ಶೋಪಿಯಾನ್:ಜಮ್ಮು- ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಐವರು ಉಗ್ರರನ್ನು ಭದ್ರತಾಪಡೆಗಳು ಬುಧವಾರ ಹೊಡೆದುರುಳಿಸಿವೆ. 15 ದಿನಗಳಿಂದೀಚೆಗೆ ಕಾಶ್ಮೀರ ಕಣಿವೆಯಲ್ಲಿ 8 ಪ್ರಮುಖ ಕಮಾಂಡರ್​ಗಳು ಸೇರಿ 22 ಭಯೋತ್ಪಾದಕರು ಎನ್​ಕೌಂಟರ್​ನಲ್ಲಿ ಹತರಾಗಿದ್ದಾರೆ.
ಶೋಪಿಯಾನ್​ನ ಸುಗೂ ಗ್ರಾಮದಲ್ಲಿ ಉಗ್ರರು ಅವಿತಿರುವ ಖಚಿತ ವರ್ತಮಾನದ ಮೇರೆಗೆ ಕೇಂದ್ರೀಯ ಮೀಸಲು ಪಡೆ, ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸ್ ವಿಶೇಷ ಕಾರ್ಯಪಡೆಯ ತಂಡ ಶೋಧಕಾರ್ಯ ನಡೆಸುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಮೊದಲು ಇಬ್ಬರು ಉಗ್ರರು ಸಾವನ್ನಪ್ಪಿದ್ದರು. ಕೆಲವು ತಾಸಿನ ಬಳಿಕ ಮತ್ತೆ ಮೂವರು ಹತರಾದರು. ಘಟನಾ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು- ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ನಡೆದ ಮೂರನೇ ಕಾರ್ಯಾಚರಣೆ ಇದಾಗಿದ್ದು, ಭಾನುವಾರ ಮತ್ತು ಸೋಮವಾರ ನಡೆದ ಎನ್​ಕೌಂಟರ್​ಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್​ಎಂ) ಸಂಘಟನೆಯ ಸ್ಥಳೀಯ ಕಮಾಂಡರ್ ಸೇರಿ 9 ಭಯೋತ್ಪಾದಕರು ಹತ್ಯೆಯಾಗಿದ್ದರು. ಮೇ 25ರಂದು ಕುಲ್ಗಾಂ ಜಿಲ್ಲೆಯ ಖುದ್ ಹಾಂಜಿಪೋರ್​ನಲ್ಲಿ ಇಸ್ಲಾಮಿಕ್ ಸ್ಟೇಟ್ ಜಮ್ಮು- ಕಾಶ್ಮೀರ್ (ಐಎಸ್​ಜೆಕೆ) ಮತ್ತು ಲಷ್ಕರ್ -ಎ-ತೊಯ್ಬಾ (ಎಲ್​ಇಟಿ) ಸಂಘಟನೆಗಳ ಇಬ್ಬರು ಉಗ್ರರು ಹತರಾಗಿದ್ದರು. ಮೇ 30ರಂದು ಕುಲ್ಗಾಂ ಜಿಲ್ಲೆಯ ವಾನ್​ಪೋರ್​ನಲ್ಲಿ ಎಚ್​ಎಂ ಹಾಗೂ ಜೈಷ್-ಎ-ಮೊಹಮ್ಮದ್ (ಜೆಇಎಂ) ಗುಂಪಿನ ಇಬ್ಬರು ಕಮಾಂಡರ್​ಗಳು ಸಾವನ್ನಪ್ಪಿದ್ದರು. ಜೂನ್ 2ರಂದು ತ್ರಾಲ್​ನ ಅವಂತಿಪೋರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಜೆಇಎಂ ಸಮೂಹ ಕಮಾಂಡರ್ ಮತ್ತು ಸ್ಥಳೀಯ ಕಮಾಂಡರ್​ಗಳನ್ನು ಹೊಡೆದುರುಳಿಸಲಾಗಿತ್ತು. ಜೂನ್ 3ರಂದು ಪುಲ್ವಾಮಾದ ಕಂಗನ್​ನಲ್ಲಿ ನಡೆದ ಉಗ್ರರ ಬೇಟೆಯಲ್ಲಿ ಜೆಇಎಂನ ಪ್ರಮುಖ ಕಮಾಂಡರ್​ಗಳು ಬಲಿಯಾಗಿದ್ದರು.
ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
