ಬೆಂಗಳೂರು:ಜಗತ್ತಿನ 6 ನೇ ಅತಿದೊಡ್ಡ ರೀಟೇಲ್ ಆಭರಣ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಆಸ್ಟ್ರೇಲಿಯಾದಲ್ಲಿ ತನ್ನ ಶೋರೂಂ ಆರಂಭಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಮತ್ತು ಇತಿಹಾಸ ನಿರ್ಮಿಸಿದೆ. ಆಸ್ಟ್ರೇಲಿಯಾದಲ್ಲಿ ಶೋರೂಂ ಆರಂಭಿಸಿದ ಭಾರತ ಮೂಲದ ಅಂತಾರಾಷ್ಟ್ರೀಯ ಆಭರಣ ಸಂಸ್ಥೆಯೊಂದು ಮೊದಲ ಸಂಸ್ಥೆ ಇದಾಗಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಈ ಹೊಸ ಶೋರೂಂ ಕಾರ್ಯಾರಂಭ ಮಾಡಿದೆ. ಪ್ರಸ್ತುತ ಬ್ರಾಂಡ್ ಭಾರತ, ಯುಎಇ, ಕತಾರ್, ಕುವೈತ್, ಒಮಾನ್, ಕೆಎಸ್ಎ, ಬಹರೇನ್, ಸಿಂಗಾಪೂರ, ಮಲೇಷ್ಯಾ, ಯುಎಸ್ಎ, ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನಾದ್ಯಂತ 340 ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹೊಸ ಶೋರೂಂ ಅನ್ನು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಬ್ರೆಟ್ ಲೀ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಇಂಟರ್‌ನ್ಯಾಷನಲ್ ಆಪರೇಶನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಾಮ್‌ಲಾಲ್ ಅಹ್ಮದ್, ಮಲಬಾರ್ ಗೋಲ್ಡ್ & ಡೈಮಂಡ್ಸ್​ನ ಇಂಡಿಯಾ ಆಪರೇಶನ್‌ ವ್ಯವಸ್ಥಾಪಕ ನಿರ್ದೇಶಕ ಏಶರ್ ಒ. ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಫಾರ್ ಈಸ್ಟ್ & ಆಸ್ಟ್ರೇಲೇಷ್ಯಾದ ಪ್ರಾದೇಶಿಕ ಮುಖ್ಯಸ್ಥ ಅಜಿತ್ ಎಂ, ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಹಣಕಾಸು ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಅಮೀರ್ ಸಿಎಂಸಿ, ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಉತ್ಪಾದನಾ ವಿಭಾಗದ ಮುಖ್ಯಸ್ಥ ಫೈಸಲ್ ಎ.ಕೆ., ಮಲಬಾರ್ ಗ್ರೂಪ್‌ನ ಚೀಫ್ ಡಿಜಿಟಲ್ ಆಫೀಸರ್ ಶಾಜಿ ಕಕ್ಕೋಡಿ ಮತ್ತು ಸಿಡ್ನಿ ಸರ್ಕಾರ ಹಾಗೂ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಹಿರಿಯ ಅಧಿಕಾರಿಗಳು, ಗ್ರಾಹಕರು ಸೇರಿದಂತೆ ಇತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, “ಈ ಶೋರೂಂ ಆರಂಭಿಸುವ ಮೂಲಕ ಆಸ್ಟ್ರೇಲಿಯಾದಲ್ಲಿ ಶೋರೂಂ ತೆರೆದ ಮೊದಲ ಭಾರತೀಯ ಅಂತಾರಾಷ್ಟ್ರೀಯ ಆಭರಣ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವುದು ನಮಗೆ ಅತೀವ ಹೆಮ್ಮೆ ಎನಿಸುತ್ತಿದೆ. ‘ಮೇಕ್ ಇನ್ ಇಂಡಿಯಾ; ಮೇಕ್ ಟು ದಿ ವರ್ಲ್ಡ್’ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ನಾವು ಸದೃಢವಾದ ನೆಲೆಯನ್ನು ಹೊಂದಿದ್ದೇವೆ. ಇದರ ಮೂಲಕ ನಾವು ಭಾರತೀಯ ಆಭರಣ ಕುಶಲತೆಯನ್ನು ಜಾಗತಿಕ ವೇದಿಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಪ್ರಸ್ತುತಿಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಇದು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಬಲವಾದ ವ್ಯಾಪಾರ ಸಂಬಂಧ ಮತ್ತು ಇತ್ತೀಚಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ನಿಯಂತ್ರಿಸುವ ಉತ್ತಮ ಯಶಸ್ಸಿನ ಯಶೋಗಾಥೆಯಾಗಿದೆ. ಆಸ್ಟ್ರೇಲಿಯಾದಲ್ಲಿನ ನಮ್ಮ ಬೆಳವಣಿಗೆಯ ಯೋಜನೆಯು ಮುಂದಿನ ಕೆಲವು ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ಉದ್ಯೋಗಗಳ ಸೃಷ್ಟಿ ಮತ್ತು ಸ್ಥಳೀಯ ಆರ್ಥಿಕತೆಗೆ ಗಮನಾರ್ಹವಾದ ಹೂಡಿಕೆಗಳಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಮಲಬಾರ್ ಗ್ರೂಪ್ ಪರವಾಗಿ ಈ ಐತಿಹಾಸಿಕ ಕ್ಷಣವನ್ನು ರೂಪಿಸಲು ನಮಗೆ ಸಹಾಯ ಮಾಡುವಲ್ಲಿ ನಮ್ಮೆಲ್ಲಾ ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು, ಷೇರುದಾರರು ಮತ್ತು ಇತರ ಪಾಲುದಾರರಿಗೆ ಅವರ ಅಮೂಲ್ಯವಾದ ಕೊಡುಗೆಗಾಗಿ ನಾನು ಧನ್ಯವಾದಗಳನ್ನು ಹೇಳಲು ಮತ್ತು ನಮ್ಮ ಗುರಿಯತ್ತ ಮುಂದಡಿ ಇಡಲು ಬಯಸುತ್ತಿದ್ದೇವೆ” ಎಂದರು.
ಈ ಹೊಸ ಸ್ಟೋರ್‌ನ ವಿಳಾಸ: ಮಲಬಾರ್ ಗೋಲ್ಡ್ & ಡೈಮಂಡ್ಸ್, ನಂಬರ್ 109, ವೈಗ್ರಾಂ ಸ್ಟ್ರೀಟ್, ಹ್ಯಾರಿಸ್ ಪಾರ್ಕ್, ಲಿಟಲ್ ಇಂಡಿಯಾ ಪ್ರೆಸಿಂಕ್ಟ್. ಇದು ಸಿಡ್ನಿಯಲ್ಲಿನ ಅತಿ ದೊಡ್ಡ ಆಭರಣ ಶೋರೂಂ ಆಗಿದೆ. 18ಕೆ, 22ಕೆ ಚಿನ್ನ ಮತ್ತು ವಜ್ರಾಭರಣಗಳ ವಿಸ್ತಾರವಾದ ಸಂಗ್ರಹವನ್ನು ಹೊಂದಿರುವ ಈ ಸ್ಟೋರ್‌ನಲ್ಲಿ 30,000 ಕ್ಕೂ ಅಧಿಕ ವಿನ್ಯಾಸಗಳಿವೆ. ಬ್ರೆಡಲ್ ವೇರ್, ಡೈಲಿ ವೇರ್ ಮತ್ತು ಸಾಂದರ್ಭಿಕವಾಗಿ ಧರಿಸುವ ಆಭರಣಗಳು ಇಲ್ಲಿವೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಶೋರೂಂನಲ್ಲಿ ಕಸ್ಟಮೈಸ್ಟ್ ಜ್ಯುವೆಲ್ಲರಿ ಡಿಸೈನ್‌ಗಳನ್ನು ಒಳಗೊಂಡಿದೆ. ಇಲ್ಲಿ ಆಭರಣ ಪ್ರಿಯರು ತಮಗಿಷ್ಟವಾದ ರೀತಿಯಲ್ಲಿ ಆಭರಣಗಳನ್ನು ಸಿದ್ದಪಡಿಸಿಕೊಳ್ಳಲು ಅವಕಾಶವಿದೆ. ಇಲ್ಲಿನ ನುರಿತ ಮತ್ತು ಪ್ರಾಮಾಣಿಕ ಕುಶಲಕರ್ಮಿಗಳು ಆಭರಣಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಿದ್ದಾರೆ.
ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಇಂಟರ್‌ನ್ಯಾಷನಲ್ ಆಪರೇಶನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಾಮಲಾಲ್ ಅಹ್ಮದ್ ಅವರು ಮಾತನಾಡಿ, “ಆಸ್ಟ್ರೇಲಿಯಾದಲ್ಲಿ ನಮ್ಮ ಕಾರ್ಯಾಚರಣೆಯನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಆಸ್ಟ್ರೇಲಿಯಾಕ್ಕೆ ನಮ್ಮ ಪಾದಾರ್ಪಣೆ ಮಾಡಿದ್ದು. ಈ ಮೂಲಕ ನಾವು 13 ದೇಶಗಳಲ್ಲಿ ಕಾರ್ಯಾಚರಣೆ ಮಾಡಿದಂತಾಗಿದೆ. ಈ ಮೂಲಕ ದೇಶದ ಆಭರಣ ಲ್ಯಾಂಡ್‌ಸ್ಕೆಪ್ ಅನ್ನು ಪರಿವರ್ತನೆ ಮಾಡುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಭಾರತದ ಉಪ-ಖಂಡದಿಂದ ವಲಸೆ ಬಂದವರ ಒಂದು ದೊಡ್ಡ ಸಮುದಾಯ ಆಸ್ಟ್ರೇಲಿಯಾದಲ್ಲಿದೆ. ಇಲ್ಲಿ ಆಭರಣ ಕ್ಷೇತ್ರವು ಹೆಚ್ಚಾಗಿ ಬಳಕೆಯಾಗದೇ ಉಳಿದಿದೆ. ದೇಶದ ಆಭರಣ ಲ್ಯಾಂಡ್‌ಸ್ಕೆಪ್‌ನಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸುವ ಮೂಲಕ ನಾವು 30 ವರ್ಷಗಳ ನಮ್ಮ ಅನುಭವವನ್ನು ಅಸಾಧಾರಣವಾದ ಚಿನ್ನ, ಚಿನ್ನ ಮತ್ತು ಅಮೂಲ್ಯ ರತ್ನದ ಆಭರಣಗಳನ್ನು ಹೊರ ತರುವ ಗುರಿಯನ್ನು ಹೊಂದಿದ್ದೇವೆ. ಗ್ರಾಹಕರಿಗೆ ಅಸಾಧಾರಣ ಮತ್ತು ಪಾರದರ್ಶಕ ಆಭರಣ ಶಾಪಿಂಗ್ ಅನುಭವವನ್ನು ಒದಗಿಸುವ ನಮ್ಮ ಸಮಯ-ಪರೀಕ್ಷಿತ ಬದ್ಧತೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ನಮ್ಮ ಜಾಗತಿಕ ಸ್ವೀಕಾರವನ್ನು ಪುನರಾವರ್ತಿಸಲು ನಮಗೆ ಸಾಧ್ಯವಾಗುತ್ತದೆ ಎಂಬ ಖಾತ್ರಿ ನನಗಿದೆ” ಎಂದು ತಿಳಿಸಿದರು.
ನೈತಿಕ ಮತ್ತು ಜವಾಬ್ದಾರಿಯುತವಾದ ಸೋರ್ಸಿಂಗ್ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಸಂಪೂರ್ಣ ಕಾರ್ಯಾಚರಣೆಗಳ ಪ್ರಮುಖ ಅಂಶವಾಗಿದೆ. ಆಭರಣಗಳಲ್ಲಿ ಶೇ.100 ರಷ್ಟು ಪತ್ತೆ ಹಚ್ಚಬಹುದಾದ ಕಚ್ಚಾ ಉತ್ಪನ್ನಗಳ ವಿಶೇಷ ಬಳಕೆಯೊಂದಿಗೆ ಎಲ್‌ಬಿಎಂಎ (ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಶನ್) ಮತ್ತು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನಂತಹ ಜಾಗತಿಕವಾಗಿ ಗುರುತಿಸಲ್ಪಟ್ಟ ಸಂಸ್ಥೆಗಳು ಹೊಂದಿಸಿರುವ ಪಾರದರ್ಶಕ ಚಿನ್ನ ಮತ್ತು ವಜ್ರದ ಸೋರ್ಸಿಂಗ್‌ಗಾಗಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಕಟ್ಟುನಿಟ್ಟಾದ ಅನುಸರಣೆಯನ್ನು ಬ್ರಾಂಡ್ ಖಚಿತಪಡಿಸುತ್ತದೆ. ಸುಸ್ಥಿರತೆ ಮತ್ತು ಜವಾಬ್ದಾರಿಯ ತತ್ತ್ವಗಳನ್ನು ಕಾನೂನಿನ ನಿಯಮದ ಅನುಸರಣೆಗೆ ಶೂನ್ಯ ಸಹಿಷ್ಣುತೆ, ಆ್ಯಂಟಿ ಮನಿ ಲ್ಯಾಂಡರಿಂಗ್ (ಎಎಂಎಲ್), ಭಯೋತ್ಪಾದನೆಗೆ ಹಣಕಾಸು ಪೂರೈಕೆ ವಿರುದ್ಧದ ಹೋರಾಟ ಮುಂದುವರಿಸುವುದು. ಅರಣ್ಯ ಉಸ್ತುವಾರಿ ಮಂಡಳಿಯ ಬಳಕೆಯಂತಹ ಅಭ್ಯಾಸಗಳ ಮೂಲಕ ಪ್ರಮುಖ ವ್ಯವಹಾರಗಳಲ್ಲಿ ಸಂಯೋಜಿಸಲಾಗಿದೆ.
ಮಲಬಾರ್ ಗ್ರೂಪ್‌ನ ಉಪಾಧ್ಯಕ್ಷ ಅಬ್ದುಲ್ ಸಲಾಂ ಕೆ.ಪಿ., ಅವರು ಮಾತನಾಡಿ, “ನಮ್ಮ ಜಾಗತಿಕ ಕಾರ್ಯಾಚರಣೆಯ ಪಟ್ಟಿಯಲ್ಲಿ ಮತ್ತೊಂದು ದೇಶವನ್ನು ಸೇರಿಸುವುದರ ಜೊತೆಗೆ ಆಸ್ಟ್ರೇಲಿಯಾಕ್ಕೆ ನಮ್ಮ ವಿಸ್ತರಣೆಯು ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಘನತೆಯನ್ನು ನಿಜವಾದ ಜಾಗತಿಕ ಉದ್ಯಮವಾಗಿ ವಿಸ್ತಾರಗೊಳಿಸುತ್ತದೆ. ಶೇ.100 ರಷ್ಟು ಪಾರದರ್ಶಕ ವ್ಯಾಪಾರದ ಅಭ್ಯಾಸವು ನಮ್ಮ ಸಂಪೂರ್ಣ ಕಾರ್ಯಾಚರಣೆಗಳ ವಿಶಿಷ್ಟ ಲಕ್ಷಣವಾಗಿದೆ ಮತ್ತು ನಮ್ಮ ಪೂರೈಕೆ ಜಾಲದ ಎಲ್ಲಾ ಹಂತಗಳಲ್ಲಿ ನೈತಿಕ ಮತ್ತು ಜವಾಬ್ದಾರಿಯುತ ಸೋರ್ಸಿಂಗ್ ಅನ್ನು ಖಚಿತಪಡಿಸಿಕೊಳ್ಳಲು ನಮ್ಮ ಕಟ್ಟುನಿಟ್ಟಾದ ಬದ್ಧತೆಯೊಂದಿಗೆ ಆಭರಣಗಳ ಮಂಗಳಕರ ಸ್ವರೂಪವನ್ನು ಕಾಪಾಡುವ ಜಾಗತಿಕ ಆಭರಣ ವಲಯದಲ್ಲಿ ನಾವು ಮಾದರಿ ಸಂಸ್ಥೆಯಾಗಲು ಬಯಸುತ್ತೇವೆ” ಎಂದು ಹೇಳಿದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರಾಂತ ಸ್ಥಳೀಯ ಕರಕುಶಲತೆಯನ್ನು ಉತ್ತೇಜಿಸುವ ಅನ್ವೇಷಣೆಯಲ್ಲಿ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಯನ್ನು ಆರಂಭಿಸಿದೆ. ಇದು ಅಸ್ತಿತ್ವದಲ್ಲಿರುವ ಪ್ರದೇಶಗಳಲ್ಲಿ ಹೆಚ್ಚಿನ ಶೋರೂಂಗಳನ್ನು ಆರಂಭಿಸುವುದರೊಂದಿಗೆ ತನ್ನ ರೀಟೇಲ್ ಅಸ್ತಿತ್ವವನ್ನು ಬಲಪಡಿಸುವುದನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ, ಈಜಿಪ್ಟ್, ಬಾಂಗ್ಲಾದೇಶ, ಟರ್ಕಿ ಮತ್ತು ನ್ಯೂಜೆಲೆಂಡ್‌ನಂತಹ ಹೊಸ ದೇಶಗಳಿಗೆ ತನ್ನ ವಿಸ್ತರಣೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಇಂಡಿಯಾ ಅಪರೇಶನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಏಶರ್ ಒ ಅವರು ಮಾತನಾಡಿ, “ಮಲಬಾರ್ ಗೋಲ್ಡ್ & ಡೈಮಂಡ್ಸ್ ಅಂತಾರಾಷ್ಟ್ರೀಯ ಮತ್ತು ಭಾರತೀಯ ಆಭರಣ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದು, ಗಣನೀಯ ವೇಗವನ್ನು ಪಡೆಯುತ್ತಿದೆ. ಹೊಸ ದೇಶಗಳು ಮತ್ತು ರಾಜಸ್ಥಾನ, ಪುದುಚೇರಿ, ಉತ್ತರಾಖಂಡ, ಜಾರ್ಖಂಡ್, ಗೋವಾ, ಅಸ್ಸಾಂ, ತ್ರಿಪುರಾ ಹಾಗೂ ಜಮ್ಮು ಮತ್ತು ಕಾಶ್ಮೀರದಂತಹ ಭಾರತೀಯ ಪ್ರದೇಶಗಳಲ್ಲಿ ಬ್ರಾಂಡ್‌ನ ಕಾರ್ಯತಂತ್ರದ ಜಾಗತಿಕ ವಿಸ್ತರಣೆಯು ನಮ್ಮ ಸಂಸ್ಥೆಯನ್ನು 1 ನೇ ಸ್ಥಾನಕ್ಕೇರಿಸಲು ಸಜ್ಜಾಗಿದೆ” ಎಂದು ತಿಳಿಸಿದರು.
1993 ರಲ್ಲಿ ಆರಂಭವಾದ ಮಲಬಾರ್ ಗ್ರೂಪ್ ಇಎಸ್‌ಜಿ (ಪರಿಸರ, ಸಾಮಾಜಿಕ & ಆಡಳಿತ) ಉಪಕ್ರಮಗಳ ಕಟ್ಟುನಿಟ್ಟಿನ ಬದ್ಧತೆಯನ್ನು ಹೊಂದಿದೆ. ತನ್ನ ನಿವ್ವಳ ಲಾಭದಲ್ಲಿ ಶೇ.5 ರಷ್ಟು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗ ಮಾಡುತ್ತಾ ಬಂದಿದೆ. ಇವುಗಳಲ್ಲಿ ಪ್ರಮುಖವಾಗಿ ಆರೋಗ್ಯ, ಹಸಿವು ಮುಕ್ತ ಸಮಾಜ ನಿರ್ಮಾಣ, ವಸತಿ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಗೆ ಈ ಹಣವನ್ನು ಮೀಸಲಿಟ್ಟಿದೆ. ಸಂಸ್ಥೆಯ ಇಎಸ್‌ಜಿ ಗುರಿಗಳನ್ನು ನಿಯತಕಾಲಿಕವಾಗಿ ಸಾಮಾಜಿಕವಾಗಿ ಜಾಗೃತ ಮತ್ತು ಜವಾಬ್ದಾರಿಯುತ ಸಂಸ್ಥೆಯಾಗಿ ಉಳಿಯಲು ಬಲಪಡಿಸಲಾಗುತ್ತದೆ.

ಮೀನುಗಾರರ ರಕ್ಷಣೆಗೆ ಸಮುದ್ರ ಆಂಬ್ಯುಲೆನ್ಸ್​ ಯೋಜನೆ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 8 =
Remember me
