ಕೋಲ್ಕತ:ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಟಿಎಂಸಿ ಪಕ್ಷಕ್ಕೆ ನಡುಕ ಶುರುವಾಗಿದೆ. ಟಿಎಂಸಿಗೆ ನಾಯಕರು ಕೈ ಕೊಡಲಾರಂಭಿಸಿದ್ದು ಬಿಜೆಪಿ ಸೇರಿ ಹೊಸ ಆಡಳಿತ ಸ್ಥಾಪಿಸಲು ಸಜ್ಜಾಗುತ್ತಿದ್ದಾರೆ. ಇದೀಗ ಟಿಎಂಸಿಯ ಐವರು ಶಾಸಕರು ಹಾಗೂ ಈ ಬಾರಿ ಅಭ್ಯರ್ಥಿ ಪಟ್ಟಿಯಲ್ಲಿರುವ ಓರ್ವ ಅಭ್ಯರ್ಥಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಶಾಸಕರಾಗಿರುವ ಸೋನಾಲಿ ಗುಹಾ, ಸೀತಾಲ್ ಸರ್ದಾರ್, ದೀಪೇಂದು ಬಿಸ್ವಾಸ್, ರಬೀಂದ್ರನಾಥ್ ಭಟ್ಟಾಚಾರ್ಯ ಮತ್ತು ಜತು ಲಾಹಿರಿ ಸೋಮವಾರದಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರ ಜತೆ ಹಬೀಪುರದ ಟಿಎಂಸಿ ಅಭ್ಯರ್ಥಿ ಸರಲಾ ಮುರ್ಮು ಕೂಡ ಬಿಜೆಪಿಗೆ ಸೇರಿದ್ದಾರೆ. ಇದು ಆಡಳಿತದಲ್ಲಿರುವ ಟಿಎಂಸಿಗೆ ದೊಡ್ಡ ಶಾಕ್​ ಆಗಿದೆ.
ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಬಿಜೆಪಿ ನಾಯಕರಾದ ಸುವೆಂಡು ಅಧಿಕಾರಿ ಮತ್ತು ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಶಾಸಕರು ಕೇಸರಿ ಪಕ್ಷಕ್ಕೆ ಸೇರಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸಾಯುವುದು ಹೇಗೆಂದು ಗೂಗಲ್​ ಸರ್ಚ್​ ಮಾಡಿ ನೇಣಿಗೆ ಕೊರಳೊಡ್ಡಿದ ಎಂಬಿಬಿಎಸ್​ ವಿದ್ಯಾರ್ಥಿ

ಸತತ 15 ತಿಂಗಳ ಬಳಿಕ ವಿದೇಶಕ್ಕೆ ಹಾರಲು ಸಜ್ಜಾದರು ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
