ಅಯೋಧ್ಯೆ:ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾದ ಆಚರಣೆಗಳು ಅದ್ದೂರಿಯಾಗಿ ಸಾಗುತ್ತಿದ್ದು, ಇದೀಗ ಇಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯಲ್ಲಿ ಇರಿಸಲಾದ ದೇವರ ಮೂರ್ತಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:ಅಧಿಕಾರಿಗಳ ಹೆಸರಲ್ಲೇ ವಾಟ್ಸ್​ಆಪ್ ಸ್ಕ್ಯಾಮ್; ಪೊಲೀಸರಿಗೆ ತಲೆನೋವಾದ ಸೈಬರ್ ಕಳ್ಳರ ಹೊಸ ತಂತ್ರ
ಜನವರಿ 22ರಂದು ನಡೆಯಲಿರುವ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಮೊದಲು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ರಾಮಲಲ್ಲಾನ ವಿಗ್ರಹದ ಮೊದಲ ದೃಶ್ಯಗಳು ಅನಾವರಣಗೊಂಡಿದ್ದು, ವಿಗ್ರಹವನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ.
Take a look at idol of Lord Ram inside Ayodhya temple's sanctum sanctorum
Read@ANIStory |https://t.co/MSbha3ACQA#RamMandirPranPratishta#RamLalla#ayodhyapic.twitter.com/19PhJehGef
— ANI Digital (@ani_digital)January 18, 2024

ಗುರುವಾರ ಮುಂಜಾನೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಪೂರ್ವಭಾವಿಯಾಗಿ ಆಚರಣೆಗಳ ಭಾಗವಾಗಿ ಗರ್ಭಗುಡಿಯೊಳಗೆ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆಯಲ್ಲಿ ಅರಳಿದ 51 ಇಂಚಿನ ವಿಗ್ರಹವನ್ನು ಗುರುವಾರ ನಸುಕಿನಲ್ಲಿ ದೇವಸ್ಥಾನಕ್ಕೆ ತರಲಾಯಿತು.
ಇದನ್ನೂ ಓದಿ:ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಬೆಳಗಲಿವೆ ರಾಮನ ಹೆಸರಿನ 300ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು!
ಪ್ರಾರ್ಥನೆಯ ಪಠಣದ ನಡುವೆ ಈ ಕಾರ್ಯವನ್ನು ಮಾಡಲಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದ್ದು, “ಪ್ರಧಾನ ಸಂಕಲ್ಪ”ದ ಹಿಂದಿನ ಕಲ್ಪನೆಯೆಂದರೆ, ಭಗವಾನ್ ರಾಮನ ‘ಪ್ರತಿಷ್ಠೆ’ಯನ್ನು ಎಲ್ಲರ ಕಲ್ಯಾಣಕ್ಕಾಗಿ, ರಾಷ್ಟ್ರದ ಕಲ್ಯಾಣಕ್ಕಾಗಿ, ಮಾನವೀಯತೆಯ ಕಲ್ಯಾಣಕ್ಕಾಗಿ ಮತ್ತು ಈ ಕೆಲಸಕ್ಕೆ ಕೊಡುಗೆ ನೀಡಿದವರಿಗಾಗಿ ಮಾಡಲಾಗುತ್ತಿದೆ. ಬ್ರಾಹ್ಮಣರಿಗೂ ವಸ್ತ್ರಗಳನ್ನು ನೀಡಲಾಯಿತು ಮತ್ತು ಎಲ್ಲರಿಗೂ ಕೆಲಸವನ್ನು ವಹಿಸಲಾಯಿತು ಎಂದು ಹೇಳಿದರು,(ಏಜೆನ್ಸೀಸ್).
ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಬೆಳಗಲಿವೆ ರಾಮನ ಹೆಸರಿನ 300ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fourteen =
Remember me
