ನವದೆಹಲಿ:ದೇಶದಲ್ಲಿ ಕರೊನಾ ಸೋಂಕು ಪಸರಿಸುವಿಕೆ ವೇಗ ಹೆಚ್ಚಾಗಿದ್ದು ಇದೀಗ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಶುಕ್ರವಾರ 17 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಸೋಂಕು ಮೇ 18ಕ್ಕೆ ಒಂದು ಲಕ್ಷದ ಗಡಿ ದಾಟಿತ್ತು. 15 ದಿನಗಳ ನಂತರ ಜೂನ್ 2ಕ್ಕೆ ಎರಡು ಲಕ್ಷ ಪ್ರಕರಣಗಳು ದಾಖಲಾಯಿತು. ನಂತರ 10 ದಿನಗಳ ಅಂತರದಲ್ಲಿ (ಜೂನ್ 12) 3 ಲಕ್ಷ ಪ್ರಕರಣ, ಎಂಟು ದಿನದ ಅಂತರದಲ್ಲಿ (ಜೂನ್ 20) ನಾಲ್ಕು ಲಕ್ಷ ಪ್ರಕರಣ ಪತ್ತೆಯಾಗಿದೆ. ಇದೀಗ ಕೇವಲ ಆರು ದಿನಗಳಲ್ಲಿ ಒಂದು ಲಕ್ಷ ಹೊಸ ಪ್ರಕರಣ ದಾಖಲಾಗಿದೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿತ್ತು. ಇದೀಗ ಏಕದಿನ ಏರಿಕೆಯ ಸಂಖ್ಯೆ 18 ಸಾವಿರಕ್ಕೂ ಹೆಚ್ಚಾಗಿದೆ. ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ಮೊದಲ ಮೂರು ಸ್ಥಾನದಲ್ಲಿ ಮುಂದುವರಿದಿದೆ.
ಅಮೆರಿಕದ ಪ್ರಕರಣಗಳ ಸಂಖ್ಯೆ 25 ಲಕ್ಷ ದಾಟಿದೆ. ಸೋಂಕಿತ ದೇಶಗಳ ಪಟ್ಟಿಯಲ್ಲಿ ಅಮೆರಿಕವೇ ಮೊದಲನೇ ಸ್ಥಾನದಲ್ಲಿದೆ. ಪ್ರತಿನಿತ್ಯ 20-40 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಮೃತರಾದವರ ಸಂಖ್ಯೆಯಲ್ಲೂ ಮೊದಲ ಸ್ಥಾನದಲ್ಲಿದೆ. ಈವರೆಗೆ 1.26 ಲಕ್ಷಕ್ಕೂ ಹೆಚ್ಚು
ಜನರು ಸೋಂಕಿನಿಂದಾಗಿ ಮೃತ ರಾಗಿದ್ದಾರೆ. ಈ ಮೊದಲು ಅಮೆರಿಕ ದೇಶದಲ್ಲಿ 1 ಲಕ್ಷ ಜನರು ಸಾಯಬಹುದು ಎಂದು ಊಹಿಸಿತ್ತು. ಆದರೆ ಈಗಿನ ಬೆಳವಣಿಗೆ ನೋಡಿದರೆ ಮೃತರ ಸಂಖ್ಯೆ 2 ಲಕ್ಷ ದಾಟಬಹುದು ಎನ್ನಲಾಗಿದೆ. ಸೋಂಕಿತ ದೇಶಗಳ ಪಟ್ಟಿಯಲ್ಲಿ 12.4 ಲಕ್ಷ ಸೋಂಕಿತರೊಂದಿಗೆ ಬ್ರೆಜಿಲ್ ಎರಡನೇ ಸ್ಥಾನ, 6.2 ಲಕ್ಷ ಸೋಂಕಿತರೊಂದಿಗೆ ರಷ್ಯಾ ಮೂರನೇ ಸ್ಥಾನದಲ್ಲಿವೆ. ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ.
ಅಮೆರಿಕದ 2 ಕೋಟಿ ಜನರಿಗೆ ಸೋಂಕು?:ಅಮೆರಿಕದಲ್ಲಿ 2 ಕೋಟಿ ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ 31 ಕೋಟಿ ಜನಸಂಖ್ಯೆಯಿದೆ. ಅದರಲ್ಲಿ ಪ್ರಸ್ತುತ 25 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಪ್ರತಿಯೊಬ್ಬ ಸೋಂಕಿತನಿಂದ ಕನಿಷ್ಠ 10 ಮಂದಿಗೆ ಸೋಂಕು ಹರಡಿದ್ದು, ಹೆಚ್ಚಿನ ಸಂಖ್ಯೆಯ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್​ನ (ಸಿಡಿಸಿ) ನಿರ್ದೇಶಕ ಡಾ.ರಾಬರ್ಟ್ ರೆಡ್​ಫೀಲ್ಡ್ ತಿಳಿಸಿದ್ದಾರೆ. ದೇಶದ ಶೇ. 6 ಜನರು ಸೋಂಕಿಗೆ ತುತ್ತಾಗಿದ್ದರೂ ಲಾಕ್​ಡೌನ್ ಮಾತ್ರ ಕೈ ಬಿಡಲಾಗಿದೆ.

ಗುಣಮುಖ ಪ್ರಮಾಣ ಹೆಚ್ಚಳ:ದೇಶದಲ್ಲಿ ಕರೊನಾ ಗುಣಮುಖ ಪ್ರಮಾಣವು ಶೇ.58.24ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಗುರುವಾರ 13,940 ಸೋಂಕಿತರು ಗುಣಮುಖರಾಗಿದ್ದಾರೆ. ಇದೀಗ 2.85 ಲಕ್ಷಕ್ಕೂ ಅಧಿಕ ಸೋಂಕಿತರು ಸಂಪೂರ್ಣ ವಾಗಿ ಚೇತರಿಸಿಕೊಂಡಿದ್ದಾರೆ.
ಲಸಿಕೆ ಬರುವವರೆಗೂ ಮುನ್ನೆಚ್ಚರಿಕೆಯೇ ಮದ್ದು:ಕರೊನಾ ವೈರಸ್​ಗೆ ಲಸಿಕೆ ಬರುವವರೆಗೂ ನಮ್ಮ ರಕ್ಷಣೆ ನಮ್ಮ ಕೈನಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ‘ಆತ್ಮ ನಿರ್ಭರ ಉತ್ತರ ಪ್ರದೇಶ ರೋಜಗಾರ ಯೋಜನೆ’ಯನ್ನು ಶುಕ್ರವಾರ ಉದ್ಘಾಟಿಸಿ, ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು ಕರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಿ, ಎರಡು ಗಜ ಅಂತರ ಕಾಪಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಕರೊನಾದಿಂದ ಬಂದಿರುವ ಸಂಕಷ್ಟವನ್ನು ನಾವು ಎದುರಿಸಿ ಮುಂದೆ ಸಾಗಬೇಕಿದೆ. ಮುಂದಿನ ದಿನಗಳಲ್ಲಿ ನಾವು ಸಾಮೂಹಿಕ ಪ್ರಯತ್ನದಿಂದಾಗಿ ಯಶಸ್ಸು ಕಾಣಲಿದ್ದೇವೆ. ಈ ರೀತಿಯ ಸಮಸ್ಯೆ ನಮ್ಮ ಪಾಲಿಗೆ ಬರುತ್ತದೆ ಎಂದು ನಾವು ಊಹಿಸಿರಲಿಲ್ಲ. ಸೋಂಕಿನಿಂದ ಮುಕ್ತಿ ಸಿಗುವವರೆಗೂ ನಾವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅವಶ್ಯಕ ಎಂದಿದ್ದಾರೆ.
ವಲಸಿಗರಿಗೆ ಉದ್ಯೋಗ: ಆತ್ಮನಿರ್ಭರ ಉತ್ತರ ಪ್ರದೇಶ ರೋಜಗಾರ ಯೋಜನೆಯು ಬೇರೆ ರಾಜ್ಯಗಳಿಂದ ತಮ್ಮ ಸ್ವಂತ ಊರಿಗೆ ಮರಳಿರುವ ನೌಕರರಿಗೆ ಬಲ ನೀಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ರಾಜ್ಯಕ್ಕೆ 35 ಲಕ್ಷಕ್ಕೂ ಹೆಚ್ಚು ವಲಸಿಗರು ಮರಳಿದ್ದಾರೆ. ಅದರಲ್ಲಿ 30 ಲಕ್ಷದಷ್ಟು ಜನರನ್ನು ಸ್ಕಿಲ್ ಮ್ಯಾಪಿಂಗ್​ನಲ್ಲಿ ಗುರುತಿಸಲಾಗಿದೆ. ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡಿರುವ 1.25 ಕೋಟಿ ಜನರಿಗೆ ನೂತನ ಯೋಜನೆಯಿಂದ ಉಪಯೋಗವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಐರೋಪ್ಯ ದೇಶಗಳಿಗಿಂತ ಉಪ್ರ ಬೆಸ್ಟ್:ಉತ್ತರ ಪ್ರದೇಶವು ನಾಲ್ಕು ಬಲಿಷ್ಠ ಯುರೋಪಿಯನ್ ರಾಷ್ಟ್ರಗಳಿಗಿಂತ ಉತ್ತಮವಾಗಿ ಕರೊನಾ ನಿಯಂತ್ರಣ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಸ್ಪೇನ್​ನಲ್ಲಿ ಒಟ್ಟಾರೆ 24 ಕೋಟಿ ಜನರಿದ್ದಾರೆ. ಈ ನಾಲ್ಕು ದೇಶದಲ್ಲಿ ಒಟ್ಟಾಗಿ 1.30 ಲಕ್ಷ ಜನರು ಕರೊನಾ ಸೋಂಕಿನಿಂದಾಗಿ ಮೃತರಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ 24 ಕೋಟಿ ಜನರಿದ್ದಾರೆ. ಆದರೆ ಇಲ್ಲಿನ ಸಾವಿನ ಸಂಖ್ಯೆ 600. ಯೋಗಿ ಆದಿತ್ಯನಾಥ ಅವರ ಸರ್ಕಾರದ ಕಠಿಣ ಕ್ರಮಗಳಿಂದಲೇ ರಾಜ್ಯದಲ್ಲಿ ಕರೊನಾ ನಿಯಂತ್ರಣದಲ್ಲಿದೆ ಎಂದು ಮೋದಿ ಹೇಳಿದ್ದಾರೆ. ತಂದೆ ಮೃತರಾದ ಸಮಯದಲ್ಲೂ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ನಡೆಯಬೇಕಿದ್ದ ಕೆಲಸಗಳ ಬಗ್ಗೆಯೇ ಹೆಚ್ಚಿನ ಗಮನ ಕೊಟ್ಟಿದ್ದಾರೆ ಎಂದು ಪ್ರಧಾನಿ ಹೇಳಿದರು.
ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
