ಹತ್ತೊಂಬತ್ತನೇ ಶತಮಾನದಲ್ಲಿ ಭಾರತ ಕಂಡ ಪರಮಶ್ರೇಷ್ಠ ತತ್ವಜ್ಞಾನಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಚಿಂತಕರು ಅರವಿಂದರು. ಅವರದು ಭೂಸದೃಶ ವ್ಯಕ್ತಿತ್ವ. ಅವರ ಭವ್ಯ ಜೀವನದ ಪಥ ಲೋಕೋತ್ತರವಾದುದು. ಅನುಭವ, ಅನುಭಾವದ ತಾತ್ವಿಕ ಚಿಂತನ ಮಾರ್ಗದಲ್ಲಿ ಮೂಡಿಬಂದ ಅವರ ವಿಚಾರಧಾರೆಗಳು ಬದುಕಿನ ಅನೂಹ್ಯ ದರ್ಶನ ಮಾಡಿಸುತ್ತವೆ. ‘ಅರವಿಂದರ ಅವ್ಯಕ್ತ ಆಧ್ಯಾತ್ಮಿಕ ಚೇತನದ ಮಾತಿರಲಿ, ಅತ್ಯಲ್ಪ ಪ್ರಮಾಣದಲ್ಲಿಯಾದರೂ ಅವರ ವಾšಯ ಶರೀರದ ಸಾಧನೆಯ ಈಷತ್ ಪರಿಚಯ ಮಾಡಿಕೊಳ್ಳುವುದೆಂದರೆ ಸಾಗರ ಪರ್ಯಟನ, ಹಿಮಾಲಯ ಪ್ರವಾಸಗಳನ್ನು ಒಟ್ಟಿಗೆ ಕೈಗೊಂಡಂತೆ!’ ಎನ್ನುವ ಮಹಾಕವಿ ಕುವೆಂಪು ಅವರ ಮಾತುಗಳು ಅರವಿಂದರ ಮಹೋನ್ನತ ಜೀವನಮಾರ್ಗವನ್ನು ಅನಾವರಣಗೊಳಿಸುತ್ತವೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಕಂಕಣಬದ್ಧರಾದ ಅರವಿಂದರು ಭಾರತೀಯ ಜನಾಂಗವನ್ನು ಜಾಗೃತಗೊಳಿಸಿ, ಅವರಲ್ಲಿ ಭಾರತೀಯತೆಯನ್ನು ಉದ್ದೀಪನಗೊಳಿಸಿದರು. ದಾಸ್ಯದಿಂದ ಇಡೀ ಮನುಕುಲದ ಅವನತಿ ಆಗುವುದೆಂದು ಎಚ್ಚರಿಸಿದ ಅವರು, ಸ್ವತಃ ಸ್ವಾತಂತ್ರ್ಯಯೋಧರಾಗಿ ಮಾಡಿದ ಕಾರ್ಯ ಶ್ಲಾಘನೀಯವಾದುದು. ಅಷ್ಟೇ ಅಲ್ಲದೆ, ಅವರು ಭಾರತದ ತತ್ವಜ್ಞಾನವನ್ನು ವಿಶ್ವಕ್ಕೆ ಕೊಡುಗೆ ಕೊಟ್ಟ ಮಹನೀಯರಲ್ಲಿ ಅಗ್ರಗಣ್ಯರು. ಮಾನವನ ಬದುಕಿನಲ್ಲಿ ದೈವೀಕತಡ ಬಂದು ನೆಲೆಸುವುದನ್ನು ಬಯಸಿದ ಅವರು ಆತ್ಮೋನ್ನತಿಗಾಗಿ ಮಾನವಕುಲ ಒಂದಾಗಿ, ಮೃಗತ್ವವು ನಾಶವಾಗಿ ಮರ್ತಯ ಪರತತ್ವ ಪ್ರತಿಷ್ಠಾಪನೆಯಾಗಬೇಕು ಎಂದಿದ್ದಾರೆ. ಈ ವಿಚಾರಗಳನ್ನು ಅವರ ಲೈಫ್ ಡಿವೈನ್, ಸಾವಿತ್ರಿ, ಯೋಗ ಸಮನ್ವಯ, ಗೀತಾಪ್ರಬಂಧ, ಮಾನವ ಚಕ್ರ, ವೇದ ರಹಸ್ಯ, ಅಗ್ನಿಸೂತ್ರಗಳು ಮುಂತಾದ ಗ್ರಂಥ ಮತ್ತು ದಾಖಲೆಗಳಲ್ಲಿ ಕಾಣಬಹುದಾಗಿದೆ.
ಇಂದು ರಾಷ್ಟ್ರೀಯ ಸಮ್ಮೇಳನ:ಅರವಿಂದರ 150ನೇ ಜನ್ಮ ಮಹೋತ್ಸವದ ಅಂಗವಾಗಿ ಶ್ರೀ ಅರಬಿಂದೊ ಕಾಂಪ್ಲೆಕ್ಸ್ ಟ್ರಸ್ಟ್, ಶ್ರೀ ಅರಬಿಂದೊ ಸೊಸೈಟಿ ಸ್ಟೇಟ್ ಕಮಿಟಿ ವತಿಯಿಂದ ‘ಅರವಿಂದರ ವಿಚಾರಗಳ ಬೆಳಕಿನಲ್ಲಿ ಭಾರತದ ಪುನರುತ್ಥಾನ ಮತ್ತು ಭಾರತೀಯ ರಾಷ್ಟ್ರವಾದ’ ಕುರಿತಂತೆ ಒಂದು ದಿನದ ರಾಷ್ಟ್ರಿಯ ಸಮ್ಮೇಳನವನ್ನು ಆಗಸ್ಟ್ 7ರಂದು ಬೆಂಗಳೂರಿನ ನಿಮ್ಹಾನ್ಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಈ ಕನಸುಗಳೊಂದಿಗೆ ಅವರೇ ಹೇಳಿದಂತೆ ಮೂರು ಹುಚ್ಚುಗಳು ಅವರನ್ನು ಆವರಿಸಿತ್ತು.
ಮೊದಲನೆಯದು, ಅವರಿಗೆ ಭಗವಂತನು ದಯಪಾಲಿಸಿದ ಪಾಂಡಿತ್ಯ, ಪ್ರತಿಭೆ, ಉಚ್ಚ ಶಿಕ್ಷಣ, ವಿದ್ಯಾರ್ಜನೆ ಮತ್ತು ಸಂಪತ್ತು ಇವೆಲ್ಲವೂ ಅವನವೇ ಎಂಬುದರಲ್ಲಿ ಅವರಿಗೆ ದೃಢವಾದ ನಂಬಿಕೆಯಿತ್ತು. ಕುಟುಂಬ ನಿರ್ವಹಣೆ ಮತ್ತು ಅತಿ ಅವಶ್ಯವಿರುವ ಉದ್ದೇಶಗಳಿಗಾಗಿ ಮಾತ್ರ ಹಣವನ್ನು ಖರ್ಚು ಮಾಡಲು ಅಧಿಕಾರವಿದೆ. ಉಳಿದುದೆಲ್ಲವನ್ನೂ ಭಗವಂತನಿಗೇ ಹಿಂತಿರುಗಿಸಬೇಕೆಂಬುದು ಅವರ ನಿಲುವಾಗಿತ್ತು. ಬಂದದು ಬರಲಿ, ಯಾವುದೇ ಮಾರ್ಗದಿಂದಾಗಲಿ ಭಗವಂತನ ಪ್ರತ್ಯಕ್ಷ ಸಾಕ್ಷಾತ್ಕಾರ ಪಡೆಯಬೇಕೆಂಬುದು ಅವರ ಎರಡನೆಯ ಹುಚ್ಚು. ಧರ್ಮವೆಂದರೆ ಪದೇಪದೆ ದೇವರ ನಾಮಗಳನ್ನು ಪುನರುಚ್ಚರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರ ಎದುರಿನಲ್ಲಿ ಪ್ರಾರ್ಥನೆ ಸಲ್ಲಿಸುವುದು ಮತ್ತು ತಾವೆಷ್ಟು ಧಾರ್ವಿುಕರಾಗಿದ್ದೇವೆಂಬುದನ್ನು ಜನರಿಗೆ ತೋರಿಸಿಕೊಡುವುದು ಅಲ್ಲ. ಭಗವಂತನು ಇದ್ದುದೇ ಆದರೆ ಆತನ ಅಸ್ತಿತ್ವವನ್ನು ಅನುಭವದಿಂದ ಅರಿತು ಆತನ ಸಾನ್ನಿಧ್ಯವನ್ನು ಕಂಡುಕೊಳ್ಳಲು ನೆರವಾಗಬಲ್ಲ ಮಾರ್ಗ ಅನುಸರಿಸುವುದು.
ಮೂರನೆಯ ಹುಚ್ಚು:ತಮ್ಮ ದೇಶವೆಂದರೆ ಹುಲ್ಲುಗಾವಲುಗಳು, ಹೊಲಗಳು, ಕಾಡುಗಳು, ಪರ್ವತ, ನದಿಗಳಿರುವ ಜಡದ್ರವ್ಯದ ತುಣುಕುಗಳೆಂದು ಭಾವಿಸದೆ ಅದನ್ನು ಮಾತೃಸ್ವರೂಪವೆಂದು ಭಾವಿಸಿ ಪೂಜಿಸುವುದು, ಗೌರವಿಸುವುದು. ಪರದಾಳಿಯಿಂದ ಅಧೋಗತಿಗಿಳಿದಿರುವ ಜನಾಂಗವನ್ನು ಮೇಲಕ್ಕೆತ್ತುವ, ಮುಕ್ತಗೊಳಿಸುವ ಶಕ್ತಿ ತಮಗಿದ್ದು, ಅದನ್ನು ದೈಹಿಕ ಶಕ್ತಿ ಹಾಗೂ ಖಡ್ಗ-ಬಂದೂಕುಗಳಿಂದ ಯುದ್ಧ ಮಾಡದೇ ಜ್ಞಾನಬಲದಿಂದ ಸಾಧಿಸುವುದು.
ಶ್ರೇಷ್ಠ ಶಿಕ್ಷಣತಜ್ಞ, ಅಪ್ರತಿಮ ದೇಶಭಕ್ತ, ಮಹಾನ್ ಯೋಗಿ, ದಿವ್ಯಚೇತನರಾದ ಅರವಿಂದರು ಕಂಡಂತಹ ಈ ಮಹಾನ್ ಕನಸುಗಳ ಸಾಕಾರಕ್ಕಾಗಿ ದುಡಿಯುವುದು ನಾಡಿನ ಪ್ರಜೆಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಸುಸಂದರ್ಭವು ಅವರ 150ನೇ ಜನ್ಮಮಹೋತ್ಸವ ಮಾತ್ರವಲ್ಲದೆ, ಭಾರತಮಾತೆಯ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವೂ ಆಗಿರುವುದು ನಮ್ಮೆಲ್ಲರ ಸೌಭಾಗ್ಯ.
ಆಯ್ದ ಭಾಗಗಳ ಸಂಗ್ರಹ:ಶಾರದಾಂಬ ಸಿ.ಆರ್., ಪ್ರಾಂಶುಪಾಲರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − five =
Remember me
