ಬೆಂಗಳೂರು:ಪ್ರಪಂಚದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಾರ್ಟ್ ವಿಡಿಯೋ ಆಪ್ ‘ಚಿಂಗಾರಿ’ ತನ್ನ ಮೊದಲ ಕ್ರಿಪ್ಟೋ ಟೋಕನ್ ‘GARI’ ಹಾಗೂ ಎನ್​ಎಫ್​ಟಿ ಮಾರ್ಕೆಟ್ ಪ್ಲೇಸ್ ಅನ್ನು ಲೋಕಾರ್ಪಣೆಗೊಳಿಸಿದೆ.
ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎನ್​ಎಫ್​ಟಿ ಮಾರ್ಕೆಟ್ ಪ್ಲೇಸ್ ಹಾಗೂ ‘GARI’ ’ ಟೋಕನ್ ರಿವಾರ್ಡ್ ಪ್ರೊಗ್ರಾಮ್ ರಾಯಭಾರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಚಿಂಗಾರಿ ಆಪ್​ನ ಮೊದಲ ಸೋಷಿಯಲ್ ಟೋಕನ್ ಬಿಡುಗಡೆ ಮಾಡಿದರು. ಈ ಮೂಲಕ ಕ್ರಿಪ್ಟೋ ಟೋಕನ್​ಗಳನ್ನು ವಿತರಿಸಿದ ಭಾರತದ ಮೊದಲ ಸೋಷಿಯಲ್ ನೆಟ್​ವರ್ಕ್ ಎಂಬ ಹೆಗ್ಗಳಿಕೆಗೆ ಚಿಂಗಾರಿ ಪಾತ್ರವಾಗಿದೆ.
ಸಲ್ಮಾನ್ ಖಾನ್ ಮಾತನಾಡಿ, ಚಿಂಗಾರಿ ಆಪ್ ಮೂಲಕ ಕ್ರಿಯೇಟರ್​ಗಳು ಮನರಂಜನೆಯ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಇದೀಗ, ‘GARI’ ಟೋಕನ್ ರಿವಾರ್ಡ್ ಪ್ರೊಗ್ರಾಮ್ ಹೊಸ ಹೊಸ ಹಾಗೂ ಆಕರ್ಷಕ ವಿಡಿಯೋಗಳನ್ನು ಮಾಡಲು ಕ್ರಿಯೇಟರ್​ಗಳನ್ನು ಮತ್ತಷ್ಟು ಪ್ರೇರೇಪಿಸುತ್ತದೆ. ಮುಂದಿನ ದಿನಗಳಲ್ಲಿ ಚಿಂಗಾರಿ ಮತ್ತಷ್ಟು ಆಕರ್ಷಕ ಹಾಗೂ ಆಸಕ್ತಿದಾಯಕವಾಗಲಿದೆ ಎಂದರು.
ಕ್ರಿಯೇಟರ್​ಗಳನ್ನು ಉತ್ತೇಜಿಸುವ ಉದ್ದೇಶ: ಚಿಂಗಾರಿ ಸಿಇಒ ಸುಮಿತ್ ಘೋಷ್ ಮಾತನಾಡಿ, ಚಿಂಗಾರಿಯ ಬ್ಲಾಕ್​ಚೈನ್ ವೇದಿಕೆಯು ಲಕ್ಷಾಂತರ ಬಳಕೆದಾರರಿಗೆ ಕಿರು ವಿಡಿಯೋಗಳನ್ನು ಕ್ರಿಯೇಟ್ ಮಾಡಲು, ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಹಾಗೂ ವೀಕ್ಷಿಸಲು ‘GARI’ ಟೋಕನ್​ಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಕ್ರಿಯೇಟರ್​ಗಳಿಗೆ ಪ್ರತಿಭೆಯ ಮೂಲಕ ಹಣ ಸಂಪಾದಿಸಲು ಅವಕಾಶ ಒದಗಿಸುವ ಜತೆಗೆ, ಸಾಮಾಜಿಕ ವೇದಿಕೆಗಳಲ್ಲಿ ಅವರನ್ನು ಮತ್ತಷ್ಟು ಸಶಕ್ತರನ್ನಾಗಿಸುವ ಉದ್ದೇಶ ಈ ಯೋಜನೆಯದ್ದಾಗಿದೆ. ‘GARI’ ಟೋಕನ್ ಭಾರತೀಯ ಡಿಜಿಟಲ್ ಹಾಗೂ ಕ್ರಿಯೇಟರ್ ಆರ್ಥಿಕತೆಯ ಆವಿಷ್ಕಾರ ಎನಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರಾದ ವಾಣಿ ಕಪೂರ್, ಸೊನಾಲಿ ಸೇಗಲ್, ಚಿಂಗಾರಿ ಸಹ ಸಂಸ್ಥಾಪಕರಾದ ದೀಪಕ್ ಸಾಳ್ವಿ (ಸಿಒಒ), ಬಿಸ್ವಾತ್ಮ ನಾಯಕ್ (ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ) ಹಾಗೂ ಆದಿತ್ಯ ಕೊಠಾರಿ (ಸ್ಟ್ರಾಟಜಿ ವಿಭಾಗದ ಮುಖ್ಯಸ್ಥ) ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
