ಫ್ಲೋರಿಡಾ:ಪಟ್ಟಣಕ್ಕೆ ಬಂದು, ರಸ್ತೆಯಲ್ಲೆಲ್ಲ ಓಡಾಡುತ್ತ, ಸ್ಥಳೀಯ ಜನರಲ್ಲಿ ಭಯ ಹುಟ್ಟಿಸಿದ ಕರಡಿಯನ್ನು ವಿಭಿನ್ನ ಮಾರ್ಗದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಿನಿಂದ ನಾಡಿಗೆ ಬಂದು ಆತಂಕ ಸೃಷ್ಟಿಸಿದ ಕರಡಿಯನ್ನು ಬಂಧನಕ್ಕೆ ಅಧಿಕಾರಿಗಳು ಕಂಡುಕೊಂಡ ವಿಧಾನ ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಅಂದಹಾಗೆ ಘಟನೆ ನಡೆದಿದ್ದು ಅಮೆರಿಕದ ಫ್ಲೋರಿಡಾದಲ್ಲಿ. ಮಂಗಳವಾರ ಸುಮಾರು 113 ಕೆಜಿ ತೂಕವಿರುವ ಕಡುಗಪ್ಪು ಕರಡಿಯೊಂದು ನಗರಕ್ಕೆ ಬಂದು, ಕರಾವಳಿಯ ಸುತ್ತಮುತ್ತ ನಗರಗಳಲ್ಲಿ ಬಿಂದಾಸ್ ಆಗಿ ಓಡಾಡಲು ತೊಡಗಿತ್ತು. ಯಾವುದೇ ಭಯವಿಲ್ಲದೆ, ರಸ್ತೆಗಳೆಲ್ಲ ತನ್ನದೇ ಎನ್ನುವ ರೀತಿಯಲ್ಲಿ ರಾಜಾರೋಷವಾಗಿ ನಡೆಯುತ್ತಿತ್ತು. ಕರಡಿಗಳು ಆಹಾರ ಹುಡುಕಲು ಅಲೆಯುವುದು ಸಾಮಾನ್ಯ. ಅದರಲ್ಲು ವಸಂತ ಋತುವಿನಲ್ಲಿ ಸಂಗಾತಿಯನ್ನು ಹುಡುಕಲು ಒಂದು ಪ್ರದೇಶದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತವೆ. ಈ ಕರಡಿ ಕೂಡ ಅದೇ ಕಾರಣದಿಂದಲೇ ಇರಬಹುದು ಎಲ್ಲಿಗೋ ಹೋಗಬೇಕಾದದ್ದು, ನಗರಕ್ಕೆ ಬಂದು ತಿರುಗಲು ಪ್ರಾರಂಭಿಸಿತ್ತು.
ಮುಂದೆ ಅದರ ಸೆರೆ ಹಿಡಿಯಲು ಹೇಗೆ ಕಾರ್ಯಾಚರಣೆ ನಡೆಸಲಾಯಿತು ಎಂಬುದನ್ನು ಫ್ಲೋರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗದ ಅಧಿಕಾರಿ ಆಡಂ ಬ್ರೌನ್​ ತಿಳಿಸಿದ್ದಾರೆ.
ಇದನ್ನೂ ಓದಿ:ಸಿಆರ್​ಪಿಎಫ್​ನ 400 ಸಿಬ್ಬಂದಿ ಹತ್ಯೆಗೆ ಉಗ್ರರು ತಂದಿದ್ದರು ಕಾರು ಬಾಂಬ್​
ಹೀಗಿ ಜನ, ವಾಹನ ನಿಬಿಡ ಪ್ರದೇಶಕ್ಕೆ ಬಂದ ಕರಡಿಯನ್ನು ಸೆರೆಹಿಡಿಯಲೇಬೇಕಿತ್ತು. ಹಾಗೇ ಬಿಡುವಂತೆ ಇರಲಿಲ್ಲ. ಆದರೆ ಹಿಡಿಯುವುದು ಸುಲಭವೂ ಆಗಿರಲಿಲ್ಲ. ಅರಿವಳಿಕೆ ಕೊಡೊಣವೆಂದರೆ ಅದು ಕರಡಿ. ನಗರ ಪ್ರದೇಶಗಳಿಗೆ ಬಂದ ದೊಡ್ಡ ಕಾಡುಪ್ರಾಣಿಗಳನ್ನು ಹಿಡಿಯುವಾಗ ಅರಿವಳಿಕೆ ಔಷಧಗಳು ಅಷ್ಟು ಸುರಕ್ಷಿತವಲ್ಲ. ಒಮ್ಮೆ ಅದು ತಾಗದೆ ಇದ್ದರೆ ಪ್ರಾಣಿಗಳೂ ರೊಚ್ಚಿಗೆದ್ದು, ಮತ್ತಷ್ಟು ಅವಾಂತರ ಸೃಷ್ಟಿಸುವ ಸಂಭವ ಇರುತ್ತದೆ. ಈ ಕರಡಿಯ ವಿಚಾರದಲ್ಲೂ ನಾವು ಆ ಪ್ರಯೋಗ ಮಾಡಲು ಸಿದ್ಧ ಇರಲಿಲ್ಲ. ಅದು ಟ್ರಾಫಿಕ್​ನಲ್ಲಿ ಓಡದಂತೆ, ಯಾರ ಮೇಲಾದರೂ ದಾಳಿ ನಡೆಸದಂತೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಬೇಕಿತ್ತು.
ಹಾಗಾಗಿ ನಾವು ಬೇರೆಯದೇ ಮಾರ್ಗ ಕಂಡುಕೊಂಡೆವು. ಡೋನಟ್​ ಕೇಕ್​​ನ ಆಮಿಷ ತೋರಿಸಿದೆವು. ಕ್ರಿಸ್ಪಿ ಕ್ರೀಮ್ ಒಳಗೊಂಡ​ ಹಾಗೂ ಬ್ಲ್ಯೂ ಬೆರ್ರಿ ಸುವಾಸನೆಯುಳ್ಳ ಡೋನಟ್​ ಕೇಕ್​ ಬಳಸಿ ಕರಡಿಯನ್ನು ಹಿಡಿದಿದ್ದೇವೆ ಎಂದು ಆಡಂ ಬ್ರೌನ್​ ಹೇಳಿದ್ದಾರೆ.
ನಂತರ ಕರಡಿಯನ್ನು ಸರ್ಕಾರಿ ಆಡಳಿತದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗೇ ಜನರು ರಾತ್ರಿ ಹೊತ್ತಲ್ಲಿ ಕಸದ ಚೀಲ, ಡಸ್ಟ್​ಬಿನ್​​ಗಳನ್ನು ಹೊರಗೆ ಇಡಬೇಡಿ. ಕಾಡು ಪ್ರದೇಶಕ್ಕೆ ಸಮೀಪ ಇರುವ ಮನೆಗಳು ಹೀಗೆ ರಾತ್ರಿ ಕಸವನ್ನು ಹೊರಗೆ ಇಡುವುದರಿಂದ ಕರಡಿಗಳು ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:‘ನಮ್ಮ ತಲೆಯನ್ನು ನಾವೇ ನೇಣಿನ ಕುಣಿಕೆಗೆ ಹಾಕಿಕೊಳ್ಳುವಷ್ಟು ನಾಚಿಕೆಯ ವಿಷಯ ಇದು…’: ಕಪಿಲ್​ ಸಿಬಲ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
