ನವದೆಹಲಿ:ಫೆ.24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಪತ್ನಿ ಮೆಲಾನಿಯಾ ಜತೆ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್​ ಆಗಮನದ ನಿಮಿತ್ತ ಅವರು ಭೇಟಿ ನೀಡುವ ಸ್ಥಳಗಳಾದ ಗುಜರಾತ್​ನ ಅಹಮದಾಬಾದ್​, ಆಗ್ರಾಗಳಲ್ಲೆಲ್ಲ ಹೆಚ್ಚಿನ ಭದ್ರತೆಗೆ ಸಿದ್ಧತೆ ಮಾಡಲಾಗಿದೆ.
ಆದರೆ ಆಗ್ರಾದಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು, ತುಂಬ ಕೀಟಲೆ ಮಾಡುತ್ತವೆ. ಈ ಕೋತಿಗಳು ರಕ್ಷಣಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿವೆ. ಎಷ್ಟೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದರೂ ಕೋತಿಗಳನ್ನು ನಿಯಂತ್ರಿಸುವುದು ಕಷ್ಟ. ಯಾಕೆಂದರೆ ಅವುಗಳ ಮೇಲೆ ಹಲ್ಲೆ ಮಾಡುವುದಾಗಲೀ, ಅವಕ್ಕೆ ಹೊಡೆದು ಓಡಿಸುವುದಾಗಿ ಅಪರಾಧ. ಹೀಗಾಗಿ ರಕ್ಷಣಾ ದಳ ಒಂದೊಳ್ಳೆ ಉಪಾಯವನ್ನು ಕಂಡುಕೊಂಡಿದೆ.
ಡೊನಾಲ್ಡ್​ ಟ್ರಂಪ್​ ಅವರಿಗೆ ರಕ್ಷಣೆ ನೀಡುವ ತಂಡದಲ್ಲಿ ಐದು ಲಂಗೂರ್​ (ಉದ್ದನೆಯ ಬಾಲದ ಮಂಗಗಳು)ಗಳನ್ನು ನಿಯೋಜಿಸಲಾಗಿದೆ. ಟ್ರಂಪ್​ ಅವರು ರಸ್ತೆ ಮಾರ್ಗದಲ್ಲಿ ಹೋಗುವಾಗ ಅವರಿಗೆ ಬೆಂಗಾವಲಾಗಿ ಹೋಗುವ ರಕ್ಷಣಾ ಪಡೆಗಳ ಜತೆ ಈ ಐದು ಲಂಗೂರ್​ಗಳು ಇರಲಿವೆ.
ಸಾಮಾನ್ಯ ಪ್ರಭೇದದ ಮಂಗಗಳು ಈ ಲಂಗೂರ್​ಗಳಿಗೆ ಹೆದರುತ್ತವೆ. ಲಂಗೂರ್​ಗಳು ಸಾಮಾನ್ಯ ಕೋತಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅಲ್ಲದೆ ತುಂಬ ಆಕ್ರಮಣಶೀಲವಾಗಿರುತ್ತದೆ. ಅವುಗಳನ್ನು ಕಂಡರೆ ಕೋತಿಗಳು ಹತ್ತಿರ ಬರುವುದಿಲ್ಲ. ಇದೇ ಕಾರಣಕ್ಕೆ ಭದ್ರತಾ ದಳಗಳು ಈ ಐಡಿಯಾ ಮಾಡಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್​ ಫೆ.24ರಂದು ತಾಜ್​ಮಹಲ್​ಗೆ ಭೇಟಿ ನೀಡಲಿದ್ದಾರೆ. ತಾಜ್​ಮಹಲ್​ಗೆ ಕೂಡ ಈಗಾಗಲೇ ಪೇಂಟಿಂಗ್​ ಮಾಡಲಾಗಿದೆ. ಅಲ್ಲಿನ ಜಾಗಗಳನ್ನೂ ಸ್ವಚ್ಛಗೊಳಿಸಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
