ನವದೆಹಲಿ: ಕೋವಿಡ್​ 19 ಸಂಬಂಧಿಸಿದ ಲಾಕ್​ಡೌನ್ನಿಂದ ಆಗಿರುವ ಆರ್ಥಿಕ ಕುಸಿತಕ್ಕೆ ಉತ್ತೇಜನ ನೀಡುವ ಸಲುವಾಗಿ ಘೋಷಿಸಿರುವ ಆತ್ಮನಿರ್ಭರ ಭಾರತ ಪ್ಯಾಕೇಜ್ ವ್ಯಾಪ್ತಿಯಲ್ಲಿ ಇದುವರೆಗೆ ಅಂದರೆ ಜುಲೈ 23 ರತನಕ ಐದು ಪ್ರಸ್ತಾವನೆಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಗಳ ಮೊತ್ತ 3,090 ಕೋಟಿ ರೂಪಾಯಿ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಆತ್ಮನಿರ್ಭರ ಭಾರತ ಪ್ಯಾಕೇಜ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 2020ರ ಜುಲೈ 23ರ ತನಕ 3,090 ಕೋಟಿ ರೂಪಾಯಿ ಮೌಲ್ಯದ 5 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇವುಗಳಿಗೆ ಅನುಮೋದನೆಯನ್ನೂ ಸರ್ಕಾರ ನೀಡಿದೆ. ಇನ್ನೂ 35 ಅರ್ಜಿಗಳು ಸಲ್ಲಿಕೆಯಾಗಿದ್ದು 13,776 ಕೋಟಿ ರೂಪಾಯಿ ಹಣಕಾಸಿನ ನೆರವು ಯಾಚಿಸಿವೆ. ಇವುಗಳು ಕೂಡ ಪರಿಶೀಲನೆಯಲ್ಲಿವೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ವೆನಿಜುವೆಲಾ ಚೀಫ್ ಜಸ್ಟೀಸ್​ ಬಂಧನಕ್ಕೆ 50 ಲಕ್ಷ ಡಾಲರ್ ಬಹುಮಾನ ಘೋಷಿಸಿದ ಅಮೆರಿಕ!
ಇದಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 13ರಂದು ಆತ್ಮನಿರ್ಭರ ಪ್ಯಾಕೇಜ್ ಅಧೀನ ಘೋಷಿಸಿದ್ದ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಮತ್ತು ಹೌಸಿಂಗ್ ಫೈನಾನ್ಸ್​ ಕಂಪನಿಗಳಿಗೆ ಉತ್ತೇಜನ ನೀಢುವ ಸಲುವಾಗಿ 30,00 ಕೋಟಿ ರೂಪಾಯಿಗಳ ವಿಶೇಷ ಲಿಕ್ವಿಡಿಟಿ ಯೋಜನೆ ಘೋಷಿಸಲಾಗಿತ್ತು. ಇದು ಜುಲೈ 1ರಿಂದ ಅನುಷ್ಠಾನಗೊಳ್ಳತೊಡಗಿದೆ.
ಇದನ್ನೂ ಓದಿ:ಉದ್ಯೋಗ ಮರಳಿಗಿಟ್ಟಿಸಿಕೊಳ್ಳಲು ಹಳೆ ಕಂಪನಿಯ ಡೇಟಾಬೇಸ್ ಅನ್ನೇ ಹ್ಯಾಕ್ ಮಾಡಿದ!
ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಮತ್ತು ಹೌಸಿಂಗ್ ಫೈನಾನ್ಸ್​ ಕಂಪನಿಗಳ ಉತ್ತೇಜನಕ್ಕೂ ಕ್ರಮ ತೆಗೆದುಕೊಳ್ಳಲಾಗಿದೆ. ಹಣಕಾಸು ಕ್ಷೇತ್ರಕ್ಕೆ ಹಾನಿಯಾಗದಂತೆ ಅದರ ಸಂಭಾವ್ಯ ಅಪಾಯಗಳನ್ನು ಮುಂಚಿತವಾಗಿಯೆ ಮನಗಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)
ಮೋದಿ ಸರ್ಕಾರದಿಂದ ಹೊಸ ಸಾಲ ಯೋಜನೆ- ಏನದು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × five =
Remember me
