ಮುಂಬೈ:ಪಾಳುಬಿದ್ದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಐವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದ್ದು, ಬೆಕ್ಕನ್ನು ರಕ್ಷಿಸಲು ಒಬ್ಬರಾದ ಬಳಿಕ ಒಬ್ಬರು ಬಾವಿಗೆ ಹಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಕಟ್ಟಿದ್ದ ಸೀರೆಗಿದೆ ಭಾವನಾತ್ಮಕ ಸಂಬಂಧ..ಇದರ ವಿಶೇಷತೆಯಾದರೂ ಏನು ಗೊತ್ತಾ?
ಪಾಳುಬಿದ್ದ ಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗುತ್ತಿದ್ದು, ಇದರ ಜತೆಗೆ ಬಾವಿಗೆ ಕಸ ಸುರಿಯಲಾಗುತ್ತಿತ್ತು. ಇದರಿಂದ ಬಾಯಿಯಲ್ಲಿ ಜೈವಿಕ ಅನಿಲ ಉತ್ಪತ್ತಿಯಾಗುತ್ತಿತ್ತು. ಇದರಿಂದಲೇ ವಿಷಾನಿಲ ಸೋಕಿ ಬಾವಿಗೆ ಹಾರಿದ್ದವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾವಿಗೆ ಒಟ್ಟು 6 ಮಂದಿ ಹಾರಿದ್ದರು. ಓರ್ವ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದ. ಆತನನ್ನು ರಕ್ಷಿಸಲಾಗಿದೆ. ಅಹ್ಮದ್ ನಗರದ ವಾಡ್ಕಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಬೆಕ್ಕಿನ ಪ್ರಾಣ ಉಳಿಸಲು ಮುಂದಾಗಿ ಐದು ಜನರ ಪ್ರಾಣ ಹೋಗಿರುವುದು ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದೆ.
ಇನ್ನೂ ಪಾಳು ಬಾವಿಯನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಸಿರುವುದರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘ಸನ್​ಸ್ಕ್ರೀನ್​​ ಮರೆಯಬೇಡಿ, ತಣ್ಣೀರು ಉತ್ತಮ’ ಇದು ದೀಪಿಕಾ ಸೌಂದರ್ಯದ ಗುಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 9 =
Remember me
