ಹಜಾರಿಬಾಘ್/ಛಾತ್ರ: ಜಾರ್ಖಂಡ್​ನಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಸೆರೆಸಿಕ್ಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಪೈಕಿ ನಿಷೇಧಿತ ತೃತೀಯ ಪ್ರಸ್ತುತಿ ಕಮಿಟಿ(ಟಿಪಿಸಿ)ಯ ಸದಸ್ಯನೂ ಒಬ್ಬ ಇದ್ದಾನೆ. ಉಳಿದ ನಾಲ್ವರು ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್​ಎಫ್​ಐ) ಸದಸ್ಯರು.
ಲತೇಹಾರ್ ಜಿಲ್ಲೆಯ ಬಾಲುಮಠ್ ಪ್ರದೇಶದಲ್ಲಿ ಟಿಪಿಸಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಾಹೇಂದ್ರ ಯಾದವ್ ಅಲಿಯಾಸ್ ನರಿಯನ್ ಲತೇಹಾರ್ ಜಿಲ್ಲೆಯ ಬಾರ್​ಬಹ್ದಿಹ್​ ಗ್ರಾಮಕ್ಕೆ ಬೇಟಿ ನೀಡುವ ಸಂದರ್ಭದಲ್ಲಿ ಬಂಧಿಸಲಾಗಿದೆ. ಈತನ ತಲೆಗೆ ಒಂದು ಲಕ್ಷ ರೂಪಾಯಿ ಇನಾಮು ಘೋಷಿಸಲಾಗಿತ್ತು. ಲೂಟಿ, ಅಪಹರಣ ಮುಂತಾದವುಗಳು ಸೇರಿ 17 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು.
ಇದನ್ನೂ ಓದಿ:ಬ್ರೆಜಿಲ್, ಅಮೆರಿಕದಲ್ಲಿ ಇಳಿಕೆ; ಭಾರತದಲ್ಲಿ ಹೊಸ ದಾಖಲೆ; ಒಂದೇ ದಿನ 79 ಸಾವಿರ ಹೊಸ ಕರೊನಾ ಪ್ರಕರಣ
ಇನ್ನುಳಿದ ಪಿಎಲ್​ಎಫ್​ಐಯ ನಾಲ್ವರು ಸದಸ್ಯರನ್ನು ಹಜಾರಿಬಾಘ್ ಜಿಲ್ಲೆಯಲ್ಲಿ ರಸ್ತೆ ಬದಿ ಹೋಟೆಲ್​ನಲ್ಲಿ ಊಟಕ್ಕೆ ಬಂದಿದ್ದಾಗ ಬಂಧಿಸಲಾಗಿದೆ. ಇವರು ರಾಮಗಢ, ರಾಂಚಿ, ಹಜಾರಿಬಾಘ್, ಛಾತ್ರ ಜಿಲ್ಲೆಗಳಲ್ಲಿ ಭಯೋತ್ಪಾದನೆ ಉಂಟು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸಾಲ ಪಡೆದಿದ್ದ ಯುವತಿಗೆ ಅಶ್ಲೀಲ ಫೋಟೋ ಕಳಿಸಿ ಕಿರುಕುಳ, ಹಣ ಕೊಟ್ಟರೂ ಹಿಂಸಿಸಿದ!
ಈ ನಡುವೆ, ದುಮ್ಕಾ ಸೆಂಟ್ರಲ್ ಜೈಲಿನಲ್ಲಿ ಮನೋಜ್ ಕುಮಾರ್ ದೆಹ್ರಿ(60) ಎಂಬ ನಕ್ಸಲ್ ನಾಯಕನೊಬ್ಬ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಆತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. 2008ರಿಂದ ಜೈಲಿನಲ್ಲಿದ್ದ. ಆತನಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಅಕ್ಟೋಬರ್​ನಲ್ಲಿ ಗ್ರಾಪಂ ಚುನಾವಣೆ? ಮೀಸಲಾತಿ ಪಟ್ಟಿ ಸಿದ್ಧ; ಕರೊನಾ ಕಾಲದ ನಿಯಮ ಪಾಲನೆಗೂ ಬದ್ಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − five =
Remember me
