ಜೈಪುರ:ತ್ರಿ ಸ್ಟಾರ್​ ಹೋಟೆಲ್​ ಒಂದರಲ್ಲಿ ತಂಗುವುದಕ್ಕೆ ಬಂದ ಐವರು, ಹೋಟೆಲ್​ನ ಮಹಿಳೆ ಸಿಬ್ಬಂದಿಯನ್ನೇ ರೇಪ್​ ಮಾಡಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಅವರು ಹೋಟೆಲ್​ಗೆ ಬಂದಿದ್ದರ ಹಿಂದಿನ ದೊಡ್ಡ ರಹಸ್ಯವೊಂದು ಬಯಲಾಗಿದೆ.
ಇದನ್ನೂ ಓದಿ:‘ಅಯ್ಯೋ ನಿಂಗೆ ಕ್ಯಾನ್ಸರ್​ ಇದೆ! ಟ್ರೀಟ್ಮೆಂಟ್​ ತಗೊಳ್ದಿದ್ರೆ ಸತ್ತೇ ಹೋಗ್ತೀಯ’ ಅಂತ ಹೇಳುತ್ತಲೇ 1.47 ಕೋಟಿ ರೂ. ವಂಚಿಸಿದ ವೈದ್ಯೆ!
ನರೇಶ್​ ಗುಜ್ಜರ್​, ಲೋಕೇಶ್​, ರಾಹುಲ್​, ದನ್ವೀರ್​ ಮತ್ತು ಪ್ರಿನ್ಸ್​ ತಿವಾರಿ ಶುಕ್ರವಾರದಂದು ಹೋಟೆಲ್​ಗೆ ಬಂದಿದ್ದು, ರೂಂ ಬುಕ್​ ಮಾಡಿ, ಅಲ್ಲಿಯೇ ತಂಗಿದ್ದಾರೆ. ರೂಮಿಗೆ ತೆರಳಿದ ಕೆಲವೇ ಕ್ಷಣದಲ್ಲಿ ಮತ್ತೆ ಬಂದ ಅವರು, ಸೆಕ್ಸ್​ ವರ್ಕರ್​ಗಳನ್ನು ನಮ್ಮ ರೂಮಿಗೆ ಕಳುಹಿಸಿ ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಹೋಟೆಲ್​​ನ ಸಿಬ್ಬಂದಿ ನಿರಾಕರಿಸಿದ್ದಾರೆ. ಸಿಟ್ಟಿಗೆದ್ದ ಆರೋಪಿಗಳು, ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆಗೆ ತೆರಳಿದ್ದಾರೆ. ಇಬ್ಬರು ಆರೋಪಿಗಳು ರೂಮಿನ ಒಳಗೆ ಹೋದರೆ, ಮೂವರು ಹೊರಗಡೆ ಕಾವಲು ಕಾದಿದ್ದಾರೆ. ಒಳಗಿದ್ದ ಸಿಬ್ಬಂದಿಗೆ ಪಿಸ್ತೂಲು ತೋರಿಸಿ, ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ.
ಅಷ್ಟರಲ್ಲಾಗಲೇ ಹೋಟೆಲ್ಲಿನ ಮ್ಯಾನೇಜರ್​ ಪೊಲೀಸರಿಗೆ ವಿಚಾರ ತಿಳಿಸಿದ್ದು, ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಸ್ಥಳಕ್ಕೆ ಬಂದಿದ್ದಾರೆ. ಮಹಿಳಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಅರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಇನ್ನಷ್ಟು ಸತ್ಯ ಹೊರಬಿದ್ದಿದೆ.
ಇದನ್ನೂ ಓದಿ:ಕರೊನಾ ಲಸಿಕೆ ನೀಡಲು ಸಿದ್ಧತೆ ; ಮೊದಲ ಹಂತದಲ್ಲಿ 19271 ಜನರಿಗೆ ಲಸಿಕೆ 134 ಪಿಎಚ್‌ಸಿಗಳಲ್ಲಿ ಶೇಖರಣೆ
ಈ ಐವರು ಆರೋಪಿಗಳು ಒಬ್ಬ ಬಿಜಿನೆಸ್​ಮ್ಯಾನ್​ನನ್ನು ಕೊಲೆ ಮಾಡುವ ಉದ್ದೇಶದಿಂದ ನಗರಕ್ಕೆ ಬಂದಿದ್ದು, ಅಲ್ಲಿ ಹೋಟೆಲ್​ ಬುಕ್​ ಮಾಡಿದ್ದರು. ಬಿಜಿನೆಸ್​ ಮ್ಯಾನ್​ ಬಳಿ 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಆತ ಕೊಡದಿದ್ದರೆ ಕೊಲೆ ಮಾಡುವವರಿದ್ದರು ಎನ್ನುವುದು ತಿಳಿದುಬಂದಿದೆ. ನರೇಶ್​ ಹೆಸರಿನ ಆರೋಪಿ ಈಗಾಗಲೇ ಒಂದು ಕೊಲೆಯ ಆರೋಪವನ್ನು ಹೊತ್ತಿದ್ದು, ಪೆರೋಲ್​ ಮೇಲೆ ಜೈಲಿನಿಂದ ಹೊರಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್​)
21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 15 =
Remember me
