ನಲ್ಗೊಂಡ:ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರ್​ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮೃತರಲ್ಲಿ ಮೂವರನ್ನು ಚಾಲಕ ನಾಗೇಂದ್ರ, ರಾಜೇಶ್​ ಮತ್ತು ಗಣೇಶ್​ ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರ ಮಾಹಿತಿ ಲಭ್ಯವಾಗಬೇಕಿದೆ. ಮುಂಜಾನೆಯಾದ್ದರಿಂದ ಚಾಲಕ ತೂಗುಡಿಸುತ್ತಾ ಸ್ಟೀರಿಂಗ್​ ಮೇಲೆ ಮಲಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಕಾರು ಪೈಪ್​​​ಲೈನ್​ ಪಿಲ್ಲರ್​ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಮೃತರು ನಾಗಾರ್ಜುನ ಸಾಗರ್​ಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ:ವೆಡ್ಡಿಂಗ್​ ಫೋಟೋಶೂಟ್ ವೇಳೆ ವರನ ಕೈಯಿಂದ ಜಾರಿದ ವಧು: ಇಲ್ಲಿದೆ ನೀವ್ಯಾರು ಊಹಿಸದ ರೋಚಕ ಟ್ವಿಸ್ಟ್​!​
ಪೊಲೀಸ್​ ಮೂಲಗಳ ಪ್ರಕಾರ ಅಪಘಾತವೂ ನಲ್ಗೊಂಡ ಚಿಂತಪಲ್ಲಿ ಮಂಡಲದ ಧರಿಯಾಪುರಿ ತಾಂಡಾ ಬಳಿ ನಡೆದಿದೆ. ಕಾರು ದಿಢೀರನೇ ತಿರುವು ಪಡೆದುಕೊಂಡು ರಸ್ತೆ ಸಮೀಪದ ಪೈಪ್​ಲೈನ್​ ಪಿಲ್ಲರ್​ಗೆ ಡಿಕ್ಕಿ ಹೊಡೆದು, ಹಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಐವರು ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಘಟನೆ ನೋಡುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕಾಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣ ಕಾರ್ಯಾದಲ್ಲಿ ತೊಡಗಿದರು. ಆದರೆ, ಅಪಘಾತದ ಭೀಕರತೆ ಹೆಚ್ಚಿದ್ದರಿಂದ ಒಬ್ಬರು ಬದುಕುಳಿಯದೇ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಕಾರಿನ ಭಾಗಗಳನ್ನು ಕತ್ತರಿಸಿ ಮೃತದೇಹಳನ್ನು ಹೊರ ತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ ಶವಗಳನ್ನು ರವಾನಿಸಿದರು. ಚಿಂತಪಲ್ಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಬರ್ತಡೇ ಪಾರ್ಟಿ ಮುಗಿಸಿ ಮನೆ ಮರಳುತ್ತಿದ್ದ ಐವರು ಯುವಕರ ಭೀಕರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
