ರಾಜಸ್ಥಾನ:“ನಾವಿಬ್ಬರು-ನಮಗಿಬ್ಬರು” ಎಂಬ ಒಂದು ಕಾಲವಿತ್ತು. ಆಮೇಲೆ “ನಾವಿಬ್ಬರು ನಮಗೊಬ್ಬರೇ” ಎಂಬಂತೆಯೂ ಆಯಿತು. ಕುಟುಂಬ ಯೋಜನೆ ಹೆಸರಿನಲ್ಲಿ ಆದಷ್ಟೂ ಕಡಿಮೆ ಮಕ್ಕಳಿಗೆ ಜನ್ಮ ನೀಡಬೇಕು ಎಂಬ ಗುರಿ ಇತ್ತು. ಆದರೆ ಈಗ ಇದಕ್ಕೆ ವಿರುದ್ಧವಾದ ಬೆಳವಣಿಗೆ ನಡೆಯಲಾರಂಭಿಸಿದೆ. ಅದರಲ್ಲೂ ಭಾರತದಲ್ಲೇ ಇಂಥದ್ದೊಂದು ಬೆಳವಣಿಗೆ ಆರಂಭಗೊಂಡಿದೆ.
ಚೀನಾ ಹಾಗೂ ಜಪಾನ್​ನನಲ್ಲಿ ಜನಸಂಖ್ಯೆ ಕುಸಿತ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿ ಮಕ್ಕಳ ಸಂಖ್ಯೆಯನ್ನು ಅಂದರೆ ಜನ್ಮಪ್ರಮಾಣವನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಜನಸಂಖ್ಯೆ ಸಮಸ್ಯೆ ಎಂದು ಹೇಳಲಾಗುತ್ತಿರುವ ಭಾರತದಲ್ಲೂ ಕೆಲವೊಂದು ಕಡೆ ಜನ್ಮಪ್ರಮಾಣ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ.
ಇದನ್ನೂ ಓದಿ:ದೇವಸ್ಥಾನದ ರಥದ ಮುಕ್ತಿಬಾವುಟಕ್ಕೆ ಭಾರಿ ಬೇಡಿಕೆ; ಊಹೆಗೂ ಮೀರಿದ ಭರ್ಜರಿ ಮೊತ್ತಕ್ಕೆ ಹರಾಜು
ರಾಜಸ್ಥಾನದಲ್ಲಿ ಇಂಥದ್ದೊಂದು ಸಂಗತಿ ಬೆಳಕಿಗೆ ಬಂದಿದೆ. ಇಲ್ಲಿನ ಮಹೇಶ್ವರಿ ಸಮುದಾಯದ ಮಂದಿ ತಮ್ಮ ಜನಾಂಗದವರ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಜನ್ಮಪ್ರಮಾಣ ಹೆಚ್ಚಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಫಿಕ್ಸೆಡ್​ ಡೆಪಾಸಿಟ್​ ಕೊಡುಗೆ ಘೋಷಿಸಿದ್ದಾರೆ. ಅಂದರೆ ಮೂರನೇ ಮಗುವಿಗೆ ಜನ್ಮನೀಡುವ ಮಹೇಶ್ವರಿ ಸಮುದಾಯದ ದಂಪತಿಗೆ 50 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್ ಕೊಡುವುದಾಗಿ ಘೋಷಿಸಲಾಗಿದೆ. ರಾಜಸ್ಥಾನದ ಪುಷ್ಕರ್​ನಲ್ಲಿನ ಮಹೇಶ್ವರಿ ಸಮುದಾಯದ ಸೇವಾಸದನ ಈ ಕೊಡುಗೆಯನ್ನು ಘೋಷಣೆ ಮಾಡಿದೆ.
ಸಮುದಾಯದಲ್ಲಿ ಮದುವೆ ವಯಸ್ಸಿಗೆ ಬಂದಿರುವ ಹುಡುಗ-ಹುಡುಗಿಯರು ಇಲ್ಲದಿರುವುದು ಆತಂಕಕಾರಿ ಸಂಗತಿ. ಇದು ಮುಂದುವರಿದಲ್ಲಿ ಸಮುದಾಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಇರುವ ದಂಪತಿಗೆ ಮೂರನೇ ಮಕ್ಕಳನ್ನು ಹೊಂದುವಂತೆ ಪ್ರೇರೇಪಿಸುವುದು ಅನಿವಾರ್ಯ. ಹಾಗೆ ಮೂರನೇ ಮಗುವಿಗೆ ಜನ್ಮನೀಡಿದವರಿಗೆ 50 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್ ಕೊಡುವ ಬಗ್ಗೆ ಜನರಲ್ ಬಾಡಿ ಮೀಟಿಂಗ್​ನಲ್ಲಿ ನಿರ್ಧರಿಸಲಾಗಿದೆ. ಜತೆಗೆ ಭವಿಷ್ಯದಲ್ಲಿ ನಾಸಿಕ್​, ಜಗನ್ನಾಥಪುರಿ ಮತ್ತು ಅಯೋಧ್ಯೆಯಲ್ಲಿ ಸಮುದಾಯದವರಿಗಾಗಿ ಕಟ್ಟಡಗಳನ್ನು ನಿರ್ಮಿಸಲಿಕ್ಕೂ ಈ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 − five =
Remember me
