ಮಿಝೋರಾಮ್:ನಾವು ಚಿನ್ನ, ಹಳೆಯ ಮೂರ್ತಿಗಳು, ಮಾದಕ ವಸ್ತು, ಹೀಗೆ ಅನೇಕ ರೀತಿಯ ವಸ್ತುಗಳ ಕಳ್ಳ ಸಾಗಾಣಿಕೆಯ ಬಗ್ಗೆ ಕೇಳಿದ್ದೇವೆ. ಆದರೆ ಸಿಗರೆಟ್​ನ ಕಳ್ಳ ಸಾಗಾಣಿಕೆ ಬಗ್ಗೆ ಅನೇಕರು ಕೇಳಿರಲಿಕ್ಕಿಲ್ಲ.
ಮಿಝೋರಾಮ್​ನ ಛಂಫಯ್​ ಎಂಬಲ್ಲಿ ಅಸ್ಸಾಂ ರೈಫಲ್ಸ್​ ಪಡೆ ಸುಮಾರು ಐದು ಕೋಟಿಗೂ ಅಧಿಕ ಮೊತ್ತದ ವಿದೇಶೀ ಸಿಗರೆಟ್​ಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದರು.
‘ಅಸ್ಸಾಂ ರೈಫಲ್ಸ್​ನ ಇನ್ಸ್‌ಪೆಕ್ಟರ್ ಜನರಲ್ ನೇತೃತ್ವದಲ್ಲಿ ಸೆರ್ಚಿಪ್ ಬೆಟಾಲಿಯನ್, ಟಿಯು ನದಿಯ ಬಳಿಯ ರುವಾಂಟ್‌ಲಾಂಗ್ ಪ್ರದೇಶದಲ್ಲಿ 5.46 ಕೋಟಿ ರೂಪಾಯಿ ಮೌಲ್ಯದ 420 ವಿದೇಶಿ ಸಿಗರೇಟ್‌ ಪ್ಕ್ಸ್ಯಾಕ್​ ತುಂಬಿದ ಭಾಕ್ಸ್​​ಗಳನ್ನು ವಶಪಡಿಸಿಕೊಂಡಿದೆ’ ಎಂದು ಅಧಿಕೃತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಕಳ್ಳಸಾಗಣೆ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಯಶಸ್ಸು ದೊರಕಿದೆ.
‘ವಶಪಡಿಸಿಕೊಂಡ ವಸ್ತುಗಳು ಟಿಯು ನದಿ ಬಳಿಯ ರುವಾಂಟ್​ಲಾಂಗ್​ ಪ್ರದೇಶದಲ್ಲಿ ಪತ್ತೆಯಾಗಿವೆ. ಅವುಗಳನ್ನು ಕಸ್ಟಮ್ಸ್​ ಅಧಿಕಾರಿಗಳಿಗೆ ಮುಂದಿನ ವಿಚಾರಣೆಗಾಗಿ ಹಸ್ತಾಂತರಿಸಲಾಗಿದೆ’ ಎಂದು ಅಸ್ಸಾಂ ರೈಫಲ್ಸ್​ನ ಅಧಿಕಾರಿಯೊಬ್ಬರು ತಿಳಿಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
