ಫ್ಲೊರಿಡಾ:ಫ್ಲೊರಿಡಾದ ಕೋರ್ಟ್​ ಆವರಣದಲ್ಲಿ ನಿನ್ನೆ ಏಕಾಏಕಿ ಜಮಾಯಿಸಿದ ಕೆಲವು ಯುವಕ- ಯುವತಿಯರು ಇದ್ದಕ್ಕಿದ್ದಂತೆಯೇ ವ್ಯಾಯಾಮದಲ್ಲಿ ತೊಡಗಿಸಿಕೊಂಡರು. ಅಲ್ಲಿದ್ದವರಿಗೆ ಅಚ್ಚರಿಯೋ ಅಚ್ಚರಿ.
ನಮನಮೂನೆಯ ವ್ಯಾಯಾಮ, ಜಿಮ್ನಾಸ್ಟಿಕ್​ ಎಲ್ಲವೂ ಅಲ್ಲಿ ನಡೆದವು. ಕೋರ್ಟ್​ಗೆ ನ್ಯಾಯಮೂರ್ತಿಗಳು ಬರುತ್ತಿದ್ದಂತೆಯೇ ಇವರ ಎಕ್ಸಸೈಸ್​ ಇನ್ನೂ ಜೋರಾಯಿತು.
ಇದನ್ನೂ ಓದಿ:ಕಂಟೈನ್​ಮೆಂಟ್​ ಝೋನ್​ನಿಂದಲೇ ಕೇಕೇ ಹಾಕುತ್ತಿದೆ ಕರೊನಾ!
ಅಷ್ಟಕ್ಕೂ ಇವರೆಲ್ಲಾ ಹೀಗೆ ಏಕಾಏಕಿ ಕೋರ್ಟ್​ ಆರಣದ ಮುಂದೆ ದಾಳಿ ನಡೆಸಿರುವುದಕ್ಕೆ ಕಾರಣ, ಅಲ್ಲಿಯ ಫಿಟ್ನೆಸ್​ ಕೇಂದ್ರಗಳನ್ನು ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಚ್ಚಿರುವುದು! ಹೌದು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಕರೊನಾ ವೈರಸ್​ ಸೋಂಕು ಶೀಘ್ರದಲ್ಲಿ ಹರಡುವಲ್ಲಿ ಇಂಥ ಕೇಂದ್ರಗಳದ್ದು ದೊಡ್ಡ ಪಾಲು ಇದೆ ಎಂಬ ಕಾರಣಕ್ಕೆ ಎಲ್ಲಾ ಕಡೆಗಳಂತೆ ಅಮೆಕದಾದ್ಯಂತ ಫಿಟ್​ನೆಟ್​ ಕೇಂದ್ರ, ಜಿಮ್ನಾಸ್ಟಿಕ್ ಕೇಂದ್ರಗಳನ್ನು ಮುಚ್ಚಲಾಗಿದೆ.
ಕಳೆದ ವಾರ ಇದನ್ನು ತೆರೆಯುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಕರೊನಾ ವೈರಸ್​ ಹರಡುವಿಕೆ ಇನ್ನಷ್ಟು ಭೀಕರ ಆಗಿರುವ ಹಿನ್ನೆಲೆಯಲ್ಲಿ ಇದನ್ನು ತೆರೆಯಬಾರದು ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ:ಸತ್ತರೂ ಚಿಂತೆಯಿಲ್ಲ, ಮಾಸ್ಕ್​ ಹಾಕದೇ ಸೇವೆ ಸಲ್ಲಿಸು ಎಂದು ವೈದ್ಯನಿಗೆ ಅಪ್ಪ ಹೇಳಿದ್ದೇಕೆ?
ಇದರಿಂದ ಹಲವಾರು ಉದ್ಯೋಗಿಗಳಿಗೆ ಚಿಂತೆ ಕಾಡಿದೆ. ​ ಹಲವು ವಾರ ಕಳೆದರೂ ಫಿಟ್ನೆಸ್ ಕೇಂದ್ರ ತೆರೆಯದ್ದರಿಂದ ತಾಳ್ಮೆ ಕಳೆದುಕೊಂಡ ಫಿಟ್ನೆಸ್ ಉತ್ಸಾಹಿಗಳು ಬೀದಿಗಿಳಿದು ಪ್ರತಿಭಟಿಸಿದ್ದೂ ಆಯ್ತು. ಫಿಟ್ನೆಸ್ ಕೇಂದ್ರ ತೆರೆಯುವಂತೆ ಬ್ಯಾನರ್, ಫಲಕ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು ಆದರೆ ಅದಕ್ಕೆ ಸರ್ಕಾರ ಹೆಚ್ಚಿನ ತಲೆ ಕೆಡಿಸಿಕೊಳ್ಳದ ಕಾರಣ, ಕೋರ್ಟ್​ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.
ಸುಮ್ಮನೆ ಘೋಷಣೆ ಕೂಗಿದರೆ ಪ್ರಯೋಜನ ಇಲ್ಲ ಎಂದುಕೊಂಡು ಘೋಷಣೆ ಜತೆ, ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಈ ಪ್ರತಿಭಟನೆಗಾದರೂ ಸರ್ಕಾರ ಜಗ್ಗಲಿ, ತಮ್ಮ ಗೋಳು ಆಲಿಸಲಿ ಎನ್ನುವುದು ಇವರ ಅಂಬೋಣ. ಇದರ ವೀಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ.(ಏಜೆನ್ಸೀಸ್​)
Here’s the group demonstrators in Florida doing push-ups on the street and calling for gyms to reopenpic.twitter.com/5aDyMgwhHu
— Salvador Hernandez (@SalHernandez)May 11, 2020

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × three =
Remember me
