ಲಖನೌ:ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ರಾಮಮಂದಿರದ ಜತೆಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನನಿಲ್ದಾಣವು ಜನವರಿಯಲ್ಲಿ ಮೊದಲ ಹಾರಾಟ ಪ್ರಾರಂಭಿಸಲಿದೆ.
ಶ್ರೀರಾಮ ವಿಮಾನ ನಿಲ್ದಾಣದ ಕಾಮಗಾರಿ ಅಂತಿಮ ಹಂತದಲ್ಲಿದೆ. ರನ್ ವೇ ಕಾಮಗಾರಿ ಪೂರ್ಣಗೊಂಡಿದೆ. ಟರ್ವಿುನಲ್ ಕಟ್ಟಡ ನಿರ್ಮಾಣ ಕಾಮಗಾರಿ ಶೇ. 95ಕ್ಕೂ ಹೆಚ್ಚು ಪೂರ್ಣಗೊಂಡಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.
ಮೊದಲ ವಿಮಾನಗಳು ಅಯೋಧ್ಯೆಯಿಂದ ದೆಹಲಿ ಮತ್ತು ಅಹಮದಾಬಾದ್​ಗೆ ಪ್ರಾರಂಭವಾಗಲಿವೆ. ಭಕ್ತರು ವಾರದಲ್ಲಿ 7 ದಿನ ದೆಹಲಿಗೆ, ವಾರದಲ್ಲಿ 3 ದಿನ ಅಹಮದಾಬಾದ್​ಗೆ ವಿಮಾನದ ಮೂಲಕ ತಲುಪಲು ಸಾಧ್ಯವಾಗುತ್ತದೆ. ಇತ್ತೀಚೆಗಷ್ಟೇ ಇಂಡಿಗೋ ಮತ್ತು ಸ್ಪೈಸ್ ಜೆಟ್ ಸಂಸ್ಥೆಗಳು ಈ ವಿಮಾನ ನಿಲ್ದಾಣದಲ್ಲಿ ಸಮೀಕ್ಷೆ ನಡೆಸಿದ್ದು, ಶೀಘ್ರದಲ್ಲೇ ಈ ಕಂಪನಿಗಳ ಮಾರ್ಗಗಳನ್ನು ಸಹ ನಿರ್ಧರಿಸಲಾಗುವುದು ಎನ್ನಲಾಗಿದೆ. ವಿಮಾನ ನಿಲ್ದಾಣಕ್ಕೆ ಪರವಾನಗಿ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅದೂ ಶೀಘ್ರ ಲಭಿಸಲಿದೆ.
ಮಂದಿರದಂತೆಯೇ ವಿನ್ಯಾಸ:ಶ್ರೀರಾಮ ವಿಮಾನ ನಿಲ್ದಾಣವನ್ನು ರಾಮಮಂದಿರದ ಆಕಾರದಲ್ಲಿ ನಿರ್ವಿುಸಲಾಗುತ್ತಿದೆ. ವಿಮಾನ ನಿಲ್ದಾಣದ ಗೇಟ್ ನಿರ್ಮಾಣ ಪೂರ್ಣಗೊಂಡಿದ್ದು, ನಿಲ್ದಾಣದಲ್ಲಿ ರಾಮಾಯಣ ಕಾಲದ ದೃಶ್ಯಗಳನ್ನು ಅಳವಡಿಸಲಾಗಿದೆ. ವಿಮಾನ ನಿಲ್ದಾಣದಲ್ಲೂ ಭಕ್ತರಿಗೆ ಧಾರ್ವಿುಕ ನಗರಿ ಅಯೋಧ್ಯೆಯಲ್ಲಿದ್ದೇವೆ ಎಂಬ ಭಾವನೆ ಮೂಡಿಸುವಂತಿದೆ ಎನ್ನಲಾಗಿದೆ.
ಆಮಂತ್ರಣ ಪತ್ರಗಳ ವಿತರಣೆ ಪ್ರಾರಂಭ:ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ 2024ರ ಜ.22ರಂದು ಎಂದು ದಿನ ನಿಗದಿಪಡಿಸಲಾಗಿದೆ. ಸಮಾರಂಭದ ಆಮಂತ್ರಣ ಪತ್ರಗಳ ವಿತರಣೆ ಪ್ರಾರಂಭವಾಗಿದೆ. ಅರ್ಚಕರು, ಕೊಡುಗೆದಾರರು ಮತ್ತು ವಿವಿಧ ರಾಜಕೀಯ ವ್ಯಕ್ತಿಗಳು ಸೇರಿ 6,000ಕ್ಕೂ ಹೆಚ್ಚು ಅತಿಥಿಗಳಿಗೆ ಆಹ್ವಾನ ಪತ್ರ ಕಳುಹಿಸಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರವು ಜ.14ರಿಂದ 22ರ ವರೆಗೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಅಖಂಡ ರಾಮಾಯಣ ಮತ್ತು ಹನುಮಾನ್ ಚಾಲೀಸಾ ಪಠಣ ಆಯೋಜಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮ ವಿಮಾನ ನಿಲ್ದಾಣದ ಏರ್​ಸ್ಟ್ರಿಪ್ ತುಂಬಾ ಚಿಕ್ಕದಾಗಿತ್ತು. ರಾಜ್ಯ ಸರ್ಕಾರ 821 ಎಕರೆ ಭೂಮಿ ಒದಗಿಸಿದ ನಂತರ, ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಪ್ರಾಧಿಕಾರ ಕೆಲಸ ಮಾಡುತ್ತಿದೆ. ಹೊಸ ವಿಮಾನ ನಿಲ್ದಾಣ ಡಿ.15 ರೊಳಗೆ ಸಿದ್ಧವಾಗಲಿದೆ.
| ಯೋಗಿ ಆದಿತ್ಯನಾಥ ಉತ್ತರಪ್ರದೇಶ ಸಿಎಂ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 4 =
Remember me
