ಭದ್ರಾವತಿ(ಶಿವಮೊಗ್ಗ):ಸೂರ್ಯೋದಯಕ್ಕೂ ಒಂದು ಗಂಟೆ ಮುನ್ನ ಪೂರ್ವ ದಿಕ್ಕಿನತ್ತ ದಿಟ್ಟಿಸಿ ನೋಡಿದರೆ ಖಗೋಳ ಕೌತುಕವೊಂದು ನಿಮಗೆ ಗೋಚರವಾಗಲಿದೆ. ಬರಿಗಣ್ಣಿಗೆ 5 ಗ್ರಹಗಳು ಸರಳ ರೇಖೆಯಲ್ಲಿ ಗೋಚರಿಸಲಿದ್ದು, ಈ ವಿಸ್ಮಯವನ್ನು ಈಗ ಕಣ್ತುಂಬಿಕೊಳ್ಳಲು ಸಾಧ್ಯವಾಗದಿದ್ದರೆ ಮತ್ತೆ 18 ವರ್ಷ ಕಾಯಬೇಕು!
ಹೌದು. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಪರೇಡ್ ನಡೆಸುವ ರೀತಿ ಗೋಚರಿಸಲಿದ್ದು, ಈ ಗ್ರಹಗಳ ಪರೇಡ್ ವೀಕ್ಷಣೆಗೆ ಒಂದು ಖಚಿತ ಸೂತ್ರವೂ ಇದೆ. ಯಾವುದೋ ದಿಕ್ಕಿನಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ. ನಸುಕಿನ 4 ಗಂಟೆಯಿಂದ ಪೂರ್ವದ ದಿಗಂತದೆಡೆಗೆ ಕಣ್ಣು ಹಾಯಿಸಿದರೆ ಈ ವಿಸ್ಮಯದ ದರ್ಶನವಾಗಲಿದೆ. ಟೆಲಿಸ್ಕೋಪ್ ನೆರವು ಇಲ್ಲದೆಯೂ ಐದೂ ಗ್ರಹಗಳು ಬರಿಗಣ್ಣಿಗೆ ಕಾಣುತ್ತವೆ. ಈಗಾಗಲೆ ಒಂದು ವಾದರಿಂದ ಈ ವಿಸ್ಮಯ ಕಾಣಸಿಗುತ್ತಿದ್ದು, ಇನ್ನೊಂದು ವಾರ ಹೀಗೆಯೇ ಮುಂದುವರಿಯಲಿದೆ.
ಪೂರ್ವದಿಂದ ಪಶ್ಚಿಮದೆಡೆಗೆ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳನ್ನು ವೀಕ್ಷಣೆ ಮಾಡಬಹುದು. ಚಂದ್ರ ಕೂಡ ಬುಧ ಮತ್ತು ಮಂಗಳ ಗ್ರಹಗಳ ನಡುಗೆ ಇರುವುದು ಕಾಣಸಿಗಲಿದೆ. ಶನಿ ಗ್ರಹದಲ್ಲಿ ಹಲವು ರಿಂಗ್​ಗಳು, ಗುರು ಗ್ರಹದಲ್ಲಿ ನಾಲ್ಕು ಉಪಗ್ರಹಗಳು, ಮಂಗಳ ಗ್ರಹದಲ್ಲಿ ಬಣ್ಣ ಬಣ್ಣಗಳು, ಶುಕ್ರಗ್ರಹದಲ್ಲಿ ಕಾಣುವ ಬ್ರೖೆಟ್​ನೆಸ್ ಮನಸ್ಸಿಗೆ ಮುದ ನೀಡಲಿವೆ. ಬುಧ ಗ್ರಹ ಸೂರ್ಯನಿಗೆ ಸಮೀಪ ಇರುವುದರಿಂದ ಬರಿಗಣ್ಣಿಗೆ ಗೋಚರಿಸುವುದು ಅಪರೂಪ. ಸಾಮಾನ್ಯ ಟೆಲಿಸ್ಕೋಪ್​ನಲ್ಲೂ ಕಾಣಸಿಗುವುದಿಲ್ಲ. ವಿಶೇಷ ಟೆಲಿಸ್ಕೋಪ್​ನಲ್ಲಿ ಬುಧನ ದರ್ಶನ ಸಾಧ್ಯ.
ಇದೊಂದು ರೀತಿ ಗ್ರಹಗಳ ಪರೇಡ್. ಆಕಾಶ ವೀಕ್ಷಕರಿಗೆ ಸಂಭ್ರಮದ ಕ್ಷಣವೇ ಸರಿ. ಈ ದೃಶ್ಯಗಳನ್ನು ಸೂರ್ಯೋ ದಯಕ್ಕೆ 45ರಿಂದ 60 ನಿಮಿಷ ಮೊದಲು ನೋಡಬಹುದು.
|ಹರೋಹಳ್ಳಿ ಸ್ವಾಮಿಪ್ರೌಢಶಾಲಾ ಮುಖ್ಯೋಪಾಧ್ಯಾಯ, ಹವ್ಯಾಸಿ ಖಗೋಳ ವೀಕ್ಷಕ, ಭದ್ರಾವತಿ
ಐದು ಅಪರೂಪ:ಎರಡು, ಮೂರು ಗ್ರಹಗಳು ಒಂದೇ ರೇಖೆಯಲ್ಲಿ (ಪರೇಡ್ ರೀತಿ) ಇರುವಂತೆ ಆಗಾಗ ಕಾಣಿಸುತ್ತವೆ. ಐದು ಗ್ರಹಗಳ ಪರೇಡ್ ದೃಶ್ಯ ಅಪರೂಪ. ನೋಡಲು ಒಂದೇ ಸರಳ ರೇಖೆಯಲ್ಲಿ ಕಾಣಿಸುತ್ತವೆ. ಆದರೆ, ವಾಸ್ತವವಾಗಿ ಆ ರೀತಿ ಇರುವುದಿಲ್ಲ.
ಮತ್ತೆ 18 ವರ್ಷ ಬೇಕು:ಐದು ಗ್ರಹಗಳ ಪರೇಡ್ ಮಾಡುತ್ತಿರುವಂತೆ ಭಾಸವಾಗುವ ಈ ದೃಶ್ಯಗಳು 2004ರಲ್ಲಿ ಕಂಡುಬಂದಿದ್ದವು. 18 ವರ್ಷಗಳ ನಂತರ ಮತ್ತೆ ಆ ದೃಶ್ಯಗಳನ್ನು ನೋಡಲು ಸಾಧ್ಯವಾಗುತ್ತಿದ್ದು, 2040ರಲ್ಲಿ ಮತ್ತೆ ಕಾಣಲು ಸಾಧ್ಯವಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
