ತಿರುವನಂತಪುರ:ಮನೆಮಂದಿಯೆಲ್ಲ ಸಾವಿಗೀಡಾದಂಥ ಪ್ರಕರಣವಿದು. ಮನೆಯ ಯಜಮಾನನ ಶವ ಕೋಣೆಯಲ್ಲಿ ನೇತಾಡುತ್ತಿದ್ದರೆ, ಮನೆಯಲ್ಲಿದ್ದ ಇನ್ನು ನಾಲ್ವರು ನೆಲದ ಮೇಲೆ ಹೆಣಗಳಾಗಿ ಬಿದ್ದಿದ್ದರು.
ಕೇರಳದ ತಿರುವನಂತಪುರದ ಕಲ್ಲಂಬಲಂ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ಇಂಥದ್ದೊಂದು ದೃಶ್ಯ ಕಂಡುಬಂದಿದೆ. ಮನೆ ಯಜಮಾನ, ಆತನ ಪತ್ನಿ, ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಹಾಗೂ ಇನ್ನೊಬ್ಬ ಮಹಿಳೆ ಸಾವಿಗೀಡಾಗಿದವರು. ಹತ್ತಿರದ ಸಂಬಂಧಿಕರೊಬ್ಬರು ಬೆಳಗ್ಗೆ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕದ್ದ ಬಳಿಕ ಫ್ರಿಡ್ಜ್​ನಲ್ಲಿದ್ದ ತಿಂಡಿ ತಿನ್ನುತ್ತಿದ್ದ ಕಳ್ಳ; ಪರಾರಿಯಾಗಲು ಯತ್ನಿಸಿದವನನ್ನು ಹಿಡಿದುಕೊಡ್ತು ಸಾಕುನಾಯಿ!
ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಉಳಿದ ನಾಲ್ವರಿಗೆ ವಿಷ ಕುಡಿಸಿ ಮನೆ ಯಜಮಾನ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಐವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ಆರ್ಥಿಕ ಮುಗ್ಗಟ್ಟನ್ನು ಎದುರಿಸಲಾಗದೆ ಈ ರೀತಿ ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೋದವನ ದುರಂತ ಸಾವು: ‘ಆಘಾತಕಾರಿ’ ಘಟನೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
