ನವದೆಹಲಿ:ಭಾರತದ ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ಸುಮಾರು ಐದು ಕೋಟಿ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಅದು ಇನ್ನೂ ಹೆಚ್ಚಾಗಬಹುದು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ. ಕಾನೂನು ಸೇವೆಗಳು ಜನಸಾಮಾನ್ಯರ ಕೈಗೆ ಎಟುಕದಂತಾಗಿದೆ ಎಂದೂ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಔರಂಗಾಬಾದ್​ನಲ್ಲಿರುವ ಮಹಾರಾಷ್ಟ್ರ ನ್ಯಾಷನಲ್ ಲಾ ಯೂನಿವರ್ಸಿಟಿಯ (ಎಂಎನ್​ಎಲ್​ಯುು) ಪ್ರಥಮ ಘಟಿಕೋತ್ಸವದಲ್ಲಿ ಮಾತನಾಡಿದ ಸಚಿವರು, ಭಾರತದ ನ್ಯಾಯಾಂಗದ ಗುಣಮಟ್ಟ ವಿಶ್ವವಿಖ್ಯಾತವಾದುದು. ಎರಡು ದಿನಗಳ ಹಿಂದೆ ತಾವು ಲಂಡನ್​ನಲ್ಲಿದ್ದಾಗ ಅಲ್ಲಿ ಭೇಟಿಯಾದ ಜನರು ಕೂಡ ಭಾರತದ ನ್ಯಾಯಾಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪಗಳನ್ನು ಬ್ರಿಟನ್​ನಲ್ಲಿ ಆಗಾಗ ಉಲ್ಲೇಖಿಸಲಾಗುತ್ತದೆ ಎಂದರು.
ತಾವು ಈ ಖಾತೆಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಬಾಕಿಯಿರುವ ಕೇಸ್ ಸಂಖ್ಯೆ ನಾಲ್ಕು ಕೋಟಿಗಿಂತ ಸ್ವಲ್ಪ ಕಡಿಮೆಯಿತ್ತು. ಈಗ ಅದು ಐದು ಕೋಟಿಯಷ್ಟಾಗಿದೆ. ಇದು ನಮ್ಮೆಲ್ಲರಿಗೂ ಚಿಂತೆಯ ವಿಷಯವಾಗಿದೆ ಎಂದರು. ಪ್ರಕರಣಗಳ ಬಾಕಿಗೆ ನ್ಯಾಯ ನೀಡಿಕೆಯಲ್ಲಿನ ದಕ್ಷತೆಯ ಕೊರತೆ ಅಥವಾ ಸರ್ಕಾರದ ಬೆಂಬಲದ ಕೊರತೆ ಕಾರಣವಲ್ಲ. ಆದರೆ, ಏನಾದರೂ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳದಿದ್ದರೆ ಬಾಕಿ ಕೇಸ್​ಗಳ ಸಂಖ್ಯೆ ಇನ್ನಷ್ಟು ಹೆಚ್ಚುವುದು ನಿಶ್ಚಿತ ಎಂದು ಎಚ್ಚರಿಸಿದರು.
ದಿನಕ್ಕೆ 50 ಪ್ರಕರಣ:ಬ್ರಿಟನ್​ನಲ್ಲಿ ನ್ಯಾಯಾಧೀಶರು ದಿನವೊಂದಕ್ಕೆ ಸರಾಸರಿ 4-5 ತೀರ್ಪಗಳನ್ನು ನೀಡುತ್ತಾರೆ. ಆದರೆ ಭಾರತದಲ್ಲಿ ನ್ಯಾಯಾಧೀಶರು ಪ್ರತಿದಿನ ಸರಾಸರಿ 50 ಪ್ರಕರಣಗಳ ವಿಚಾರಣೆ ನಡೆಸಬೇಕಿದೆ. ಜನರು ಉತ್ತಮ ಗುಣಮಟ್ಟದ ತೀರ್ಪು ನಿರೀಕ್ಷಿಸುತ್ತಾರೆ. ನ್ಯಾಯಾಧೀಶರ ಮೇಲೆ ಇದರಿಂದ ಒತ್ತಡ ಹೆಚ್ಚಾಗಿದೆ. ಜತೆಗೆ ಶುಲ್ಕದಲ್ಲೂ ಭಾರಿ ಏರಿಕೆ ಕಂಡುಬರುತ್ತಿದೆ. ಬಡವರು, ಸಾಮಾನ್ಯ ಜನರು ಉತ್ತಮ ವಕೀಲರನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ ಎಂದು ಸಚಿವ ರಿಜಿಜು ಅಸಮಾಧಾನ ವ್ಯಕ್ತಪಡಿಸಿದರು.
ವರ್ಣರಂಜಿತ ಕೆಆರ್​ಎಸ್​: ಬಣ್ಣಗಳಿಂದ ಕಂಗೊಳಿಸುತ್ತಿರುವ ಕನ್ನಂಬಾಡಿ..

ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 3 =
Remember me
