ನವದೆಹಲಿ:ಕೇರಳದ ಕೋಳಿಕ್ಕೋಡ್​ನಲ್ಲಿ ದುರಂತಕ್ಕೀಡಾದ ವಿಮಾನವನ್ನು ರನ್​ವೇಯಲ್ಲಿ ಇಳಿಸಲು ಎರಡು ಬಾರಿ ಪ್ರಯತ್ನಿಸಲಾಗಿತ್ತು…!ದುಬೈಯಿಂದ ಆಗಮಿಸಿದ್ದ ಏರ್​ ಇಂಡಿಯಾ ಏಕ್ಸ್​ಪ್ರೆಸ್​ ವಿಮಾನದಲ್ಲಿ ಒಟ್ಟು 174 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್​ಗಳು ಸೇರಿ 6 ಸಿಬ್ಬಂದಿ ಇದ್ದರು. ಸಂಜೆ 7.40 ಕ್ರ್ಯಾಷ್​ ಲ್ಯಾಂಡಿಂಗ್​ ಆದ ವಿಮಾನ ಕಮರಿಗೆ ಬಿದ್ದು ಎರಡು ತುಂಡಾಗಿದೆ.
ಮಂಗಳೂರಿನಂತೆ ಟೇಬಲ್​ ಟಾಪ್​ ವಿಮಾನ ನಿಲ್ದಾಣವಾಗಿರುವ ಕೋಳಿಕ್ಕೋಡ್​ನ ನಿಲ್ದಾಣದ ರನ್​ವೇಯಲ್ಲಿ ವಿಮಾನವನ್ನು ಇಳಿಸಲು ಪೈಲಟ್​ ಎರಡು ಬಾರಿ ಪ್ರಯತ್ನಿಸಿದ್ದಾಗಿ ಗ್ಲೋಬಲ್​ ಫ್ಲೈಟ್​ ಟ್ರ್ಯಾಕರ್​ ವೆಬ್​ಸೈಟ್​ ವರದಿ ಮಾಡಿದೆ.
ಇದನ್ನೂ ಓದಿ;ತಾಯ್ನೆಲ ಸ್ಪರ್ಶಿಸಲು ಹಾತೊರೆದವರಿಗೆ ಕಾಡಿತ್ತು ದುಃಸ್ವಪ್ನ; ‘ವಂದೇ ಭಾರತ’ ವಿಮಾನವದು; ಟೇಬಲ್​ ಟಾಪ್​ ನಿಲ್ದಾಣದಲ್ಲಿ ಮತ್ತೊಂದು ದುರಂತ
ಫ್ಲೈಟ್​ ರಾಡಾರ್​ 24 ಎಂಬ ಸ್ವಿಡಿಷ್​ ಕಂಪನಿ ಈ ಮಾಹಿತಿ ನೀಡಿದೆ. ಇದು ವಾಣಿಜ್ಯ ವಿಮಾನಗಳ ರಿಯಲ್​ ಟೈಮ್​ ಮಾಹಿತಿಯನ್ನು ನೀಡುತ್ತದೆ.ವಿಮಾನ ಇಳಿಸುವ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿತ್ತು ಎನ್ನಲಾಗಿದೆ. ಅಲ್ಲದೇ, ವಿಸಿಬಿಲಿಟಿ ಕೂಡ ಕೂಡ ಕಡಿಮೆಯಿತ್ತು. ಈ ಎಲ್ಲ ಕಾರಣಗಳಿಂದಾಗಿ ಸೂಕ್ತವಾಗಿ ಲ್ಯಾಂಡಿಂಗ್​ ಮಾಡಲು ಸಾಧ್ಯವಾಗದೇ ದುರಂತ ಸಂಭವಿಸಿರಬಹುದು ಎಂದು ಹೇಳಲಾಗಿದೆ.
ಪಾಕ್​ ವಿಮಾನದ ಕಥೆಯೂ ಇದೇ ಆಗಿತ್ತು; ಇಳಿಯುವ ಕೆಲ ಕ್ಷಣಗಳ ಮುನ್ನ ಸಂಭವಿಸಿದ್ದ ದುರಂತ; 98 ಮಂದಿ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 7 =
Remember me
