ಹುಬ್ಬಳ್ಳಿ:ಕರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್​ಡೌನ್​ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ವಾಹನಗಳಷ್ಟೇ ಅಲ್ಲದೆ ವಿಮಾನಯಾನಕ್ಕೂ ತಡೆಯೊಡ್ಡಲಾಗಿತ್ತು. ಇದೀಗ ಅನ್​​ಲಾಕ್ ಹಿನ್ನೆಲೆಯಲ್ಲಿ ವಿಮಾನಯಾನಕ್ಕೂ ಅವಕಾಶ ಸಿಗಲಿದ್ದು, ಜುಲೈ 1ರಂದೇ ವಿಮಾನಗಳ ಹಾರಾಟ ಪುನಃ ಆರಂಭವಾಗಲಿದೆ.
ಹುಬ್ಬಳ್ಳಿ ವಿಮಾನನಿಲ್ದಾಣದಿಂದ ಇಂಡಿಗೋ ಏರ್​ಲೈನ್ಸ್​ ಹಾಗೂ ಅಲಯನ್ಸ್​ ಏರ್​ ಸಂಸ್ಥೆಗಳು ವಿಮಾನ ಹಾರಾಟ ಮತ್ತೆ ಪ್ರಾರಂಭಿಸಲಿರುವ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂತೋಷ ವ್ಯಕ್ತಪಡಿಸಿ, ಶುಭವನ್ನೂ ಕೋರಿದ್ದಾರೆ. ಜತೆಗೆ ಸಾರ್ವಜನಿಕರೂ ಇದರ ಸದುಪಯೋಗ ಪಡೆಯಬೇಕು ಎಂಬುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ:ಹತ್ತು ಸಾವಿರ ಪಾರಿವಾಳಗಳು ನಾಪತ್ತೆ!; ಕಾರಣವಿನ್ನೂ ನಿಗೂಢ..
ಅನ್​ಲಾಕ್​ 2.0 ಪರಿಣಾಮ ವಿಮಾನಯಾನಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಜುಲೈ 1ರಂದೇ ಬಹಳಷ್ಟು ಕಡೆಗೆ ವಿಮಾನಯಾನ ಆರಂಭವಾಗಲಿದೆ. ಈ ಕುರಿತು ಕೇಂದ್ರ ಸಚಿವರು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿ ಜನರ ಗಮನ ಸೆಳೆದಿದ್ದಾರೆ. ಜುಲೈ 1ರಂದು ಹುಬ್ಬಳ್ಳಿಯಿಂದ ಮುಂಬೈ, ಚೆನ್ನೈ, ಬೆಂಗಳೂರು, ಕಣ್ಣೂರ್, ಕೊಚ್ಚಿ, ಗೋವಾಗಳಿಗೆ, 9ರಂದು ಹೈದರಾಬಾದ್​ಗೆ ವಿಮಾನ ಹಾರಾಟ ನಡೆಸಲಿದೆ. ಆಗಸ್ಟ್ 2ರಂದು ಹುಬ್ಬಳ್ಳಿಯಿಂದ ಅಹಮದಾಬಾದ್​ಗೆ ವಿಮಾನ ಹಾರಾಟ ಮರು ಆರಂಭವಾಗಲಿದೆ.
ಇದನ್ನೂ ಓದಿ:ತಮ್ಮನ ಮದ್ವೆಗಾಗಿ 2 ದಿನ ರಜೆ ತೆಗೆದುಕೊಳ್ಳಲಿಕ್ಕೂ ಪತ್ರ ಬರೆದು ಕೋರಿಕೊಂಡ ಗ್ರಾಮ ಪಂಚಾಯತ್ ಸದಸ್ಯ!
ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಇಂಡಿಗೋ ಏರ್​ಲೈನ್ಸ್​ (https://www.goindigo.in) ಅಲಯನ್ಸ್​ ಏರ್​ (https://www.airindia.in/alliance-air.htm) ಸಂಸ್ಥೆಗಳ ಅಧಿಕೃತ ಜಾಲತಾಣಗಳನ್ನು ವೀಕ್ಷಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
ದಿನಾಂಕ 1 ಜುಲೈ , ರಿಂದಹುಬ್ಬಳ್ಳಿ – ಮುಂಬೈಹುಬ್ಬಳ್ಳಿ – ಚೆನ್ನೈಹುಬ್ಬಳ್ಳಿ – ಬೆಂಗಳೂರುಹುಬ್ಬಳ್ಳಿ – ಕಣ್ಣೂರ್ಹುಬ್ಬಳ್ಳಿ – ಕೊಚ್ಚಿಹುಬ್ಬಳ್ಳಿ – ಗೋವಾ 2 ಆಗಸ್ಟ್ , ರಿಂದಹುಬ್ಬಳ್ಳಿ – ಅಹಮದಾಬಾದ್@IndiGo6Eವಿಮಾನ ಸಂಚಾರ ಹಾಗುpic.twitter.com/7udq8hXoNK
— Pralhad Joshi (@JoshiPralhad)June 27, 2021

ಈ ರೋಗ ಮಕ್ಕಳಲ್ಲಿ ಕಂಡುಬಂದಿರುವುದು ಇದೇ ಮೊದಲು!; ಇದರಲ್ಲಿ ಶೇ. 60ರಷ್ಟಿದೆ ಸಾವಿನ ಸಾಧ್ಯತೆ!

ನೀವು ಈ ಬ್ಯಾಂಕ್​ ಖಾತೆದಾರರಾಗಿದ್ದರೆ ಇತ್ತ ಸ್ವಲ್ಪ ಗಮನಹರಿಸಿ; ಐಎಫ್​ಎಸ್​ಸಿ ಬದಲಾಗಿದೆ ಗಮನಿಸಿ..

ಒಬ್ಬನಿಗೆ ಅಪ್ಪ-ಅಮ್ಮನ ಬಗ್ಗೆ ಪ್ರೀತಿ, ಇನ್ನೊಬ್ಬನಿಗೆ ದ್ವೇಷ; ಇಬ್ಬರೂ ಸೇರಿ ಮಾಡಿದ್ರು ಬ್ಯಾಂಕ್ ಲೂಟಿ!

ರಾಜ್ಯದಲ್ಲಿ ಕರೊನಾ ಸಕ್ರಿಯ ಪ್ರಕರಣಗಳೆಷ್ಟು ಗೊತ್ತೇ? ಈ ಅಂಕಿ-ಅಂಶ ನೋಡಿದರೆ ನೀವಾಗಬಹುದು ನಿರಾಳ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
