಯಾದರೂ, ಮೇ ತಿಂಗಳಾರ್ಧದಲ್ಲಿ ಸುರಿಯುವ ಮಳೆ ಭಾರೀ ಅನುಕೂಲಕರವಾಗಲಿದೆ. ಅಸನಿ ಚಂಡಮಾರುತದಿಂದಾಗಿ ಪೂರ್ವ ಕರಾವಳಿಯಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಈ ನಡುವೆ ಮಾನ್ಸೂನ್​ ಪ್ರವೇಶದಿಂದ ವಾರಗಳವರೆಗೆ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳ ಮೂಲಕ ಈ ಬಾರಿ ಮಾನ್ಸೂನ್​ ಮಳೆ ಬೇಗ ಬರಲಿದ್ದು, ಮೇ 15 ರಂದು ಮೊದಲ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಮಾನ್ಸೂನ್​ ಮಳೆಯಿಂದಾಗಿ ದೇಶಾದ್ಯಂತ ತಾಪಮಾನ ಕಡಿಮೆಯಾಗಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಮೇ 14 ರಿಂದ 16 ರಂದು ಭಾರೀ ಮಳೆಯಾಗಲಿದೆ. ಇನ್ನು ಈ ವರ್ಷ ಮಾನ್ಸೂನ್​ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.(ಏಜೆನ್ಸೀಸ್​)
ಟೊಮ್ಯಾಟೊದಿಂದಲೇ ಜ್ವರ ಬರುತ್ತಿದೆಯೇ? ಸಚಿವರು ಅಂದಿದ್ದು ಹೀಗೆ

ಡೆತ್​ ಟ್ರೈನ್​​ ವಿಡಿಯೋ ಬಿಡುಗಡೆ ಮಾಡಿ ರಷ್ಯಾದ ಬಣ್ಣ ಬಯಲು ಮಾಡಿದ ಯೂಕ್ರೇನ್​ ಸೇನೆ: ಈ ರೈಲಿನಲ್ಲಿ ಅಂತಹದ್ದೇನಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 5 =
Remember me
