ಗಾಂಧಿನಗರ:ರೈಲ್ವೆ ನಿಲ್ದಾಣಗಳೆಂದರೆ ನಿಮ್ಮ ಕಲ್ಪನೆಗೆ ಬರುವುದು ರೈಲು ಹಳಿಗಳು, ಫ್ಲೈ ಓವರ್​ಗಳು, ಟಿಕೆಟ್ ಸೆಂಟರ್​, ಇತ್ಯಾದಿಯಷ್ಟೇ. ಆದರೆ ಈ ರೈಲ್ವೆ ನಿಲ್ದಾಣವನ್ನು ನೀವು ನೋಡಿದರೆ, ನಿಮಗೆ ರೈಲ್ವೆ ನಿಲ್ದಾಣದ ಮೇಲಿರುವ ಕಲ್ಪನೆಯೇ ಬದಲಾಗಲಿದೆ. ಏಕೆಂದರೆ ಈ ರೈಲ್ವೆ ನಿಲ್ದಾಣದ ಮೇಲಿರುವುದು ಫೈವ್ ಸ್ಟಾರ್ ಹೋಟೆಲ್!
ಹೌದು! ಪ್ರಧಾನಿ ಮೋದಿಯವರು ದೇಶದ ರೈಲ್ವೆ ನಿಲ್ದಾಣಗಳನ್ನು ಆಧುನಿಕಗೊಳಿಸುವ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಅದನ್ನು ಗುಜರಾತ್​ನ ಗಾಂಧಿನಗರ ರೈಲ್ವೆ ನಿಲ್ದಾಣ ಮಾಡಿ ತೋರಿಸಿದೆ. ನೋಡಲು ನಮ್ಮ ಬೆಂಗಳೂರಿನ ಮೆಟ್ರೋ ನಿಲ್ದಾಣದಂತೆಯೇ ಕಾಣುವ ಗಾಂಧಿನಗರ ರೈಲ್ವೆ ನಿಲ್ದಾಣದ ಮೇಲೆ ಫೈವ್ ಸ್ಟಾರ್ ಹೋಟೆಲ್​ ಒಂದನ್ನು ನಿರ್ಮಿಸಲಾಗಿದೆ. ಅದಕ್ಕೆ ರೈಲ್ವೆ ನಿಲ್ದಾಣದ ಒಳಗಿನಿಂದಲೇ ಹೋಗುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.
ಆ ಫೈವ್​ ಸ್ಟಾರ್ ಹೋಟೆಲ್​ನಲ್ಲಿ ಪ್ರಾರ್ಥನಾ ಕೋಣೆ, ಗ್ರಂಥಾಲಯ, ಊಟದ ಹಾಲ್ ಸೇರಿ ಅನೇಕ ರೀತಿಯ ವ್ಯವಸ್ಥೆಗಳಿವೆ. ಇನ್ನೂ ವಿಶೇಷವೆಂದರೆ ಆ ಹೋಟೆಲ್​ನಲ್ಲಿ ಬರೋಬ್ಬರಿ 300 ರೂಂಗಳಿವೆಯಂತೆ. ಹಾಗೆಯೇ ಪೂರ್ತಿ ಗಾಂಧಿನಗರದಲ್ಲಿ ಅತ್ಯಂತ ಎತ್ತರದ ಬಿಲ್ಡಿಂಗ್ ಅದಾಗಿದೆಯಂತೆ. ಆ ಹೋಟೆಲ್​ನಲ್ಲಿ ಮೇಲಿನಿಂದ ನೋಡಿದರೆ ಪೂರ್ತಿ ಗಾಂಧಿನಗರವೇ ಕಾಣುತ್ತದೆಯಂತೆ.
ಕೇವಲ ಹೋಟೆಲ್ ಮಾತ್ರವಲ್ಲದೆ ಆ ರೈಲ್ವೆ ನಿಲ್ದಾಣ ಕೂಡ ಅನೇಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ನಿಲ್ದಾಣದ ಬಹುತೇಕ ಭಾಗಗಳಲ್ಲಿ ದೇಶದ ಸಾಂಸ್ಕೃತಿಕತೆ, ವೈಭವವನ್ನು ಸಾರುವ ಚಿತ್ರಗಳನ್ನು ಬಿಡಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರದ ಚಿತ್ರವನ್ನೂ ಬಿಡಿಸಲಾಗಿದ್ದು, ಪ್ರಯಾಣಿಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. (ಏಜೆನ್ಸೀಸ್)
ಇತಿಹಾಸದಲ್ಲೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪ

ಮತ್ತೆ ಏರಿತು ಸೋಂಕು! ರಾಜ್ಯದಲ್ಲಿಂದು ಪತ್ತೆಯಾದ ಕರೊನಾ ಸೋಂಕಿತರ ಸಂಖ್ಯೆ ಎಷ್ಟು?

ಕರೊನಾ ಲಸಿಕೆಯ ಎರಡೂ ಡೋಸ್ ಆಯ್ತು, ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕಾ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 15 =
Remember me
