ಮುಂಬೈ:ದೇಶದ ವಿವಿಧೆಡೆ ಮುಂಗಾರು ಅಬ್ಬರಿಸುತ್ತಿದೆ. ಕೆಲವೆಡೆ ಧಾರಾಕಾರ ಮಳೆಗೆ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಕೆಲವರು ಇದನ್ನು ಕಣ್ತುಂಬಿಕೊಳ್ಳಲು ನದಿಪಾತ್ರದ ಪ್ರದೇಶಗಳಿಗೆ ದಾಂಗುಡಿಯಿಡುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕುಟುಂಬ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ತೆರಳಿ ದುರಂತಕ್ಕೀಡಾಗಿದೆ.
ಇದನ್ನೂ ಓದಿ:ಲೋಕಸಭೆ ಅಧಿವೇಶನ..ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು
ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಬಳಿ ನದಿನೀರಲ್ಲಿ ನಿಂತು ವೀಡಿಯೋ ಮಾಡುತ್ತಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಸೇರಿ ಐವರು ಮೃತಪಟ್ಟಿಟ್ಟಿರುವ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಇವರೆಲ್ಲರೂ ಒಂದೇ ಕುಟುಂಬದವರು.
ಮೃತರನ್ನು ಶಾಹಿಸ್ತಾ ಲಿಯಾಖತ್ ಅನ್ಸಾರಿ (36), ಅಮಿಮಾ ಆದಿಲ್ ಅನ್ಸಾರಿ (13) ಮತ್ತು ಉಮೇರಾ ಆದಿಲ್ ಅನ್ಸಾರಿ (8) ಅದ್ನಾನ್ ಸಬಹತ್ ಅನ್ಸಾರಿ (4) ಮತ್ತು ಮರಿಯಾ ಅಖಿಲ್ ಅನ್ಸಾರಿ (9) ಎಂದು ಪೊಲೀಸರು ಗುರುತಿಸಿದ್ದಾರೆ.
Sad scenes from Bhushi Dam, Lonavala, a favourite picnic spot – the entire family washed away in what looks like a flash flood. Selfie & Reels forces people to take chancespic.twitter.com/92a2UFoDxu
— Mihir Jha (@MihirkJha)June 30, 2024

ಸದ್ಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಐವರೂ ಕೊಚ್ಚಿಹೋಗುತ್ತಿರುವುದನ್ನು ಕಾಣಬಹುದು
ವಿವರಗಳಿಗೆ ಹೋದರೆ, ಸೈಯದ್ ನಗರದ ಅನ್ಸಾರಿ ಕುಟುಂಬದ 16 ರಿಂದ 17 ಸದಸ್ಯರು ಭಾನುವಾರ ಖಾಸಗಿ ಬಸ್‌ನಲ್ಲಿ ಲೋನಾವಾಲಾ ಬಳಿಯ ಪ್ರವಾಸಿ ಸ್ಥಳಕ್ಕೆ ತೆರಳಿದ್ದರು. ಇವರಲ್ಲಿ ಐವರು ಮಧ್ಯಾಹ್ನ 12.30ರ ಸುಮಾರಿಗೆ ಜಲಪಾತದ ಬಳಿ ನೀರಿಗಿಳಿದು ಸೆಲ್ಫಿ ಕ್ಲಿಕ್ಕಿಸುತ್ತಿದ್ದರು. ಆಗ ಏಕಾಎಕಿ ಪ್ರವಾಹ ಉಂಟಾಗಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಲೋನಾವಾಲಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸುಹಾಸ್ ಜಗತಾಪ್ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ‘ಕ್ಯಾಶ್ ಫಾರ್ ಮಾರ್ಕ್’ ಹಗರಣ..9 ಮಂದಿ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 2 =
Remember me
