ಮುಂಬೈ:ವಾಣಿಜ್ಯ ನಗರಿ ಮುಂಬೈನ ಗೇಟ್​ವೇ ಸೇರಿದಂತೆ ನಗರದ ಹಲವು ಭಾಗಗಳು ಶನಿವಾರ ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಆನ್​ಲೈನ್​​ ಶಾಪಿಂಗ್ ದೈತ್ಯ ಫ್ಲಿಪ್​ಕಾರ್ಟ್​ಗೆ ಸೇರಿದ ವಾಹನವೊಂದು ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಲನಚಿತ್ರದ ದೃಶ್ಯದಂತೆ ಎರಡು ಸಾವಿರ ಮುಖಬೆಲೆಯ ನೋಟುಗಳು ಗಾಳಿಯಲ್ಲಿ ತೇಲಿಬರುತ್ತಿದ್ದರೆ, ಜನರು ಕುತೂಹಲಭರಿತರಾಗಿ ನೋಡುತ್ತಿರುವುದು ಕಂಡು ಬರುತ್ತದೆ. ಅಕ್ಟೋಬರ್​ 8ರಿಂದ ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಆರಂಭವಾಗಲಿದ್ದು, ಅದರ ಪ್ರಚಾರಕ್ಕಾಗಿ ಈ ರೀತಿ ಮಾಡಿತೇ ಎಂದು ಹಲವರು ಪ್ರಶ್ನಿಸಿದ್ದಾರೆ.
What just happed???@Flipkart#PaisoKiBaarishpic.twitter.com/1hzRDDTqib
ಇದನ್ನೂ ಓದಿ:ಛತ್ತೀಸ್​ಗಢದಲ್ಲಿ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುತ್ತೇವೆ: ಪ್ರಿಯಾಂಕ ಗಾಂಧಿ
ವೈರಲ್​ ಆಗಿರುವ ವಿಡಿಯೋದಲ್ಲಿ ಫ್ಲಿಪ್​ಕಾರ್ಟ್​ ಕಂಪನಿಗೆ ಸೇರಿದ ವಾಹನವೊಂದು ವಾಣಿಜ್ಯ ನಗರಿ ಮುಂಬೈನ ಪ್ರಮುಖ ಬೀದಿಗಳಲ್ಲಿ ಎರಡು ಸಾವರಿ ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ತೂರುತ್ತಾ ಹೋಗುತ್ತಿರುವುದು ಕಂಡು ಬರುತ್ತದೆ. ರಸ್ತೆ ಬದಿಗಳಲ್ಲಿ ಇದನ್ನು ನೋಡುತ್ತಾ ಜನರು ಸುಮ್ಮನೆ ನಿಂತಿರುವುದು ಕಂಡು ಬರುತ್ತದೆ.
ಇದು ಆಕಸ್ಮಿವಾಗಿ ಆಯಿತೇ ಅಥವಾ ಪ್ರಚಾರಕ್ಕಾಗಿ ಕಂಪನಿ ಈ ರೀತಿ ಮಾಡಿತೇ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಫ್ಲಿಪ್ ಕಾರ್ಟ್, ಸದ್ಯದಲ್ಲೇ ಸ್ಪಷ್ಟನೆ ನೀಡಲಿದ್ದೇವೆ ಎಂದು ತಿಳಿಸಿದೆ. ಅಂದಹಾಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯಾನ್ ಡೇಸ್ ಸೇಲ್ ಅಭಿಯಾನ ಅಕ್ಟೋಬರ್ 8 ರಿಂದ 15ರವರೆಗೆ ನಡೆಯಲಿದೆ.
We didn’t see this baarish coming. Our DMs are flooded, We’re solving the puzzle. 🤔💦#PaisoKiBaarish#WOWpic.twitter.com/WEggAU6i6i
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
