ಚಂಡೀಗಢ:ಗೋಮಾಂಸ ಸೇವಿಸಿದ್ದಾನೆ ಎಂಬ ಶಂಕೆಯಿಂದ ವಲಸೆ ಕಾರ್ಮಿಕನನ್ನು ಗೋರಕ್ಷಕರ ಗುಂಪು ಥಳಿಸಿ ಹತ್ಯೆ ಮಾಡಿರುವ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಮೃತನನ್ನು ಸಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಆತ ಪಶ್ಚಿಮ ಬಂಗಾಳದಿಂದ ಬಂದಿದ್ದ ವಲಸೆ ಕಾರ್ಮಿಕ ಎಂದು ಪೊಲೀಸರು ಶನಿವಾರ (ಆಗಸ್ಟ್​​​ 31) ತಿಳಿಸಿದ್ದಾರೆ.
ಇದನ್ನು ಓದಿ:ನಡುರಸ್ತೆಯಲ್ಲಿ ವೃದ್ಧದಂಪತಿಯನ್ನು ಯಾಮಾರಿಸಿ ಚಿನ್ನ ಕದ್ದ ಖದೀಮ; ವಿಡಿಯೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?
ಸಬೀರ್​ ಮಲಿಕ್​​ ಗೋಮಾಂಸ ತಿಂದಿದ್ದಾನೆ ಎಂದು ಶಂಕಿಸಿ ಆರೋಪಿಗಳು ಪ್ಲಾಸ್ಟಿಕ್​ ಬಾಟಲ್​ಗಳನ್ನು ಮಾರಾಟ ಮಾಡುವ ನೆಪದಲ್ಲಿ ಅಂಗಡಿಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಅದನ್ನು ಕಂಡ ಕೆಲವರು ಮಧ್ಯ ಪ್ರವೇಶಿಸಿ ನಿಲ್ಲಿಸಲು ಹೇಳಿದ್ದಾರೆ. ಇದಾದ ಬಳಿಕ ಸಬೀರ್​ನನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ಮತ್ತೆ ಹೊಡೆದಿದ್ದಾರೆ. ಮನಸ್ಸೊ ಇಚ್ಛೆ ಥಳಿಸಿರುವುದೆ ಆತನ ಸಾವಿಗೆ ಕಾರಣವಾಗಿದೆ. ಈ ಘಟನೆ ಆಗಸ್ಟ್​​ 27ರಂದು ನಡೆದಿದೆ ಎಂದು ಹಿರಿಯ ಪೊಲೀಸ್​​ ಅಧಿಕಾರಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಸಬೀರ್​ ಜೀವನೋಪಾಯಕ್ಕಾಗಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ದಾದ್ರಿ ಜಿಲ್ಲೆಯ ಬಾಂದ್ರಾ ಬಳಿಯ ಕೊಳಗೇರಿಯಲ್ಲಿ ವಾಸವಿದ್ದರು ಎಂದು ತಿಳಿಸಿದರು. ಅಲ್ಲದೆ ಆರೋಪಿಗಳನ್ನು ಅಭಿಷೇಕ್, ಮೋಹಿತ್, ರವೀಂದರ್, ಕಮಲಜೀತ್ ಮತ್ತು ಸಾಹಿಲ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಕಳೆದ ವರ್ಷ ಫೆಬ್ರವರಿಯಲ್ಲಿ ರಾಜಸ್ಥಾನದ ಇಬ್ಬರು ಮುಸ್ಲಿಂ ಪುರುಷರನ್ನು ಹರಿಯಾಣದ ಭಿವಾನಿಯಲ್ಲಿ ಗೋ ಸಂರಕ್ಷಣಾ ಗ್ಯಾಂಗ್ ಅಪಹರಿಸಿ ಹಲ್ಲೆ ನಡೆಸಿದ್ದಲ್ಲದೆ, ಹತ್ಯೆ ಮಾಡಿ ಸುಟ್ಟು ಹಾಕಿತ್ತು. ನಂತರ ಕಾರಿನಲ್ಲಿ ಇಬ್ಬರ ಸುಟ್ಟ ಶವ ಪತ್ತೆಯಾಗಿತ್ತು. ಮೃತರನ್ನು ಜುನೈದ್​​(35) ಮತ್ತು ನಾಸಿರ್​​(25) ಎಂದು ಗುರುತಿಸಲಾಯಿತು. ಬಳಿಕ ಈ ಇಬ್ಬರ ಹತ್ಯೆಗೆ ಕಾರಣರಾದ ಬಜರಂಗದಳದ ಪದಾಧಿಕಾರಿ ಮೋನು ಮಾನೇಸರ್ ಅಕಾ ಮೋನು ಯಾದವ್ ವಿರುದ್ಧ ರಾಜಸ್ಥಾನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್​​)
ನಗ್ನ ಚಿತ್ರಕ್ಕಾಗಿ ಕ್ಯಾರವಾನ್​ನಲ್ಲಿ ಹಿಡನ್​ ಕ್ಯಾಮೆರಾ ಅಳವಡಿಸಿದ್ರು; ಸ್ಫೋಟಕ ವಿಚಾರ ಬಿಚ್ಚಿಟ್ಟ ಜನಪ್ರಿಯ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 5 =
Remember me
