ಉತ್ತರಪ್ರದೇಶ:ಉತ್ತರಪ್ರದೇಶದ ಬಲಿಯಾ ಎಂಬಲ್ಲಿನ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಫೀಸ್​ ಕಟ್ಟಿಲ್ಲ ಎಂದು ಕಿರುಕುಳ ನೀಡಿ ಥಳಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಾಂಶುಪಾಲರ ಜೊತೆಗೆ ಶಿಕ್ಷಕ, ಶಾಲಾ ವ್ಯವಸ್ಥಾಪಕರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಪ್ರಾಂಶುಪಾಲ ಸತ್ಯೇಂದ್ರ ಪಾಲ್​ನನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳಾದ ಶಾಲಾ ವ್ಯವಸ್ಥಾಪಕ ಪ್ರದ್ಯುಮಾನ್ ವರ್ಮಾ ಮತ್ತು ಶಿಕ್ಷಕಿ ಅಫ್ಸಾನಾ ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಔಟ್‌ಪೋಸ್ಟ್ ಇನ್‌ಚಾರ್ಜ್ ಅಶೋಕ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.
ಎಫ್‌ಐಆರ್‌ ಪ್ರಕಾರ, ಬಲಿಯಾದ ರಾಸ್ರಾ ಪಟ್ಟಣದ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಏಳು ವರ್ಷದ ಅಯಾಜ್ ಅಖ್ತರ್, ಫೀಸ್​ ಪಾವತಿಸದ ಕಾರಣಕ್ಕಾಗಿ ಜನವರಿ 27 ರಂದು ತನ್ನ ತರಗತಿಯಲ್ಲಿ ನಾಲ್ಕು ಗಂಟೆಗಳ ಕಾಲ ಎರಡೂ ಕೈಗಳನ್ನು ಎತ್ತಿ ನಿಲ್ಲುವಂತೆ ಮಾಡಲಾಗಿತ್ತು. ಶಿಕ್ಷಕ ಮರದ ದೊಣ್ಣೆಯಿಂದ ಮಗುವಿಗೆ ಥಳಿಸಿದ್ದರಿಂದ ಮಗು ಪ್ರಜ್ಞೆ ತಪ್ಪಿ ಪಾರ್ಶ್ವವಾಯುವಿಗೆ ತುತ್ತಾಗಿದೆ ಎಂದು ಮಗುವಿನ ಕುಟುಂಬಸ್ಥರು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 5 =
Remember me
