ತಮಿಳುನಾಡು:ಪಟಾಕಿ ಅಂಗಡಿಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಈ ಅವಘಡದಲ್ಲಿ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಕನಿಷ್ಠ ಐವರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂ ಎಂಬಲ್ಲಿನ ಪಟಾಕಿ ಅಂಗಡಿಯೊಂದರಲ್ಲಿ ಸಂಜೆಯ ಬಳಿಕ ಇಂಥದ್ದೊಂದು ಅಗ್ನಿಅನಾಹುತ ಸಂಭವಿಸಿದೆ.
ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿಯ ಕೆನ್ನಾಲಗೆ ಹೊರಹೊಮ್ಮಿದ್ದು, ಮುಗಿಲುಮುಟ್ಟುವ ರೀತಿಯಲ್ಲಿ ಬೆಂಕಿ ಧಗಧಗಿಸಿ ಉರಿದಿದೆ. ಘಟನೆಯಲ್ಲಿ ಐವರು ಸತ್ತಿದ್ದಾರೆ ಎನ್ನಲಾಗಿದ್ದು, ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯೂ ಇದೆ. ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ:ತಂಗಿಯನ್ನೇ ಕೊಂದ, ಖಡ್ಗ ಹಿಡಿದು ರಸ್ತೆಯಲ್ಲೇ ರಾಜಾರೋಷವಾಗಿ ನಡೆದ, ಹಾಗೇ ಪೊಲೀಸ್ ಠಾಣೆಗೂ ಹೋದ..!
ಈ ಘಟನೆಯಲ್ಲಿ ಒಂದು ಬೈಕ್​ ಕೂಡ ಹೊತ್ತಿ ಉರಿದಿದೆ. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಾವು-ನೋವುಗಳ ನಿಖರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದು, ಬೆಂಕಿ ನಂದಿಸುವ ಕೆಲಸ ಇನ್ನೂ ಜಾರಿಯಲ್ಲಿದೆ. ಉರಿಯುತ್ತಿರು ಜ್ವಾಲೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಸೆಣಸುತ್ತಿದ್ದಾರೆ.
‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!
Sign in to your account
Please enter an answer in digits:19 + twelve =
Remember me
