ಬೆಂಗಳೂರು:ಸದ್ಯ ಬೆಂಗಳೂರು ಕ್ವಾರಂಟೈನ್​ ಹೋಂ ಆಗಿದೆ. ಹೊರ ದೇಶ, ಹೊರ ರಾಜ್ಯಗಳಿಂದ ಬಂದಿರುವ ಸಹಸ್ರಾರು ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಹೊರ ದೇಶಗಳಿಂದ ಬಂದವರಿಗೆ ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೋಟೆಲ್​ಗಳನ್ನು ನೀಡಲಾಗಿದೆ.
ನಿಯಮದ ಪ್ರಕಾರ, 14 ದಿನಗಳ ಕ್ವಾರಂಟೈನ್​ ಅವಧಿ ಮುಗಿದ ಮೇಲೆ ಕರೊನಾ ಸೋಂಕು ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಅವರನ್ನು ಮನೆಗೆ ಕಳುಹಿಸಬೇಕು. ಜತೆಗೆ, ಹೋಟೆಲ್​ನಲ್ಲಿ ತಂಗುವ ಮೊದಲು ವಾಗ್ದಾನ ಮಾಡಿದಂತೆ, ಅವರಿಗೆ ಸಕಲ ಸೌಲಭ್ಯಗಳನ್ನೂ ನೀಡುವುದು ಹೋಟೆಲ್​ ಜವಾಬ್ದಾರಿ. ಏಕೆಂದರೆ ಎಲ್ಲಾ ಸೌಲಭ್ಯಗಳ ಹಣವನ್ನು ಮುಂಗಡವಾಗಿ ಪಡೆದೇ ಕೊಠಡಿ ನೀಡಲಾಗುತ್ತದೆ. ಜತೆಗೆ, ಕರೊನಾ ವೈರಸ್​ ಸೋಂಕು ತಗುಲಿದೆಯೇ, ಇಲ್ಲವೇ ಎಂಬ ಬಗ್ಗೆ ಮೇಲಿಂದ ಮೇಲೆ ಆರೋಗ್ಯಾಧಿಕಾರಿಗಳು ತಪಾಸಣೆಯನ್ನೂ ಮಾಡಬೇಕಿದೆ.
ಇದನ್ನೂ ಓದಿ:ಆನ್​ಲೈನ್​ ಮದ್ಯಪ್ರಿಯರಿಗೆ ಬಿತ್ತಲ್ಲಪ್ಪೋ ಗಾಳ! ಎಣ್ಣೆ ಕುಡಿಯುವ ಮೊದಲೇ ಏರಿಬಿಟ್ಟಿತು ನಶೆ…
ಆದರೆ ಇದೀಗ ಕೆಲವು ಹೋಟೆಲ್​ಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವುದು ಮಾತ್ರವಲ್ಲದೇ, ತನ್ನಲ್ಲಿ ಉಳಿದುಕೊಂಡಿರುವ ಜನರಿಗೆ ಸರಿಯಾದ ಆಹಾರ, ಸೌಲಭ್ಯಗಳನ್ನು ನೀಡುತ್ತಿಲ್ಲ, ವೈದ್ಯಕೀಯ ಸೌಲಭ್ಯವಂತೂ ಬಲು ದೂರದ ಮಾತು ಎಂಬ ಆರೋಪಗಳು ಕೇಳಿಬಂದಿವೆ. ಇನ್ನೂ ಒಂದು ಆತಂಕದ ವಿಷಯ ಎಂದರೆ, ಪ್ರಯಾಣಿಕರು ಹೆಚ್ಚಿನ ಹಣ ಕೊಟ್ಟರೆ, ಅವರನ್ನು ಹೊರಗಡೆ ಸುತ್ತಾಡಲು ಬಿಡುತ್ತಿದ್ದಾರೆ, ಮನೆಗೆ ಕೂಡ ಕಳುಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಾಗಪುರದ ಸಾಫ್ಟ್​ವೇರ್​ ಇಂಜಿನಿಯರ್​ ಅಶೋಕ್​ ಎನ್ನುವವರು ಇದೇ ರೀತಿಯ ಆರೋಪ ಮಾಡಿದ್ದಾರೆ. ನನ್ನನ್ನು ಕೃಷ್ಣೇ ಗೌಡ ಎಂಬಾತ ನನ್ನನ್ನು ಸಂಪರ್ಕಿಸಿದ. ತಾನು ಬಿಬಿಎಂಪಿ ಉದ್ಯೋಗಿ ಎಂದು ಹೇಳಿಕೊಂಡ. 14 ದಿನಗಳು ನಾವು ಅವರಿಗೆ 4,200 ರೂಪಾಯಿ ಕೊಟ್ಟರೆ ರಾತ್ರಿ ನಮ್ಮನ್ನು ಹೊರಗೆ ಬಿಡಲಾಗುವುದು, ಯಾರಿಗೂ ತಿಳಿಯುವುದೇ ಇಲ್ಲ ಎಂದ. ಇದಕ್ಕೆ ನಾವು ಒಪ್ಪಲಿಲ್ಲ ಎಂದಿದ್ದಾರೆ. ಆದರೆ ಕೃಷ್ಣೇಗೌಡ ಬಿಬಿಎಂಪಿ ಉದ್ಯೋಗಿ ಅಲ್ಲ. ಆ ವ್ಯಕ್ತಿಯ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ ಬಿಬಿಎಂಪಿ ಅಧಿಕಾರಿಗಳು.
ಇದನ್ನೂ ಓದಿ:ಇನ್ನು ಆನ್​ಲೈನ್​ನಲ್ಲೇ ದರ್ಶನ ನೀಡಲಿರುವ ದೇವಾನುದೇವತೆಗಳು- ನಡೆದಿದೆ ಭರದ ಸಿದ್ಧತೆ
ಹೃದ್ರೋಗ ಸೇರಿದಂತೆ ಕೆಲವು ಗಂಭೀರ ಅನಾರೋಗ್ಯ ಸಮಸ್ಯೆಗಳಿಮದ ಬಳಲುತ್ತಿರುವವರು ಹೋಟೆಲ್​ನಲ್ಲಿ ತೀವ್ರ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ತಮ್ಮನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸುವಂತೆ ಅಧಿಕಾರಿಗಳನ್ನು ಕೋರಿಕೊಂಡರೂ ಪ್ರಯೋಜನ ಆಗುತ್ತಿಲ್ಲ. ಇದರಿಂದ ತಮ್ಮ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹೋಟೆಲ್​ನವರು ಎಲ್ಲದಕ್ಕೂ ಡಬಲ್​ ರೇಟ್​ ಹಾಕುತ್ತಿರುವುದಾಗಿಯೂ ಆರೋಪಗಳು ಕೇಳಿಬಂದಿವೆ. 750 ರೂಪಾಯಿಯ ದಿನದ ಬಾಡಿಗೆ ಇರುವ ಹೋಟೆಲ್ ಅನ್ನು ಆಯ್ದುಕೊಂಡ ಜನರಿಂದ 2,000 ರೂಪಾಯಿವರೆಗೂ ದರ ಹೇರಲಾಗಿದೆ. ನೀರು, ಚಹಾಕ್ಕೂ ದುಪ್ಟಟ್ಟು ದರ ಹಾಕುತ್ತಿದ್ದಾರೆ. ಇತ್ತ ಒಂದೇ ಒಂದು ದಿನವೂ ಬಿಬಿಎಂಪಿ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಬಂದಿಯೇ ಇಲ್ಲ.ಒಳ್ಳೆಯ ಹೋಟೆಲ್ ಎಂದು ಹೋದವರಿಗೆ ಕೆಟ್ಟ ಊಟ, ಕೆಟ್ಟ ವ್ಯವಸ್ಥೆ ಎದುರಾಗಿದೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ:ಮಕ್ಕಳ ಬೆನ್ನುಹತ್ತಿದೆ ಕರೊನಾ ಮಾರಿ: ಇದೀಗ ಸೌದಿಯೂ ನೀಡಿದೆ ದೊಡ್ಡ ಶಾಕ್​!
ಬಿಬಿಎಂಪಿ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿಗೆ ದರ ವಸೂಲಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:7 − five =
Remember me
